Mysore
24
mist

Social Media

ಗುರುವಾರ, 12 ಡಿಸೆಂಬರ್ 2024
Light
Dark

ಸರಕಾರದ ಆದೇಶದಂತೆ ನಿರ್ದೇಶಕರಾಗಿ ಮುಂದುವರಿಕೆ

ನನ್ನ ಕೆಲಸದ ಕಾರ್ಯವೈಖರಿ ನೋಡಿ ಅವಧಿ ಮುಗಿದರೂ ಸರ್ಕಾರ ನನ್ನನ್ನು ಮುಂದುವರಿಸಿದೆ ಎಂದ ಅಡ್ಡಂಡ ಕಾರ್ಯಪ್ಪ

ಮೈಸೂರು: ಮೈಸೂರು ರಂಗಾಯಣದ ನಿರ್ದೇಶಕರಾಗಿ ಕಳೆದ ಮೂರು ವರ್ಷಗಳಲ್ಲಿ ರಂಗಾಯಣದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದ್ದೇನೆ. ನನ್ನ ಕೆಲಸದ ಕಾರ್ಯವೈಖರಿ ನೋಡಿ ಅವಧಿ ಮುಗಿದರೂ ಸರ್ಕಾರ ನನ್ನನ್ನು ಮುಂದುವರಿಸಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.

2019ರ ಡಿಸೆಂಬರ್‌ನಿಂದ 2022ರ ಡಿಸೆಂಬರ್ 27ಕ್ಕೆ ಮೂರು ವರ್ಷಗಳ ಅವಧಿ ಮುಗಿದಿದೆ. ಆದರೆ, ಸರ್ಕಾರದ ಆದೇಶದಲ್ಲಿ ಮೂರು ವರ್ಷಗಳ ಅವಧಿ ಉಲ್ಲೇಖಿಸಿಲ್ಲ. ಮುಂದಿನ ಆದೇಶದವರೆಗೆ ಅಧಿಕಾರ ಇರುತ್ತದೆ ಎನ್ನುವಂತೆ ಆದೇಶ ಹೊರಡಿಸಿರುವ ಕಾರಣ ಮುಂದುವರಿದಿದ್ದೇನೆ. ಇದರಲ್ಲಿ ಯಾವ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.

ಖ್ಯಾತ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರ ಪರ್ವ ಕಾದಂಬರಿಯನ್ನು ರಂಗರೂಪಕ್ಕಿಳಿಸಿ ಯಶಸ್ವಿ ಪ್ರದರ್ಶನ ಮಾಡಲಾಗಿದೆ. ಡಾ.ಚಂದ್ರಶೇಖರ ಕಂಬಾರ ಅವರ ಕೃತಿಯ ನಾಟಕ ಪ್ರದರ್ಶನಕ್ಕೆ ಅನುಮತಿ ಪಡೆಯಬೇಕೆಂದು ಹೇಳಿರಲಿಲ್ಲ. ಅವರೂ ಈ ವಿಚಾರದಲ್ಲಿ ಯಾವ ಮಾತನ್ನೂ ಹೇಳಿಲ್ಲ. ಪೊಲೀಸ್ ಠಾಣೆಗೆ ದೂರುಕೊಟ್ಟಿರುವ ವಿಚಾರ ಗೊತ್ತಾಗಿದೆ. ಪೊಲೀಸರು ಕೇಳಿದಾಗ ಏನು ನಡೆದಿದೆ ಎಂಬುದನ್ನು ಹೇಳುತ್ತೇನೆ. ಕಂಬಾರರು ಹಿರಿಯರು. ಅವರ ಬಗ್ಗೆ ಅತೀವ ಗೌರವವಿದೆ. ನಾಟಕದಲ್ಲಿ ಎಲ್ಲಿಯೂ ಯಾರನ್ನು ಕೆಟ್ಟದಾಗಿ ಬಿಂಬಿಸಿಲ್ಲ ಎಂದು ನುಡಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ