Mysore
29
scattered clouds

Social Media

ಸೋಮವಾರ, 15 ಜೂನ್ 2026
Light
Dark

ಕಾಂಗ್ರೆಸ್ಸಿಗರು ವಸೂಲಿ ದಂಧೆಯಲ್ಲಿ ಮುಳುಗಿಹೋಗಿದ್ದಾರೆ : ವಿಜಯೇಂದ್ರ ಕಿಡಿ

ಬೆಂಗಳೂರು : ಕಾಂಗ್ರೆಸ್ಸಿಗರು ಈಗ ವಸೂಲಿ ದಂಧೆಯಲ್ಲಿ 100% ಮುಳುಗಿ ಹೋಗಿದ್ದಾರೆ ಎಂದು ಶಿಕಾರಿಪುರದ ಶಾಸಕ, ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಕಾಲು ವರ್ಷವೂ ಕಳೆದಿಲ್ಲ ಆಗಲೇ ಕಂಟ್ರಾಕ್ಟ್ ಕಮೀಷನ್, ವರ್ಗಾವಣೆ ವ್ಯಾಪಾರದ ಹೊಲಸು ಮೈಗೆಲ್ಲಾ ಮೆತ್ತಿಸಿಕೊಳ್ಳುತ್ತಿದೆ. ಬಿಜೆಪಿ ಸರ್ಕಾರದ ಮೇಲೆ ಪರ್ಸೆಂಟೇಜ್ ಆರೋಪ ಹೊರಿಸುತ್ತಿದ್ದ ಕಾಂಗ್ರೆಸ್ಸಿಗರು ಇದೀಗ ವಸೂಲಿ ದಂಧೆಯಲ್ಲಿ 100% ಮುಳುಗಿ ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಕರ್ನಾಟಕ ಟ್ವೀಟ್‌ ಮಾಡಿ, ಕಲುಷಿತ ನೀರು ಸೇವಿಸಿ ಸಾರ್ವಜನಿಕರು ಸತ್ತರೆ ನಮ್ಮನ್ನು ಕೇಳಬೇಡಿ. ಆತ್ಮಹತ್ಯೆಯಿಂದ ರೈತರು ಸತ್ತರೆ ಚಿಂತಿಸಬೇಡಿ. ಭ್ರಷ್ಟಾಚಾರ ಮಾಡಿ ಕಮಿಷನ್ ಪಡೆಯಲು ನಾವ್ ರೆಡಿ, ನಾವ್ ರೆಡಿ. ಇದು #ATMSarkara ದ ನಿತ್ಯಗೀತೆ ಎಂದು ಬರೆದು ಟೀಕಿಸಿದೆ.

ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ನಾಯಕರು 40% ಕಮಿಷನ್‌ ಆರೋಪ ಮಾಡಿದ್ದರು. ಈಗ ಬಿಜೆಪಿ ನಾಯಕರು ಕಾಂಗ್ರೆಸ್‌ ಸರ್ಕಾರದ ವಿರುದ್ಧ 100% ಕಮಿಷನ್‌ ಆರೋಪ ಮಾಡಲು ಆರಂಭಿಸಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!