Mysore
30
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ವರುಣನ ಅಬ್ಬರಕ್ಕೆ ತತ್ತರಿಸಿದ ಚೆನ್ನೈ : 11 ರೈಲು, 27 ವಿಮಾನಗಳ ಸಂಚಾರ ರದ್ದು

ಚೆನ್ನೈ : ವರುಣನ ಅಬ್ಬರಕ್ಕೆ ಚೆನ್ನೈ ಅಕ್ಷರಶಃ ತತ್ತರಿಸಿ ಹೋಗಿದೆ. ಮಿಚಾಂಗ್‌ ಚಂಡಮಾರುತದಿಂದಾಗಿ ಚೆನ್ನೈನಲ್ಲಿ ಮಳೆರಾಯ ಎಡಬಿಡದೆ ಸುರಿಯುತ್ತಿದ್ದಾನೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಗಿ ಹೋಗಿದೆ.

ಮಳೆರಾಯನ ಆರ್ಭಟಕ್ಕೆ ಮನೆಯ ಗೋಡೆ ಕುಸಿತವಾಗಿದ್ದು,ಇಬ್ಬರು ಸಾವಿಗೀಡಾಗಿದ್ದಾರೆ. ಮುಂಜಾಗೃತಾ ಕ್ರಮವಾಗಿ ಚನ್ನೈಗೆ ಸಂಚರಿಸುವ ರೈಲು ಹಾಗೂ ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಹಾಗಾಗಿ ಚೆನ್ನೈಗೆ ತೆರಳುವ ಪ್ರಯಾಣಿಕರು ಕಾರು ಅಥವಾ ಬಸ್ ಗಳಲ್ಲಿ ಪ್ರಯಾಣಿಸುತ್ತಿದ್ದಾರೆ.

ಸದ್ಯ ತಮಿಳುನಾಡು ಸರ್ಕಾರ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ರಕ್ಷಣಾ ಕರ್ಯವನ್ನು ಕೈಗೊಂಡಿದೆ. ಮಳೆಯಿಂದಾಗಿ ಚೆನ್ನೈ ವಿಮಾನ ನಿಲ್ದಾಣ ಸಂಪೂರ್ಣವಾಗಿ ಜಲಾವೃತ್ತವಾಗಿದ್ದು, ವಿಮಾನಗಳ ಹಾರಾಟವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

ಮಳೆರಾಯನ ರೌದ್ರ ನರ್ತನಕ್ಕೆ ಚೆನ್ನೈ ನ ಮರೀನಾ ಬೀಚ್‌ ಮುಳುಗಡೆಯಾಗಿದ್ದು, ಮನೆಗಳಿಗೂ ಸಹ ನೀರು ನುಗ್ಗಿದೆ. ಜನರು ತುರ್ತು ಅವಶ್ಯಕತೆಗಳಿಗೂ ಕೂಡ ಹೊರಪರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಶಾಲಾ ಕಾಲೇಜುಗಳಿಗೂ ಸಹ ರಜೆ ಘೋಷಣೆ ಮಾಡಲಾಗಿದೆ.

ಇನ್ನು ಚೆನ್ನೈನಲ್ಲಿ ಎದ್ದಿರುವ ಮಿಚಾಂಗ್‌ ಚಂಡಮಾರುತದಿಂದಾಗಿ ದಕ್ಷಿಣ ಕರ್ನಾಟಕದ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದೆ. ಬೆಂಗಳೂರು, ಮೈಸೂರು,ಚಾಮರಾಜನಗರ ಸೇರಿದಂತೆ ಇತರೆ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!