ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿಯೇ ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
2027ರ ವರೆಗೆ ಅಧಿಕಾರಾವಧಿ ಇದ್ದರೂ ಸಹಾ ದಿಢೀರನೇ ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯಲ್ ಅವರು ರಾಜೀನಾಮೆ ನೀಡಿದ್ದು, ಸದ್ಯ ಗೀಯಲ್ ಅವರು ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗೀಕರಿಸಿದ್ದಾರೆ.
ಚುನಾವಣಾ ಹಿನ್ನೆಲೆ ಸಂಪೂರ್ಣ ಜವಾಬ್ದಾರಿ ಸದ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್‌ಗೆ ಹಸ್ತಾಂತರಿಸಲಾಗಿದೆ.
ಅರುಣ್ ಗೋಯಲ್ ಅವರ ರಾಜೀನಾಮೆಯಿಂದಾಗಿ ಚುನಾವಣಾ ಘೋಷಣೆ ದಿನಾಂಕ ಮುಂದಕ್ಕೆ ಹೋಗಬಹುದು ಎಂದು ವರದಿಯಾಗಿದೆ.





