Mysore
32
scattered clouds

Social Media

ಭಾನುವಾರ, 27 ಏಪ್ರಿಲ 2025
Light
Dark

ಸಂತ್ರಸ್ತೆಯರ ವೀಡಿಯೋ ಹರಿಬಿಡಬೇಡಿ : ಪ್ರೀತಮ್‌ ಗೌಡ ಮನವಿ

ಹಾಸನ : ಹಾಸನ ಪೆಂಡ್ರೈವ್‌ಗೆ ಸಂಬಂಧಿಸಿದಂತೆ ಸಂತ್ರಸ್ತೆಯರ ವಿಡಿಯೋಗಳನ್ನು ಯಾರು ಹರಿಬಿಡಬೇಡಿ ಎಂದು ಸಾರ್ವಜನಿಕರನ್ನು ಮಾಜಿ ಶಾಸಕ ಪ್ರೀತಮ್‌ ಗೌಡ ಮನವಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತ್ರಸ್ತೆಯರ ವಿಡಿಯೋಗಳು ಸಾಮಾಜಿಕವಾಗಿ ಹಂಚಿಕೆಯಾಗದಂತೆ ನೋಡಿಕೊಳ್ಳುವ ಸಾಮಾಜಿಕ ಜವಬ್ಧಾರಿ ನಮ್ಮೆಲ್ಲರ ಮೇಲೆ ಇದೆ ಎಂದು ಹೇಳಿದರು.

ವಿಡಿಯೋ ಹಂಚಿಕೆಯಾಗದಂತೆ ಪ್ರಾಮಾಣಿಕವಾಗಿ ಹಾಗೂ ನಿಷ್ಟೂರವಾಗಿ ಕೆಲಸ ಮಾಡುತ್ತಿದ್ದೇನೆ. ಯಾರೇ ನನಗೆ ಕರೆ ಮಾಡಿದರು, ಒಂದು ವೇಳೆ ಅವರ ಬಳಿ ವಿಡಿಯೋ ಇದ್ದರೆ ಅದನ್ನು ಡಿಲಿಟ್‌ ಮಾಡುವಂತೆ ಹೇಳುತ್ತಿದ್ದೇನೆ ಎಂದರು.

ವಿಡಿಯೋ ಹಂಚಿಕೆ ವಿಚಾರವಾಗಿ ಅಮಾಯಕರನ್ನು ಬಂಧನ ಮಾಡುವುದು ಸರಿಯಲ್ಲ. ಹಾಗಂತ ಹುಡುಕುತ್ತಾ ಹೋದರೆ ಹಾಸನ ಜಿಲ್ಲೆ 15ಲಕ್ಷ ಜನರನ್ನು ಬಂಧನ ಮಾಡಬೇಕಾಗುತ್ತದೆ ಎಂದರು.

ಇನ್ನು ಪ್ರಜ್ವಲ್‌ ರೇವಣ್ಣ ಹಾಗೂ ರೇವಣ್ಣ ಅವರ ಬಂಧನ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇದು ನನ್ನ ಸ್ಪಷ್ಠ ನಿಲುವು ಎಂದು ತಿಳಿಸಿದರು.

 

Tags: