Mysore
25
overcast clouds
Light
Dark

ಬೆಂಗಳೂರಲ್ಲಿ ಮಕ್ಕಳ ಮಾರಾಟ ಮಾಡುತ್ತಿದ್ದ ಡೆಡ್ಲಿ ಜಾಲ ಪತ್ತೆ

ಬೆಂಗಳೂರು : ರಾಜ್ಯದಲ್ಲಿ ಭ್ರೂಣ ಹತ್ಯೆ ಪ್ರಕರಣ ಮಾಸುವ ಮುನ್ನವೇ ಮಕ್ಕಳನ್ನು ಮಾರಟ ಮಾಡುತ್ತಿದ್ದ ಡೆಡ್ಲಿ ಜಾಲವೊಂದು ಪತ್ತೆಯಾಗಿದ್ದು, ಸಿಸಿಬಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ವೇಳೆ ಹಸುಗೂಸುಗಳನ್ನು ಲಕ್ಷ ಲಕ್ಷ ಹಣಕ್ಕೆ ಮಾರಾಟ ಮಾಡುತ್ತಿರುವ ಸ್ಪೋಟಕ ವಿಚಾರ ಬೆಳಕಿಗೆ ಬಂದಿದೆ.

ಬೆಂಗಳೂರಿನ ರಾಜ ರಾಜೇಶ್ವರಿ ನಗರದಲ್ಲಿ 20 ದಿನದ ಹಸುಗೂಸನ್ನು ಮಾರಾಟ ಮಾಡುತ್ತಿದ್ದ ವೇಳೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಕಣ್ಣನ್‌ ರಾಮಸ್ವಾಮಿ, ಮುರುಗೇಶ್ವರಿ, ಹೇಮಲತಾ ಮತ್ತು ಶರಣ್ಯ ಬಂಧಿತ ಆರೋಪಿಗಳು.

ಸಧ್ಯ ಮಾರಾಟ ಮಾಡಲು ತಂದಿದ್ದ 20 ದಿನದ ಎಳೆಯ ಮಗುವನ್ನು ಪೊಲೀಸರು ರಕ್ಷಣೆ ಮಾಡಿದ್ದು, ಆರೋಪಿಗಳ ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ಆರೋಪಿಗಳು ಇನ್ನೂ ಹೆಚ್ಚಿನ ಮಕ್ಕಳನ್ನು ಇದೇ ರೀತಿ ಮಾರಾಟ ಮಾಡಿರುವ ಅನುಮಾನ ವ್ಯಕ್ತವಾಗಿದೆ.

ಈ ಖತರ್ನಾಕ್‌ ಗ್ಯಾಂಗ್‌ ಕೇವಲ 10 ರಿಂದ 20 ದಿನಗಳ ಹಸುಗೂಸುಗಳನ್ನು ಮಾರಾಟ ಮಾಡುತ್ತಿತ್ತು. ಮನೆಯಲ್ಲಿ ಆರ್ಥಿಕ ಸಂಕಷ್ಟ ಇರುವ ಗರ್ಭಿಣಿ ಮಹಿಳೆಯರನ್ನೇ ಟಾರ್ಗೆಟ್‌ ಮಾಡುತ್ತಿದ್ದ ಈ ಗ್ಯಾಂಗ್‌ ಮಗು ಹೆತ್ತು ಕೊಟ್ಟರೆ 3 ಲಕ್ಷ ರೂ. ಹಣ ಕೊಡುವುದಾಗಿ ಆಮಿಷವೊಡ್ಡಿ ಮಕ್ಕಳನ್ನು ಪಡೆಯುತ್ತಿದ್ದರು. ಅದಷ್ಟೇ ಅಲ್ಲದೇ ಅಬಾರ್ಷನ್‌ ಗೆ ಬರುವ ಮಹಿಳೆಯರನ್ನು ಪತ್ತೆ ಹಚ್ಚಿ ಅವರಿಗೂ ಕೂಡ ಇದೇ ರೀತಿಯ ಆಮಿಷ ಒಡ್ಡುತ್ತಿತ್ತು. ಹೀಗೆ ಪಡೆದ ಮಕ್ಕಳನ್ನು ಮಕ್ಕಳಿಲ್ಲದ ದಂಪತಿಗಳಿಗೆ 8 ರಿಂದ 10 ಲಕ್ಷ ರೂ. ಗೆ ಮಾರಾಟ ಮಾಡುತ್ತು. ಈ ಗ್ಯಾಂಗ್‌ ನೊಂದಿಗೆ ಕೆಲವು ಆಸ್ಪತ್ರೆಗಳು, ಐ ವಿ ಎಫ್‌ ಸೆಂಟರ್‌ ಗಳು ರಕ್ತ ಪರೀಕ್ಷೆ ಕೃಂದ್ರಗಳೂ ಕೂಡ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ