Mysore
24
scattered clouds

Social Media

ಗುರುವಾರ, 13 ನವೆಂಬರ್ 2025
Light
Dark

ಅನಿಲ ಸೋರಿಕೆಯಿಂದ ಮೃತಪಟ್ಟ ಕುಟುಂಬದವರ ಭೇಟಿಯಾದ ಸಿಎಂ: ಪರಿಹಾರ ಘೋಷಿಸಿದ ಹಣವೆಷ್ಟು?

ಮೈಸೂರು: ಇಲ್ಲಿನ ಯರಗನ ಹಳ್ಳಿಯಲ್ಲಿ ಅನಿಲ ಸೋರಿಕೆಯಿಂದ ಸಂಭವಿಸಿದ ಅನಾಹುತದಲ್ಲಿ ಮೃತರಾದ ಇಡೀ ಕುಟುಂಬದವರ ಮನೆಗೆ ಇಂದು (ಗುರುವಾರ, ಮೇ.23) ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಪರಿಶೀಲನೆ ನಡೆಸಿದರು.

ಬಳಿಕ ಮೃತರ ಸಂಬಂಧಿಗಳಿಗೆ ಸಾಂತ್ವನ ಹೇಳಿ ಮೃತ ಕುಟುಂಬಕ್ಕೆ ಸಂತಾಪ ಸಲ್ಲಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ ಮೃತರಿಗೆ ತಲಾ 3 ಲಕ್ಷ ರೂನಂತೆ ಕುಟುಂಬಕ್ಕೆ 12 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಮಾಧ್ಯಮಗಳ ಜತೆ ಮಾತನಾಡುತ್ತಾ ಸಿಎಂ ಸಿದ್ದರಾಮಯ್ಯ, ಅನಿಲ ಸೋರಿಕೆಯಿಂದ ಕುಮಾರಸ್ವಾಮಿ ಎಂಬುವವರ ಇಡೀ ಕುಟುಂಬ ಸಾವನ್ನಪ್ಪಿದೆ. ಅವರ ಹೆಂಡತಿ ಇಬ್ಬರು ಮಕ್ಕಳು ಮೃತರಾಗಿದ್ದಾರೆ. ಅವರ ತಂದೆ ತಿಮ್ಮಯ್ಯ ಕಡೂರು ತಾಲೂಕಿನವರು. ಇಲ್ಲಿಗೆ 20 ವರ್ಷಗಳ ಹಿಂದೆಯೇ ಬಂದು ನೆಲಸಿದ್ದಾರೆ. ಕಡು ಬಡತನದಿಂದ ಬಂದವರಾಗಿದ್ದಾರೆ. ಹಾಗಾಗಿ ಅವರೆಲ್ಲರಿಗೂ ಸಾಂತ್ವಾನ ಹೇಳಿ ಪರಿಹಾರ ಘೋಷಣೆ ಮಾಡಿದ್ದೇನೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು ಘೋಷಿಸಿದ್ದು, ಅದನ್ನು ನಾನು ಅನುಮೋದಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಮಾಧ್ಯಮಳಿಗೆ ಮಾಹಿತಿ ನೀಡಿದರು.

Tags:
error: Content is protected !!