Mysore
22
overcast clouds

Social Media

ಶನಿವಾರ, 13 ಜೂನ್ 2026
Light
Dark

ವನಿತೆ ಮಮತೆ: ಅವಳಿ ಮಕ್ಕಳ ಪಾದಗಳಿಗೆ ಅಪ್ಪ, ಅಮ್ಮನ ಚುಂಬನ

ನಾಲ್ಕು ತಿಂಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಹಾಗೂ ನಿರ್ದೇಶಕ ವಿಜ್ಞೇಶ್ ಶಿವನ್ ಇದೀಗ ಅಪ್ಪ, ಅಮ್ಮ ಆಗಿದ್ದಾರೆ. ನಾಲ್ಕು ತಿಂಗಳಿಗೆ ಇದು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಹುಟ್ಟುವುದು ಸಹಜ. ಆದರೆ ಇವರು ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದು ಅಭಿಮಾನಿಗಳಲ್ಲಿ ಅಚ್ಚರಿ ಮತ್ತು ಸಂತಸವನ್ನು ಉಂಟುಮಾಡಿದೆ.

ವಿಜ್ಞೇಶ್ ಈ ಬಗ್ಗೆ ತಮ್ಮ ಟ್ವಿಟ್ಟರ್, ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಿಳಿಸಿದ್ದು, ಅವಳಿ ಗಂಡು ಮಕ್ಕಳ ಪಾದಗಳಿಗೆ ಅಪ್ಪ, ಅಮ್ಮ ಮುತ್ತಿಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!