Mysore
27
scattered clouds

Social Media

ಬುಧವಾರ, 18 ಜೂನ್ 2025
Light
Dark

ನುಡಿ ಸುದರ್ಶನ ಅಭಿನಯದ ಸಕುಬಾಯಿ ಕಾಮ್‌ವಾಲಿ

ಸಕುಬಾಯಿ ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ಹುಟ್ಟಿದವಳು, ಏಳು ವರ್ಷದವಳಿದ್ದಾಗಲೇ ತಾಯಿ ಲಕ್ಷ್ಮೀಬಾಯಿ ಝಾಮಡೆ ಜೊತೆ ಹೊಟ್ಟೆಪಾಡಿಗಾಗಿ ಮುಂಬೈ ಮಹಾನಗರಕ್ಕೆ ಬಂದವಳು. ಎಲ್ಲರಂತೆ ತಾನೂ ಓದಬೇಕು ಎನ್ನುವ ಕನಸನ್ನು ಬದುಕಿನ ಅನಿವಾರ್ಯತೆಗಾಗಿ ಮೊಟಕುಗೊಳಿಸಿಕೊಂಡವಳು.

ಗಲ್ಲಿಗಲ್ಲಿಗಳಲ್ಲಿ ತಿರುಗುತ್ತ, ಮನೆಮನೆಗಳಲ್ಲಿ ಕೆಲಸ ಮಾಡುತ್ತ ಬದುಕಿನ ಅಪಾರ ಅನುಭವವನ್ನು ಪಡೆದುಕೊಂಡವಳು. ತನ್ನ ತಂದೆ, ತಾಯಿ, ತಂಗಿಗಾಗಿ ಮಿಡಿಯುವ ಹೃದಯದವಳು, ಸಂಸ್ಕೃತಿಹೀನ ಸಿರಿವಂತರ ಮನೆಗಳಲ್ಲಿ ಕೆಲಸ ಮಾಡುತ್ತಲೇ, ಪಾತ್ರೆಗಳನ್ನು ತೊಳೆಯುತ್ತಲೇ ಮಗಳನ್ನು ಸುಸಂಸ್ಕೃತಳನ್ನಾಗಿ ಮಾಡಿದವಳು.

ಮನೆ ಮಂದಿಗಾಗಿ ದುಡಿಯುವ ತನ್ನ ತಂದೆ, ಯಾರದೋ ಆಮಿಷಕ್ಕೆ ಬಲಿಯಾಗಿ ಮುಂಬೈನ ಕಾಮಾಟಿಪುರದಲ್ಲಿ ನೇಣಿಗೆ ಶರಣಾಗುವ ತಂಗಿ, ಏಡ್ಸ್ ಮಹಾಮಾರಿಗೆ ಬಲಿಯಾಗುವ ಗಂಡ, ಈ ಎಲ್ಲ ಘಟನೆಗಳಿಗೆ ಎದುರುಗೊಳ್ಳುತ್ತ ಬದುಕು ಕಟ್ಟಿಕೊಳ್ಳಲು ಹೆಣಗುವವಳು. ಕೊನೆಯಲ್ಲಿ ಆಕೆಯ ಮಗಳೇ ಅವಳನ್ನು ಓದುವಂತೆ ಪ್ರೇರೇಪಿಸುತ್ತಾಳೆ. ಆ ಮೂಲಕ ಅಕ್ಷರಜ್ಞಾನದ ಕಡೆಗೆ ಮುಖ ಮಾಡುತ್ತಾಳೆ ಸಕುಬಾಯಿ.

• ಹಿಂದಿ ಮೂಲ: ನಾದಿರಾ ಒಬ್ಬರ್‌
• ಕನ್ನಡ ಅನುವಾದ ಡಿ.ಎಸ್.ಚೌಗಲೆ
• ನಿರ್ದೇಶನ- ಹುಲುಗಪ್ಪ ಕಟ್ಟಿಮನಿ
• ಮುದ್ರಿತ ಸಂಗೀತ ವಿನ್ಯಾಸ-
ಸಾಲಿಯಾನ ಉಮೇಶ್‌ ನಾರಾಯಣ
• ಪ್ರಸ್ತುತಿ- ನುಡಿರಂಗ ಬೆಂಗಳೂರು

Tags:
error: Content is protected !!