Mysore
24
mist

Social Media

ಗುರುವಾರ, 12 ಡಿಸೆಂಬರ್ 2024
Light
Dark

ದ.ಕನ್ನಡ, ಉಡುಪಿಯಿಂದ ಅಮರನಾಥ ಯಾತ್ರೆ ತೆರಳಿದ್ದ 20 ಯಾತ್ರಾರ್ಥಿಗಳು ಸೇಫ್

ಬಂಟ್ವಾಳ: ಅಮರನಾಥ ಯಾತ್ರೆ ಕೈಗೊಂಡಿದ್ದ ದ.ಕ‌‌.ಜಿಲ್ಲೆಯ ಬಂಟ್ವಾಳ ಸಹಿತ ವಿವಿಧ ತಾಲೂಕಿನ ಒಟ್ಟು 20 ಮಂದಿ ಯಾತ್ರಾರ್ಥಿಗಳು ಸೇಫ್ ಆಗಿ ಸಿ.ಆರ್.ಪಿ.ಎಫ್ ನ ಕ್ಯಾಂಪ್ ನಲ್ಲಿ ಇದ್ದೇವೆ ಎಂದು ತಂಡದ ನೇತೃತ್ವದ ವಹಿಸಿರುವ ನರಿಕೊಂಬಿನ ಸಂತೋಷ್ ಮಾರುತಿನಗರ ಅವರು ತಿಳಿಸಿದ್ದಾರೆ.

ಭೂಕುಸಿತದಿಂದ ಅಮರನಾಥ ಯಾತ್ರಿಗಳು ಪಾರಾದ ಬಗ್ಗೆ ವರದಿ ಬಂದ ಬೆನ್ನಲ್ಲೆ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಸಂತೋಷ್ ಎಂಬವರ ಜೊತೆ ಯಾತ್ರೆಗೆ ತೆರಳಿದ 20 ಮಂದಿ ಯಾತ್ರಾರ್ಥಿಗಳು ಯಾವುದೇ ತೊಂದರೆಯಿಲ್ಲದೆ ಸುರಕ್ಷಿತವಾಗಿದ್ದೇವೆ ಎಂದು ತಿಳಿಸಿದ್ದಾರೆ.

Amarnath Yatra temporarily suspended due to bad weather | Latest News India - Hindustan Times

ಅತಿಯಾದ ಮಳೆಗೆ ಭೂಕುಸಿತ ಕಂಡು ಬಂದಿದ್ದು ಯಾತ್ರಾರ್ಥಿಗಳು ಜಾಗರೂಕತೆಯಿಂದ ಇರುವಂತೆ ತಿಳಿಸಿದ್ದಾರೆ ಮತ್ತು ಸದ್ಯ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.

ರಂಭಾನ್ ಎಂಬ ಸ್ಥಳದಲ್ಲಿ ಗುಡ್ಡ ಕುಸಿತ ಕಂಡ ಹಿನ್ನೆಲೆಯಲ್ಲಿ ಅಮರನಾಥ ದೇವಾಲಯಕ್ಕೆ ತೆರಳುವ ದಾರಿ ಸಂಪೂರ್ಣ ಸ್ಥಗಿತಗೊಂಡಿದೆ.

ಮಣ್ಣು ತೆರವು ಕಾರ್ಯ ನಡೆಯುತ್ತಿದೆಯಾದರೂ ಮತ್ತೆ ಭೂಕುಸಿತ ಕಂಡು ಬರುವ ಅವಕಾಶಗಳು ಇರುವ ಹಿನ್ನೆಲೆಯಲ್ಲಿ ಸದ್ಯ ಯಾತ್ರೆಯನ್ನು ಸ್ಥಗಿತ ಮಾಡಿದ್ದಾರೆ.

ಸದ್ಯ ಸಂತೋಷ್ ನರಿಕೊಂಬು ಅವರನ್ನೊಳಗೊಂಡ 20 ಜನ ಯಾತ್ರಾರ್ಥಿಗಳ ತಂಡ ಭೂಕುಸಿತ ಕಂಡ ಕಾರಣ ಅಮರನಾಥ ದೇವಾಲಯಕ್ಕೂ ಹೋಗಲು ಸಾಧ್ಯವಾಗದೆ, ಅತ್ತ ಕೆಳಗೆ ಜಮ್ಮು ಕಾಶ್ಮೀರ ಕ್ಕೂ ಹೋಗಲು ಸಾಧ್ಯವಾಗದೆ ಸಿ.ಆರ್.ಪಿ.ಎಫ್ ಕ್ಯಾಂಪ್ ನಲ್ಲಿ ಸುರಕ್ಷಿತವಾಗಿ ಇದ್ದಾರೆ.

ಜುಲೈ 4ರಂದು ಟ್ರೈನ್ ಮೂಲಕ ಇವರು ಯಾತ್ರೆ ಕೈಗೊಂಡಿದ್ದು, ಅಮರನಾಥ ಯಾತ್ರೆ ಬಳಿಕ ವೈಷ್ಣೋದೇವಿ ಯಾತ್ರೆ ಮಾಡಲಿದ್ದಾರೆ.

ದ.ಕ.ಜಿಲ್ಲೆ ಹಾಗೂ ಉಡುಪಿ ಯಿಂದ ತೆರಳಿದ ತಾಲೂಕಿನ ಯಾತ್ರಾರ್ಥಿಗಳು:  ನರಿಕೊಂಬುನಿಂದ ಒಟ್ಟು 5 ಮಂದಿ, ಮಂಗಳೂರು ಅಡ್ಯಾರನಿಂದ 8 ಯಾತ್ರಾರ್ಥಿಗಳು, ಪುತ್ತೂರಿನಿಂದ 1, ಉಡುಪಿಯಿಂದ 1 , ಮೂಡಬಿರೆಯಿಂದ 1 , ಸಜೀಪದಿಂದ 3, ಉಪ್ಪಿನಂಗಡಿ ಕರಾಯದಿಂದ 1 ಹೀಗೆ ಒಟ್ಟು 20 ಯಾತ್ರಾರ್ಥಿಗಳು ಯಾತ್ರೆಗೆ ತೆರಳಿದ್ದಾರೆ.

ಕಳೆದ ಬಾರಿ ಇದೇ ರೀತಿಯಲ್ಲಿ ಭೂಕುಸಿತ ಕಂಡ ಸಂದರ್ಭದಲ್ಲಿ ಇಲ್ಲಿನ ಯಾತ್ರಾರ್ಥಿಗಳು ಅಲ್ಲಿ ಸಿಲುಕಿಕೊಂಡಿದ್ದರು.ಅ ಸಂದರ್ಭದಲ್ಲಿ ಕೂಡ ಸುರಕ್ಷಿತವಾಗಿ ಯಾವುದೇ ಸಮಸ್ಯೆ ಗಳಿಲ್ಲದೆ ಹಿಂದುರಿಗಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ