ಪೂರ್ಣ ಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ಕೃತಿಯು ಭಾನುವಾರ ಸಂಜೆ ಮೈಸೂರಿನ ಕಲಾಮಂದಿರದ ಕಿರುರಂಗಮಂದಿರದಲ್ಲಿ ನಾಟಕದ ರೂಪದಲ್ಲಿ ಅನಾವರಣಗೊಳ್ಳಲಿದೆ.
ಕೃತಿಯನ್ನು ಕರ್ಣಂ ಪವನ್ ಪ್ರಸಾದ್ ರಂಗರೂಪಕ್ಕೆ ಇಳಿಸಿದ್ದಾರೆ. ಹನು ರಾಮಸಂಜೀವ ಅವರು ನಾಟಕ ನಿರ್ದೇಶನ ಮಾಡಿದ್ದಾರೆ. ಭಾನುವಾರ ಸಂಜೆ 4 ಗಂಟೆಗೆ ಮತ್ತು ಸಂಜೆ 7 ಗಂಟೆಗೆ ಎರಡು ಪ್ರದರ್ಶನಗಳಿವೆ. ಪೂರ್ಣ ಚಂದ್ರ ತೇಜಸ್ವಿಯವರು ಬರೆದಿರುವ ‘ಅಣ್ಣನ ನೆನಪು’ ಕೃತಿ ಆಧಾರಿತ ಈ ನಾಟಕವು ಪೂಚಂತೇ ಅವರ ದೃಷ್ಟಿಯಲ್ಲಿ ಕುವೆಂಪು ಅವರ ಜೀವನದ ಘಟನೆಗಳು, ವ್ಯಕ್ತಿತ್ವ ಹಾಗೂ ಅವರ ಸಾಹಿತ್ಯಕ್ಕೆ ಸಂಬಂಧಿಸಿದ ತೇಜಸ್ವಿಯವರ ನೆನಪಿನ ಗುಚ್ಚ ಇದಾಗಿದ್ದು, ರಂಗದ ಮೇಲೆ ನಾಟಕ ರೂಪದಲ್ಲಿ ಮೂಡಿಬರಲಿದೆ.