ಆನ್‌ಲೈನ್‌ನಲ್ಲಿಯೇ ಸೇವೆ ನೀಡಲು ಮುಂದಾದ ಮಹಾನಗರಪಾಲಿಕೆ
ವ್ಯಾಪಾರ-ವ್ಯವಹಾರ ಮಾಡುವವರಿಗೆ ಉದ್ದಿಮೆ ರಹದಾರಿ (ಟ್ರೇಡ್ ಲೈಸೆನ್ಸ್) ಕಡ್ಡಾಯ. ಆದರೆ ಇದನ್ನು ಹೊಂದಿದ ಮೇಲೆ ಕಾಲ ಕಾಲಕ್ಕೆ ನವೀಕರಣ ಮಾಡಿಕೊಳ್ಳಲು ಪಾಲಿಕೆ, ಸ್ಥಳೀಯ ಸಂಸ್ಥೆಗಳ ಬಾಗಿಲು ತಟ್ಟಬೇಕಿತ್ತು. ಆದರೆ ಮೈಸೂರು ಮಹಾನಗರ ಪಾಲಿಗೆ ನೂತನ ಹೆಜ್ಜೆ ಇಟ್ಟಿದ್ದು, ಇದು ವ್ಯಾಪಾರ ಸ್ನೇಹಿ ನಡೆಯಾಗಿದೆ.
ಮೇಯರ್ ಶಿವಕುಮಾರ್ ನೇತೃತ್ವದಲ್ಲಿ ಮೊನ್ನೆ ಮೊನ್ನೆ ನಡೆದ ಸಭೆಯಲ್ಲಿ ಆನ್‌ಲೈನ್‌ನಲ್ಲಿಯೇ ಟ್ರೇಡ್ ಲೈಸೆನ್ಸ್ ನವೀಕರಣ ಸಂಬಂಧ ತೀರ್ಮಾನ ಕೈಗೊಳ್ಳಲಾಗಿದೆ. ಅದರಂತೆ ಇನ್ನು ಮುಂದೆ ವ್ಯಾಪಾರಿಗಳು ಆನ್‌ಲೈನ್‌ನಲ್ಲಿಯೇ ನಿಗದಿತ ಶುಲ್ಕ ಪಾವತಿ ಮಾಡಿ ತಮ್ಮ ಲೈಸೆನ್ಸ್ ನವೀಕರಣ ಮಾಡಿಕೊಳ್ಳಬಹುದಾಗಿದೆ.
ನವೀಕರಣ ಪ್ರಕ್ರಿಯೆ ಹೇಗೆ?
https://mysurucitycorporation.co.in/
- ವೆಬ್‌ಸೈಟ್‌ಗೆ ಭೇಟಿ ನೀಡಿ ಅಲ್ಲಿ ಆನ್‌ಲೈನ್ ಸೇವೆಗಳನ್ನು ಆಯ್ಕೆ ಮಾಡಬೇಕು.
- ಉದ್ದಿಮೆ ರಹದಾರಿ ಆನ್‌ಲೈನ್ ಸೇವೆ ಆಯ್ಕೆ ಮಾಡುವುದು
- ಉದ್ದಿಮೆ ಪರವಾನಗಿ ಗುರುತಿನ ಸಂಖ್ಯೆಯನ್ನು ನಮೂದಿಸುವುದು.
- ಪರದೆಯ ಮೇಲೆ ಕಾಣುವ ಸರ್ಜ್ ಮತ್ತು ವೀವ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.
- ಶುಲ್ಕ ಪಾವತಿ ಆಯ್ಕೆ ಕಂಪ್ಯೂಟರ್ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಆಗ ಇಮೇಲ್ ಐಡಿ, ದೂರವಾಣಿ ಸಂಖ್ಯೆ ನಮೂದಿಸುವುದು.
- ಶುಲ್ಕ ಪಾವತಿ ವಿಧಾನ ಆಯ್ಕೆ ಮಾಡುವುದು (ನೆಟ್ ಬ್ಯಾಂಕಿಂಗ್, ಯುಪಿಐ) ನಂತರ ಶುಲ್ಕ ಪಾವತಿ ಮಾಡುವುದು.
- ನಂತರ ಬರುವ ಡೌನ್‌ಲೋಡ್ ಪ್ರಮಾಣ ಪತ್ರದ ಮೇಲೆ ಕ್ಲಿಕ್ಕಿಸಿ ನಿಮ್ಮ ಉದ್ಯಮದ ನವೀಕರಣ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಬಹುದು.
ಆನ್‌ಲೈನ್ ಸೇವೆಯಿಂದ ಆಗುವ ಅನುಕೂಲಗಳು
- ಉದ್ದಿಮೆದಾರರು ಸ್ಥಳದಲ್ಲಿಯೇ ಕುಳಿತು ಉದ್ದಿಮೆ ರಹದಾರಿ ನವೀಕರಣ ಮಾಡಿಕೊಳ್ಳಬಹುದು.
- ಮಧ್ಯವರ್ತಿಗಳ ಸಹಾಯವಿಲ್ಲದೇ ಸರಳ ವಿಧಾನದ ಮೂಲಕ ನವೀಕರಣ ಸಾಧ್ಯ.
- ಇದು ಕಾಗದ ರಹಿತ ವ್ಯವಸ್ಥೆಯಾಗಿದ್ದು, ಪರಿಸರ ಸ್ನೇಹಿ.
- ಇ-ತಂತ್ರಾಂಶ ವ್ಯವಸ್ಥೆಯಿಂದ ವ್ಯವಹಾರದಲ್ಲಿ ಪಾರದರ್ಶಕತೆ.
- ಇದರಿಂದ ಉದ್ದಿಮೆದಾರರ ಸಮಯ ಉಳಿತಾಯ, ಅಲೆದಾಟವೂ ತಪ್ಪುತ್ತದೆ.
- ಡಿಜಿಟಲ್ ಸಹಿ ಇರುವ ಪ್ರಮಾಣ ಪತ್ರವನ್ನು ಆನ್‌ಲೈನ್‌ನಲ್ಲಿಯೇ ಪಡೆಯಬಹುದು.
- ಒಮ್ಮೆ ಆನ್‌ಲೈನ್ ನವೀಕರಣ ಆದ ಮೇಲೆ ಎಸ್‌ಎಂಎಸ್ ಮೂಲಕವೇ ಮುಂದಿನ ನವೀಕರಣ, ಶುಲ್ಕ ಪಾವತಿ ಬಗ್ಗೆ ಮಾಹಿತಿ ದೊರೆಯುತ್ತದೆ.
- ಇದರಿಂದ ಪಾಲಿಗೆ ಅಧಿಕಾರಿಗಳಿಗೂ ಸಮಯ ಉಳಿತಾಯ, ಆದಾಯ ಸೋರಿಕೆಯೂ ತಪ್ಪಲಿದೆ.
ಮೈಸೂರಿನಲ್ಲಿ ವ್ಯಾಪಾರಸ್ಥರಿಗೆ ಟ್ರೇಡ್ ಲೈಸೆನ್ಸ್ ಪಡೆಯಲು ಇದ್ದ ವ್ಯವಸ್ಥೆಯನ್ನು ಸರಳೀಕರಣಗೊಳಿಸಲಾಗಿದೆ. ಇನ್ನೂ ಮುಂದೆ ವ್ಯಾಪಾರಸ್ಥರು, ಪಾಲಿಕೆ ಕಚೇರಿಗೆ ಬರದೇ ತಾವಿರುವ ಸ್ಥಳದಲ್ಲಿಯೇ ತಮ್ಮ ಟ್ರೇಡ್ ಲೈಸೆನ್ಸ್ ಸಂಖ್ಯೆ ನಮೂದಿಸಿ, ತೆರಿಗೆ ಪಾವತಿಸಬಹುದು. ಪಾವತಿಯ ರಸೀದಿಯ ಪ್ರಿಂಟ್ ಕೂಡ ಪಡೆಯಬಹುದಾಗಿದೆ. -ಶಿವಕುವಾರ್, ಮಹಾಪೌರರು, ಮೈಸೂರು ಮಹಾನಗರಪಾಲಿಕೆ