ನಡಿಗೆ ಅಥವಾ ವಾಕಿಂಗ್ ಮಾಡುವುದು ದೇಹಕ್ಕೆ ಅತೀ ಮುಖ್ಯ.ಪ್ರತಿನಿತ್ಯ ನಾವು ಮಾಡುವ ೩೦ ನಿಮಿಷಗಳ ವಾಕಿಂಗ್ ಅನೇಕ ಪ್ರಯೋಜನಗಳನ್ನು ನೀಡುವುದಲ್ಲದೆ, ಆರೋಗ್ಯಕರ ಜೀವನಕ್ಕೆ ಅನುವು ಮಾಡಿಕೊಡುತ್ತದೆ.
ಊಟ ಮಾಡಿದ ತಕ್ಷಣ ಮಲಗುವುದು, ಬೆಳಿಗ್ಗೆ 8 ಗಂಟೆಯವರೆಗೆ ಮಲಗುವುದು,ಮಧ್ಯಾಹ್ನದ ಸಮಯದಲ್ಲಿ ಮಲಗುವುದು. ಇವು ಸೋಮಾರಿತನದ ಸಂಕೇತ.
* ನಡಿಗೆ ದೇಹದ ಕೊಬ್ಬನ್ನು ಕಡಿಮೆ ಮಾಡುವುದಲ್ಲದೆ, ದೇಹದ ತೂಕವನ್ನು ಇಳಿಸಿಕೊಳ್ಳಬಹುದು.
* ತೆಳುವಾದ ದೇಹ ಸೌಂದರ್ಯ ಪಡೆಯಬೇಕೆನ್ನುವವರು ಪ್ರತಿನಿತ್ಯ ಬಿರುಸಾದ ವಾಕಿಂಗ್ ಮಾಡಬೇಕು.
*ದೇಹ ದಂಡನೆ ಮತ್ತು ಆಹಾರ ಇವೆರಡೂ ಒಂದೇ ರೀತಿಯ ಫಲಿತಾಂಶವನ್ನು ನೀಡುವುದರಿಂದ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಬೇಕು.
*ಇತ್ತೀಚೆಗೆ ಸಣ್ಣ ವಯಸ್ಸಿನಲ್ಲೇ ಹೃದ್ರೋಗದ ಅಪಾಯ ಕಂಡುಬರುತ್ತಿದೆ. ಪ್ರತಿನಿತ್ಯ ನಡಿಗೆಯಿಂದ ಇದನ್ನು ತಡೆಯಬಹುದು.
*ವಾಕಿಂಗ್ ಮಾಡುವುದರಿಂದ ಅಧಿಕ ರಕ್ತದೊತ್ತಡವನ್ನು ಸುಧಾರಿಸಿಕೊಳ್ಳಬಹುದು.
*ಟೈಪ್-2 ಮಧುಮೇಹ ಹೊಂದಿರುವವರು ನಡಿಗೆಯಿಂದಾಗಿ ಬಿಪಿಯನ್ನು ಸುಧಾರಿಸಿಕೊಳ್ಳಬಹುದು.
*ನಡಿಗೆಯು ಹೃದಯ ರಕ್ತನಾಳ ಆರೋಗ್ಯಕರವಾಗಿರುವಂತೆ ಮಾಡುತ್ತದೆ.
*ದೇಹದ ಮೂಳೆಗಳು ಮತ್ತು ಸ್ನಾಯುಗಳನ್ನು ನಡಿಗೆ ಬಲಪಡಿಸುತ್ತದೆ.
* ದೇಹದಲ್ಲಿನ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
*ಮನಸ್ಥಿತಿ, ಅರಿವು,ಸ್ಮರಣೆ ಮತ್ತು ನಿದ್ರೆಯನ್ನು ಸುಧಾರಿಸುತ್ತದೆ.
* ದೈನಂದಿನ ಒತ್ತಡವನ್ನು ಕಡಿಮೆ ಮಾಡಿ ಉಲ್ಲಸಿತವಾಗಿರಿಸುತ್ತದೆ.
* ಬೆಳಿಗ್ಗೆ ಅಥವಾ ಸಾಯಂಕಾಲ ನಿರ್ಧಿಷ್ಟ ಸಮಯದಲ್ಲಿ ವಾಕಿಂಗ್ ಮಾಡಿ,
*ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಒಮಿಕ್ರಾನ್ ನಂತಹ ಸಾಂಕ್ರಾಮಿಕ ರೋಗಗಳ ನಡುವೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ವ್ಯಾಕ್ಸಿನ್ ಮಾತ್ರ ಕೆಲಸ ಮಾಡುವುದಿಲ್ಲ. ಬದಲಾಗಿ ದೈಹಿಕ ದಂಡನೆಯೂ ಅವಶ್ಯಕ.
ಹಾಗಾಗಿ ಮರಗಿಡಗಳ ತಂಪಾದ ಗಾಳಿಯನ್ನು ಆಸ್ವಾಧಿಸುತ್ತಾ, ಉತ್ತಮ ಸಂಗೀತ ಹಿನ್ನೆಲೆಯ ಹಾಡುಗಳನ್ನು ಕೇಳುತ್ತಾ ವಾಕ್ ಮಾಡಿ,ಈ ರೀತಿಯ ಅಭ್ಯಾಸ ಪ್ರತಿನಿತ್ಯ ನಡಿಗೆಯ ಉತ್ತಮ ಅಭ್ಯಾಸದೆಡೆಗೆ ಪ್ರೇರೇಪಿಸುತ್ತದೆ.