Mysore
27
broken clouds
Light
Dark

Author: ಸುರೇಶ್‌ ಆರ್‌ ಕಂದೇಗಾಲ

Home/ಸುರೇಶ್‌ ಆರ್‌ ಕಂದೇಗಾಲ
ಸುರೇಶ್‌ ಆರ್‌ ಕಂದೇಗಾಲ

ಸುರೇಶ್‌ ಆರ್‌ ಕಂದೇಗಾಲ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಕಂದೇಗಾಲ ಗ್ರಾಮದವನಾದ ನಾನು, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಿಎ, ರಾಜ್ಯಶಾಸ್ತ್ರದಲ್ಲಿ ಎಂಎ ಪದವಿಯನ್ನು ಮಾಡಿದ್ದೇನೆ. ಇದರ ಜೊತೆಗೆ ಭಾರತೀಯ ಭಾಷಾ ಸಂಸ್ಥಾನದಲ್ಲಿ ಒಂದು ವರ್ಷದ ಮಲಯಾಳಂ ಭಾಷಾ ಅಧ್ಯಯನ, ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದಲ್ಲಿ ಕನ್ನಡ ಡಿಪ್ಲೊಮೊ ತರಬೇತಿ ಪಡೆದಿದ್ದೇನೆ. ವಿವಿಧ ದಿನಪತ್ರಿಕೆ, ಮಾಸ ಪತ್ರಿಕೆಗಳಲ್ಲಿ ಸಾಮಾಜಿಕ ಕಳಕಳಿವುಳ್ಳ ಹಲವಾರು ಲೇಖನಗಳನ್ನು ಬರೆದಿದ್ದೇನೆ. ಕಳೆದ 5 ವರ್ಷಗಳಿಂದ ಮೈಸೂರಿನ ಪ್ರತಿಷ್ಠಿತ ʼಆಂದೋಲನʼ ದಿನ ಪತ್ರಿಕೆಯಲ್ಲಿ ವರದಿಗಾರನಾಗಿ, ಉಪಸಂಪಾದಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಪುಸ್ತಕ ಓದುವುದರೊಂದಿಗೆ ಹಾಡುಗಾರಿಕೆ, ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿಯಿದ್ದು, ಕ್ರಿಕೆಟ್ ನೆಚ್ಚಿನ ಕ್ರೀಡೆಯಾಗಿದೆ.

ಗುಂಡ್ಲುಪೇಟೆ: ಶುಕ್ರವಾರ ಸಂಜೆ ಸುರಿದ ಭಾರೀ ಮಳೆಗೆ ರಸ್ತೆ ಬದಿಯ ಚರಂಡಿ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ. ತಾಲ್ಲೂಕಿನ ಪಾರ್ವತಿ ಬೆಟ್ಟದ ಕಂದೇಗಾಲ ಗ್ರಾಮದಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ರಸ್ತೆಗಳು, ಬಡಾವಣೆ ಕೆರೆಯಂತಾಗಿದೆ. ಪರಿಶಿಷ್ಟ …