Mysore
27
scattered clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಸುತ್ತೂರು ಜಾತ್ರಾ ಮಹೋತ್ಸವದ ಸಾಮೂಹಿಕ ವಿವಾಹದಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ೧೧೮ ಜೋಡಿ

ಮೈಸೂರು: ಸುತ್ತೂರಿನ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಅಂಗವಾಗಿ ಸಾಮೂಹಿಕ ವಿವಾಹ  ನೆರವೇರಿತು.

ಸುತ್ತೂರು ಪೀಠಾಧಿಪತಿ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಕಾಗಿನೆಲೆ‌ ಕನಕಗುರು ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ತಿರುವನಂತಪುರ ಶಾಂತಗಿರಿ ಆಶ್ರಮದ ಪ್ರಧಾನ ಕಾರ್ಯದರ್ಶಿಗಳಾದ ಸ್ವಾಮಿ ಗುರುರತ್ನಂ ಜ್ಞಾನತಪಸ್ವಿ ಸೇರಿದಂತೆ ಹರಗುರುಚರಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ 118 ಜೋಡಿಗಳು ದಾಂಪತ್ಯ ಬದುಕಿಗೆ ಕಾಲಿಟ್ಟರು.

ವೀರಶೈವ ಲಿಂಗಾಯತ 04, ಪರಿಶಿಷ್ಟ ಜಾತಿ 61, ಪರಿಶಿಷ್ಟ ಪಂಗಡ 26, ಹಿಂದುಳಿದ ವರ್ಗ 18, ಅಂತರಜಾತಿ 11 ಸೇರಿದಂತೆ ಒಟ್ಟು 118 ಜೋಡಿಗಳು ಸತಿಪತಿಗಳಾದರು. ಒಟ್ಟು 118ರ ಪೈಕಿ ತಮಿಳುನಾಡಿನ ಜೋಡಿಗಳು 23, ವಿಶೇಷ ಚೇತನರು 04 ಹಾಗೂ ಒಂದು ಜೋಡಿ ಮರು ಮದುವೆ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಈ ವೇಳೆ ವೇದಿಕೆಯಲ್ಲಿ ಉದ್ಯಮಿ ಮೂಲಚಂದ್, ಶಾಸಕ ರಾಮಮೂರ್ತಿ, ಯುಎಸ್‌ಎ ಮೇರಿಲ್ಯಾಂಡ್ ನ ವಿ. ವೀರಪ್ಪನ್‌, ಅಮೇರಿಕಾದ ವಾಷಿಂಗ್ಟನ್ ನ ಶಿವಾನಂದ್ ಉಪಸ್ಥಿತರಿದ್ದರು.

2000 ರಿಂದ 2023ರವರಗೆ ಶ್ರೀ ಸುತ್ತೂರು ಕ್ಷೇತ್ರದಲ್ಲಿ ಜರುಗಿರುವ ಸಾಮೂಹಿಕ ವಿವಾಹದಲ್ಲಿ 3076 ಜೋಡಿಗಳು ಸತಿಪತಿಗಳಾಗಿದ್ದು, ಪ್ರತಿ ತಿಂಗಳು ಮಾಸಿಕ ವಿವಾಹ ಕಾರ್ಯಕ್ರಮದಲ್ಲಿ 2009 ರಿಂದ 457 ಜೋಡಿಗಳು ಸತಿಪತಿಗಳಾಗಿದ್ದಾರೆ. ಒಟ್ಟಾರೆ ಶ್ರೀ ಸುತ್ತೂರು ಕ್ಷೇತ್ರದಲ್ಲಿ ಇದುವರೆಗೆ ಒಟ್ಟು 3533 ಜೋಡಿಗಳು ವಿವಾಹವಾಗಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!