ಮಡಿಕೇರಿ : ಚುನಾವಣೆಯ ದಿನ ಮತ ಚಲಾಯಿಸಿ ಬಂದವರಿಗೆ ಶೇ 10ರಷ್ಟು ರಿಯಾಯಿತಿ ನೀಡಲು ಕೊಡಗು ಜಿಲ್ಲಾ ಹೋಟೆಲ್, ರೆಸಾರ್ಟ್ಸ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ನಿರ್ಧರಿಸಿದೆ. ಈ ನಿರ್ಧಾರದ ಬೆನ್ನಿಗೇ, ರಿಯಾಯಿತಿ ನೀಡಲು ಚಿಂತನೆ ನಡೆಸುತ್ತಿರುವುದಾಗಿ ಕೂರ್ಗ್ ಹೋಂಸ್ಟೇ ಅಸೋಸಿಯೇಷನ್ ಕೂಡ ತಿಳಿಸಿದೆ.
ಮತದಾನ ಮಾಡದೇ ಬರುವ ಕರ್ನಾಟಕದವರಿಗೆ ತಂಗಲು ಅವಕಾಶವಿಲ್ಲ. ಆದರೆ, ಮತದಾನ ಮಾಡಿ ಬಂದವರಿಗೆ ಶೇ 10ರಷ್ಟು ರಿಯಾಯಿತಿ ದೊರಕಲಿದೆ. ಅವರಿಗಷ್ಟೇ ಈ ನಿರ್ಬಂಧ, ರಿಯಾಯಿತಿ ಅನ್ವಯಿಸುತ್ತದೆ.
ಕೊಡಗಿನಲ್ಲಿರುವ 300ಕ್ಕೂ ಅಧಿಕ ಹೋಟೆಲ್, ರೆಸಾರ್ಟ್‌ಗಳಲ್ಲಿ ರಿಯಾಯಿತಿ ಸಿಗುತ್ತದೆ. ಹೋಂಸ್ಟೇ ಮಾಲೀಕರು ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ.ಇತ್ತೀಚೆಗೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಹೋಟೆಲ್ ಮಾಲೀಕರು ಹಾಗೂ ಹೋಂಸ್ಟೇ ಮಾಲೀಕರಲ್ಲಿ ಈ ಕುರಿತು ಮನವಿ ಮಾಡಿದ್ದರು.