ಸಾಲೋಮನ್
2019ರ ದುಬೈ ವಿಶೇಷ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಯುವಕ
ನಿರಂತರ ಅಭ್ಯಾಸದಿಂದ ಸ್ಟೇಟಿಂಗ್‌ನಲ್ಲಿ ಸಾಧನೆ
ಕರ್ನಾಟಕ ಮೂಲದ ದುಬೈ ನಿವಾಸಿ ಕೀರ್ತನಾ ಶೆಣೈ, ಸುನೀಲ್ ಪುತ್ರ
ಜನಿಸಿದ ಕೇವಲ ಎರಡು ವರ್ಷಗಳಲ್ಲಿ ಆಟಿಸಂ ಸಮಸ್ಯೆಗೆ ತುತ್ತಾದ ಬಾಲಕ ಆಟಿಸಂ, ಮೆದುಳಿನ ನಿಯಂತ್ರಣವನ್ನೇ ಕಸಿದುಕೊಳ್ಳುತ್ತದೆ. ಆದರೆ, ಸುಚಿತ್ ಅದನ್ನೂ ಮೆಟ್ಟಿನಿಂತು ಸಾಧನೆ ಮಾಡಿದ್ದು, ಹೆತ್ತವರ ನಿರಂತರ ಒತ್ತಾಸೆಯಿಂದ ಸುಮಾರು 2 ದಶಕಗಳ ನಂತರ ವಿಶೇಷ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಪದಕ ಗಳಿಸಿದ.
ಸುಜಿತ್‌ಗೆ ಈಗ 24 ವರ್ಷ ವಯಸ್ಸು. ಕರ್ನಾಟಕ ಮೂಲದವರಾದ ಸುನಿಲ್ ಮತ್ತು ಕೀರ್ತನಾ ಶೆಣೈ ದಂಪತಿಯ ಏಕೈಕ ಪುತ್ರ. ಸದ್ಯ ದುಬೈನಲ್ಲಿ ನೆಲೆಸಿದ್ದಾರೆ.
ಸುಜಿತ್‌ಗೆ ಸುಮಾರು 1 ವರ್ಷ 10 ತಿಂಗಳು ಇರಬಹುದು. ಮಗುವನ್ನು ಡಾಕ್ಟರಿಗೆ ತೋರಿಸಿ ಎಂದು ಮಗುವಿನ ಬೆಳವಣೆಗೆ ಅಸಹಜವಾಗಿರುವುದನ್ನು ಗಮನಿಸಿದ ಕೀರ್ತನಾ ಅವರ ತಂದೆ ಡಾ.ಎಚ್.ಎಂ.ಶೆಣೈ ಸಲಹೆ ನೀಡಿದರು. ಮಗು ವನ್ನು ಪರೀಕ್ಷಿಸಿದ ವೈದ್ಯರೊಬ್ಬರು ಇದು ‘ಪರ್ಮನೆಂಟ್ ಡೆವಲಪ್‌ಮೆಂಟ್ ಡಿಸಾರ್ಡರ್’ ಎಂದು ಹೇಳಿದ್ದರು. ಆಗ ಆಟಿಸಂ ಬಗ್ಗೆ ಯಾರಿಗೂ ಹೆಚ್ಚು ತಿಳಿದಿರಲಿಲ್ಲ.
ತಂದೆ-ತಾಯಿ ಇಬ್ಬರೂ ಇಂಜಿನಿಯರ್ ಗಳಾಗಿದ್ದರಿಂದ ಮಗು ಹೈಪರ್ ಆಕ್ಟಿವ್ ಇರಬೇಕು ಎಂದುಕೊಂಡಿದ್ದರು. ಎಂಟೂವರೆ ತಿಂಗಳಲ್ಲೇ ಎದ್ದು ಓಡುತ್ತಿದ್ದ ಎನ್ನುತ್ತಾರೆ ಕೀರ್ತನಾ ಅವರು, ಕೆಲ ವರ್ಷಗಳ ನಂತರ ಆತನಿಗೆ ಆಟಿಸಂ ಸಮಸ್ಯೆ ಇದೆ ಎನ್ನುವುದು ಗೊತ್ತಾಯಿತು.
ಸುಜಿತ್‌ಗೆ ಮಾತನಾಡಲು ಬರುವುದಿಲ್ಲ. ಸಂಜ್ಞೆಗಳ ಮೂಲಕ ಆರ್ಥ ಮಾಡಿಕೊಳ್ಳುತ್ತಾರೆ. ಆದರೆ ಪ್ರತಿಕ್ರಿಯಿಸುವುದಿಲ್ಲ. ಇಂಥ ಹುಡುಗ ದುಬೈನಲ್ಲಿ 2019ರಲ್ಲಿ ದುಬೈ ಸ್ಪೋರ್ಟ್ ಅಕಾಡೆಮಿ ವತಿಯಿಂದ ನಡೆದ ‘ವಿಶೇಷ ಪ್ಯಾರಾ ಒಲಿಂಪಿಕ್ಸ್’ ನ ಸ್ಟೇಟಿಂಗ್ ವಿಭಾಗದಲ್ಲಿ ಭಾಗವಹಿಸಿ ಕಂಚಿನ ಪದಕ ವಿಜೇತರಾದರು.
ಹಲವು ವರ್ಷಗಳಿಂದ ನಡೆಸಿದ ನಿರಂತರ ಅಭ್ಯಾಸದಿಂದ ಆತ ವಿಶೇಷ ಪ್ಯಾರಾ ಒಲಿಂಪಿಕ್ ನಲ್ಲಿ ಪದಕ ಪಡೆದರು. ಅವರ ಈ ಸಾಧನೆ ಹಿಂದೆ ಇರುವವರ ಕ್ರಮ ಖಂಡಿತವಾಗಿಯೂ ಕಠಿಣವಾದದ್ದೇ ಸರಿ. ಕೀರ್ತನಾ ಅವರು ಮಗುವಿನ ಹಿಂದೆ ತರಬೇತುದಾರರಾಗಿ ನಿಂತು ಹಂತ ಹಂತವಾಗಿ ಸುಜಿತ್ ನನ್ನು ಒಬ್ಬ ನಾರ್ಮಲ್ ಹುಡುಗನನ್ನಾಗಿ ಮಾಡಿದ್ದಾರೆ.
ಈಗ ಪ್ಯಾದಾ ಒಲಿಂಪಿಕ್ ಕಂಚಿನ ಪದಕ ವಿಜೇತ ಸುಚಿತ್‌ಗೆ ಹೋದ ಕಡೆಯಲ್ಲೆಲ್ಲ ಸನ್ಮಾನ.
ಆಟಿಸಂ, ಜೀವನ ಪರ್ಯಂತ ಕಾಡುವ ಸಮಸ್ಯೆ, ಸುಜಿತ್ ಬಾಲಕನಾಗಿದ್ದಾಗ ಬೆಂಗಳೂರಿನ ಡಾ ಪ್ರತಿಭಾ ಕಾಮತ್ ಅವರ ಬಳಿ ಸ್ಟ್ರೀಟ್ ಥೆರಪಿ ಮಾಡಿಸಲಾಗುತ್ತಿತ್ತು. ಕೆಲ ವರ್ಷಗಳ ನಂತರ ಇಡೀ ಕುಟುಂಬ ದುಬೈಗೆ ಹೋದಾಗ ಅಲ್ಲಿನ ಸ್ಪೆಷಲ್ ಸ್ಕೂಲ್‌ಗೆ ಸೇರಿಸಿದ್ದರು. (ಅಲ್ಲಿಂದ ಏನೇನು ಸಹಾಯ ಆಗುತ್ತದೆ ಎಂದು ನಿರ್ದಿಷ್ಟವಾಗಿ ಹೇಳಲು ಆಗುವುದಿಲ್ಲ.)
ಏನಿದು ಆಟಿಸಂ?: ಆಟಿಸಂ ಸ್ಪೆಕ್ಟ್ರಮ್ ‘ಸಮ್ ಡಿಸಾರ್ಡರ್’ ಮಿದುಳಿನ ಬೆಳವಣಿಗೆಗೆ ಸಂಬಂಧಿಸಿದ ಒಂದು ಸ್ಥಿತಿಯಾಗಿದೆ. ಈ ಸಮಸ್ಯೆ ಇರುವ ವ್ಯಕ್ತಿಯು ಇತರರೊಂದಿಗೆ ಹೇಗೆ ವ್ಯವಹರಿಸುತ್ತಾನೆ ಮತ್ತು ಬೆರೆಯುತ್ತಾನೆ. ಸಮಸ್ಯೆಗಳು ಉಂಟಾದಾಗ ತಾನೇ ಗಮನಿಸುತ್ತಾನಾ? ಅದನ್ನು ಎದುರಿಸುತ್ತಾನಾ? ಯಾವುದನ್ನೂ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಕ್ರೀಡೆಯಲ್ಲಿ ಹೇಗೆ ತೊಡಗಿಕೊಂಡ?
ಸುಜಿತ್, ತನಗೆ ಇದು ಬೇಕು, ಅದು ಬೇಡ ಎಂದು ಹೇಳುವುದಿಲ್ಲ. ತಂದೆ, ತಾಯಿ ಏನು ಮಾಡಿ ತೋರಿಸುತ್ತಾರೋ ಅದನ್ನೆಲ್ಲ ಮಾಡುತ್ತಾನೆ. ನಿತ್ಯವೂ ಮನೆಯಲ್ಲಿ ಅಪ್ಪನ ಜೊತೆ ಬ್ಯಾಡ್ಮಿಂಟನ್ ಹಾಗೂ ಕ್ರಿಕೆಟ್ ಆಡುತ್ತಾನೆ, ಫುಟ್ ಬಾಲ್ ಮತ್ತು ಸ್ವಿಮ್ಮಿಂಗ್‌ನಲ್ಲೂ ತೊಡಗಿಸಿಕೊಳ್ಳುತ್ತಾನೆ.
ಈ ಎಲ್ಲ ತರಬೇತಿಗಳ ಹಿಂದೆ ಆತನ ತಂದೆ ತಾಯಿ ಇದ್ದೇ ಇರುತ್ತಾರೆ. ಕೋಚ್ ಇದ್ದರೂ ತಾಯಿ ಜೊತೆಗಿದ್ದರೆ ಗ್ರಹಿಸುವುದು ಆತನಿಗೆ ಸುಲಭವಾಗುತ್ತಿತ್ತು. ತಾಯಿ ಜೊತೆ ದೇಶ ವಿದೇಶ ಸುತ್ತಿದ್ದಾನೆ, ಅಜ್ಜಿ ಜೊತೆಗೆ ಮೆಟ್ರೋದಲ್ಲಿ ಓಡಾಡುತ್ತಾನೆ. ಮೊದಲ ಸಲ ಈತನನ್ನು ಯಾರಾದರೂ ನೋಡಿದಾಗ ಈ ಯುವಕ ತುಂಬಾ ರಿಸರ್ವ್ ಎಂದುಕೊಳ್ಳುತ್ತಾರೆಯೇ ಹೊರತು ಆತನಿಗೆ ಮಾತನಾಡಲು ಬರುವುದಿಲ್ಲ ಅಂತ ಅನಿಸುವುದಿಲ್ಲ.
ಚಿಕ್ಕವನಿದ್ದಾಗ ನಾಲ್ಕು ಚಕ್ರಗಳ ಸ್ಕೇಟಿಂಗ್ ಇರುವ ಶೂ ಹಾಕಿ ಅಭ್ಯಾಸ ಮಾಡುವಾಗ ಅವನಿಗೆ ಬ್ಯಾಲೆನ್ಸ್ ಸಿಕ್ಕಿತು. ಈಗ ಹಲವು ವರ್ಷಗಳ ಅಭ್ಯಾಸದಿಂದಾಗಿ ಸಿಂಗಲ್ ಬ್ಲೇಡ್ ಸ್ಕೇಟಿಂಗ್ ವ್ಹೀಲ್‌ನಲ್ಲಿ ವೇಗವಾಗಿ ಹೋಗುತ್ತಾನೆ.