ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಇದು ಪ್ರಮುಖ ಸುದ್ದಿ.ಇಂಜಿನಿಯರಿಂಗ್ ಮತ್ತು ಇತರೆ ಕ್ಷೇತ್ರಗಳಲ್ಲಿ ಸ್ನಾತಕೋತ್ತರ ಅಧ್ಯಯನ ಮತ್ತು ಪಿಎಸ್‌ಯು ಉದ್ಯೋಗಗಳಿಗೆ GATE(ಗೇಟ್ ) ಪ್ರಮುಖ ಅರ್ಹತಾ ಪರೀಕ್ಷೆಯಾಗಿದೆ. ಇಂಡಿಯನ್ ಇನ್ಸ್‌ಟಿ ಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಗುವಾಹಟಿಯು ಗ್ರ್ಯಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿಂಗ್ (ಗೇಟ್) ೨೦೨೬ರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ ಗೇಟ್
೨೦೨೫ಕ್ಕಾಗಿ ನೋಂದಣಿ ಪ್ರಕ್ರಿಯೆ ಸಹ ಆರಂಭವಾಗಿದೆ. ಗೇಟ್ (GATE))೨೦೨೬ ಅನ್ನು ಐಐಟಿ ಗುವಾಹಟಿ ಆಯೋಜಿಸುತ್ತಿದೆ. ಹೀಗಾಗಿ ಐಐಟಿ ಗುವಾಹಟಿ ಗೇಟ್-೨೦೨೬ರ ಅಧಿಕೃತ ವೆಬ್ ಸೈಟ್‌ಗೆ ಭೇಟಿ ನೀಡುವ ಮೂಲಕ ನೋಂದಣಿ ಮಾಡಬಹುದು. ಗೇಟ್ ೨೦೨೬ಕ್ಕೆ ನೋಂದಾಯಿಸಲು ಸೆ.೨೮ ಕೊನೆಯ ದಿನಾಂಕ ಎಂದು ನಿಗದಿಪಡಿಸಲಾಗಿದ್ದು, ಸೆ.೨೮ರವರೆಗೆ ಆನ್ ಲೈನ್ ನೋಂದಣಿ ತೆರೆದಿರುತ್ತದೆ.
ಪರೀಕ್ಷೆಯು ೨೦೨೬ರ -.೭,೮,೧೪ ಮತ್ತು ೧೫ರಂದು ನಡೆಯಲಿದೆ. ಮಾ.೧೯ರಂದು ಫಲಿತಾಂಶ ಪ್ರಕಟವಾಗಲಿದೆ. ಆದರೂ ಪರೀಕ್ಷಾ ವೇಳಾಪಟ್ಟಿ ಬದಲಾಗುವ ಸಾಧ್ಯತೆ ಇದೆ ಎಂದು ಐಐಟಿ ಗುವಾಹಟಿ ತಿಳಿಸಿದೆ. ಹೀಗಾಗಿ ನಿಯಮಿತವಾಗಿ ಐಐಟಿ ಗುವಾಹಟಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಿರಿ. ಗೇಟ್ (GATE) ಎಂದರೇನು ಮತ್ತು ಪಿಎಸ್‌ಯು (PSU)ಗಳಲ್ಲಿ ಉದ್ಯೋಗ ಪಡೆಯಲು ಇದು ಹೇಗೆ ಅಗತ್ಯ? ಗೇಟ್ ರಾಷ್ಟ್ರಮಟ್ಟದ ಆಪ್ಟಿಟ್ಯೂಡ್ ಪರೀಕ್ಷೆಯಾಗಿದ್ದು, ಇದನ್ನು ಇಂಜಿನಿಯರಿಂಗ್, ವಿಜ್ಞಾನ, ವಾಣಿಜ್ಯ,ವಾಸ್ತುಶಿಲ್ಪ ಸೇರಿದಂತೆ ಮಾನವಿಕ ವಿಷಯಗಳಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತದೆ.
ಗೇಟ್ ಅನ್ನು ಐಐಟಿ (IIT) ಮತ್ತು ಐಐಎಸ್‌ಸಿ (IISc)ಗಳು ಜಂಟಿಯಾಗಿ ಆಯೋಜಿಸುತ್ತವೆ. ಐಐಟಿ ಮತ್ತು ಐಐಎಸ್‌ಸಿಗಳಲ್ಲಿ ಸ್ನಾತಕೋತ್ತರ ಅಥವಾ ಪಿಜಿ ಕಾರ್ಯಕ್ರಮಗಳಿಗೆ ಪ್ರವೇಶವು ಗೇಟ್ (GATE) PSU ಗಳಲ್ಲಿ ನೇಮಕಾತಿಗೆ ಅರ್ಜಿ ಸಲ್ಲಿಸಲು ಗೇಟ್ ಕನಿಷ್ಠ ಅರ್ಹತೆಯಾಗಿದೆ. ನೀವು ಗೇಟ್ ಉತ್ತೀರ್ಣರಾದ ನಂತರ ಮುಂದಿನ ಮೂರು ವರ್ಷಗಳವರೆಗೆ ಅದು ಮಾನ್ಯವಾಗಿರುತ್ತದೆ.




