Mysore
26
broken clouds

Social Media

ಬುಧವಾರ, 15 ಜನವರಿ 2025
Light
Dark

ಬೆಂಗಳೂರು – ಮೈಸೂರು ಎಕ್ಸ್‌ ಪ್ರೆಸ್‌ ವೇ ಟೋಲ್‌ ದರ ಹೆಚ್ಚಳ : ಆದೇಶ ವಾಪಸ್‌ ಪಡೆದ ಹೆದ್ದಾರಿ ಪ್ರಾಧಿಕಾರ

ಮೈಸೂರು : ಬೆಂಗಳೂರು – ಮೈಸೂರು ಎಕ್ಸ್‌ ಪ್ರೆಸ್‌ ವೇ ಟೋಲ್‌ ದರ ಹೆಚ್ಚಳವನ್ನು ತಡೆಹಿಡಿಯಲಾಗಿದೆ.ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಧ್ಯಮ ಪ್ರಕಟಣೆ ಹೊರಡಿಸಿದೆ.ಸೋಷಿಯಲ್‌ ಮೀಡಿಯಾ ಮೂಲಕ ಸಂಸದ ಪ್ರತಾಪ್‌ ಸಿಂಹ ಸ್ಪಷ್ಟನೆ ನೀಡಿದ್ದಾರೆ.ಇಂದಿನಿಂದ ಬೆಂಗಳೂರು – ಮೈಸೂರು ಎಕ್ಸ್‌ ಪ್ರೆಸ್‌ ವೇ ಟೋಲ್‌ ದರವನ್ನು ಪರಿಷ್ಕರಿಸಿ ಹೆಚ್ಚಳ ಮಾಡಲಾಗಿತ್ತು.ಆದರೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ್ದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತನ್ನ ಆದೇಶವನ್ನ ವಾಪಸ್‌ ಪಡೆದಿದೆ.
ಈ ವಿಡಿಯೋ ಬಗ್ಗೆ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದ ಸಂಸದ ಪ್ರತಾಪ್‌ ಸಿಂಹ ಮಾರ್ಚ್‌ 14 ನೇ ತಾರೀಖು ಟೋಲ್‌ ದರ ಹೆಚ್ಚಳ ಮಾಡಿದಾಗ ಬೆಂಗಳೂರಿನಿಂದ ನಿಡಘಟ್ಟ 135 ರೂಪಾಯಿ ಟೋಲ್‌ ಧರ ನಿಗಧಿ ಪಡಿಸಿದ್ದು,ಅದನ್ನು ಇಂದಿನಿಂದ ಅನ್ವಯವಾಗುವ ರೀತಿಯಲ್ಲಿ 165 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.ಇಡೀ ದೇಶಾದ್ಯಂತ ಇರುವ ಎಲ್ಲಾ ಟೋಲ್‌ ರಸ್ತೆಗಳಲ್ಲಿ ಶೇ.7 ರಿಂದ ಒಂದಷ್ಟು ನಿಖರ ಬೆಲೆಯವರೆಗೆ ಹೆಚ್ಚಳ ಮಾಡಲಾಗಿದೆ.ಇದು ಕೇವಲ ಮೈಸೂರು – ಬೆಂಗಳೂರು ಎಕ್ಸ್‌ ಪ್ರೆಸ್‌ವೇ ಗೆ ಮಾತ್ರ ಅನ್ವಯವಾಗಿಲ್ಲ ಎಂದು ಸ್ಪಷ್ಟಪಡಿಸಿದರು.ಆದರೆ ಮೈಸೂರು-ಬೆಂಗಳೂರು ಎಕ್ಸ್‌ ಪ್ರೆಸ್‌ವೇ ನಲ್ಲಿ ಇನ್ನೂ ಕೆಲವು ಕಾಮಗಾರಿಗಳು ನಡೆಯುತ್ತಿರುವುದರಿಂದ ಈ ಎಕ್ಸ್‌ ಪ್ರೆಸ್‌ವೇಗೆ ಟೋಲ್‌ ದರ ಹೆಚ್ಚಳವಾಗುವುದು ಬೇಡ,ತಾತ್ಕಾಲಿಕವಾಗಿ ತಡೆಹಿಡಿಯಿರಿ ಎಂದು ನಾವು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದೆ ಎಂದಿದ್ದರು.
https://twitter.com/mepratap/status/1642016891060494338?s=20

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ