ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಶನ್‌ನ ಎರಡನೇ ಚಿತ್ರ ಕಾಟೇರ ಸೆಟ್ಟೇರಿದಾಗಿನಿಂದಲೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ರಾಬರ್ಟ್ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ರೂಲ್ ಮಾಡಿದ್ದ ಈ ಜೋಡಿ ಇದೀಗ 80ರ ದಶಕದ ಹಳ್ಳಿ ಕಥೆಯನ್ನು ಹೊತ್ತು ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ.
ಈ ಹಿಂದೆ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದ್ದ ಚಿತ್ರತಂಡ ಇಂದು ( ನವೆಂಬರ್ 29 ) ವಿಶೇಷ ಅನೌನ್ಸ್‌ಮೆಂಟ್ ವಿಡಿಯೊ ಬಿಡುಗಡೆ ಮಾಡುವ ಮೂಲಕ ಚಿತ್ರದ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ.
ಊಹೆಯಂತೆ ಕಾಟೇರ ಚಿತ್ರ ಡಿಸೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ. ಹೌದು, ಕಾಟೇರ ಡಿಸೆಂಬರ್ 29ರಂದು ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ಘೋಷಣೆಯಾಗಿದೆ.
ಇಂದು ವಿಶೇಷವಾಗಿ ಬಿಡುಗಡೆಗೊಂಡಿರುವ ವಿಡಿಯೊದಲ್ಲಿ ಹಳ್ಳಿಯ ಗುಂಡಿ ಬಿಚ್ಚಿದ ಶರ್ಟ್, ಪಂಚೆಯುಟ್ಟು ಕಾಣಿಸಿಕೊಂಡಿರುವ ದರ್ಶನ್ ವಿಭಿನ್ನವಾಗಿ ಬೀಡಿ ಹಚ್ಚುವ ದೃಶ್ಯದಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.