ಮೈಸೂರಿಗರನ್ನು ಹಲವು ದಶಕಗಳ ಕಾಲ ಸಂಗೀತದ ಮನರಂಜನೆ ನೀಡಿ ರಂಜಿಸಿರುವ ವಿ.ಜಾರ್ಜ್ ಪ್ರಭಾಕರ್ ಆರ್ಕೆಸ್ಟ್ರಾ ಸಂಸ್ಥೆಯ 41 ನೇ ವಾರ್ಷಿಕೋತ್ಸವ ಸಮಾರಂಭ ಫೆ.5 ರಂದು ಭಾನುವಾರ ನಗರದ ಜಗನ್ಮೋಹನ ಅರಮನೆಯಲ್ಲಿ ನಡೆಯಲಿದೆ.
ಅಂದು ಸಂಜೆ 6 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಕನ್ನಡ ಮತ್ತು ಹಿಂದಿ ಭಾಷೆ ಹಳೆಯ ಚಿತ್ರಗೀತೆಗಳನ್ನು ಜಾರ್ಜ್ ಪ್ರಭಾಕರ್, ಗುರುರಾಜ, ಡಾ.ರೇಖಾ ಸೇರಿದಂತೆ 10 ಮಂದಿ ಗಾಯಕರು ಪ್ರಸ್ತುತಪಡಿಸಲಿದ್ದಾರೆ. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.