Mysore
33
scattered clouds

Social Media

ಶುಕ್ರವಾರ, 28 ಮಾರ್ಚ್ 2025
Light
Dark

ಶಿವಕುಮಾರ್ ಟು ಸತೀಶ್ ನೀನಾಸಂ

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಯಳದಳ್ಳಿಯಲ್ಲಿ ಹುಟ್ಟಿದ ವ್ಯಕ್ತಿಯೊಬ್ಬ ಇಂದು ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟ. ಅವನ ಹೆಸರು ಶಿವಕುಮಾರ್. ಈ ಹೆಸರು ಹೇಳಿದರೆ ಯಾರಿರಬಹುದು ಎನ್ನುವ ಪ್ರಶ್ನೆ ಹುಟ್ಟುತ್ತದೆ. ಆದರೆ ಸತೀಶ್ ನೀನಾಸಂ ಎಂದರೆ ತಟ್ಟನೆ ಅವರ ನಟನೆಯ ಶೈಲಿ ಕಣ್ಣಮುಂದೆ ಬಂದು ನಿಲ್ಲುತ್ತದೆ.

ಓದಿನಲ್ಲಿ ಆಸಕ್ತಿ ಇಲ್ಲದ ಸತೀಶ್ ಮನೆ, ಮಠವನ್ನೆಲ್ಲಾ ಬಿಟ್ಟು ಸಿನಿಮಾ ಆಸಕ್ತಿಯಿಂದ ಬೆಂಗಳೂರಿಗೆ ಬಂದವರು. ಮೊದಲಿಗೇ ಥಿಯೇಟರ್‌ನಲ್ಲಿಯೇ ಕೆಲಸ, ಟೀ ಅಂಗಡಿಯಲ್ಲಿ ಡ್ಯೂಟಿ, ಬಸ್‌ಗಳ ಸರ್ವೀಸ್, ಡೆಕೋರೇಷನ್ ಕೆಲಸ ಹೀಗೆ ನೈಜ ಬದುಕಿನಲ್ಲಿ ಹಲವು ಪಾತ್ರಗಳನ್ನು ಮಾಡುತ್ತಾ ಬಂದ ಸತೀಶ್ ನಂತರ ಸೇರಿದ್ದು ನೀಲಕಂಠೇಶ್ವರ ನಾಟ್ಯ ಸಂಘ (ನೀನಾಸಂ). ಅದಾದ ಮೇಲೆ ಅವರು ಕೇವಲ ಸತೀಶ್ ಆಗಿ ಉಳಿಯದೇ ಸತೀಶ್ ನೀನಾಸಂ ಆದರು.

ಮಾದೇಶ, ಮನಸಾರೆ, ಲೈಫ್ ಇಷ್ಟೇನೇ, ಪಂಚರಂಗಿ ಚಿತ್ರಗಳಲ್ಲಿ ಸಣ್ಣ ಪಾತ್ರ ಮಾಡಿದ ಇವರು ನಂತರ ಲೂಸಿಯಾ ಮೂಲಕ ನಾಯಕನಾಗಿ ಎಂಟ್ರಿಕೊಟ್ಟರು. ಅದಾದ ಮೇಲೆ ಅವರು ಮಾಡಿದ ಪಾತ್ರಗಳೆಲ್ಲವೂ ಕನ್ನಡಿಗರೆಲ್ಲರಿಗೂ ಚಿರಪರಿಚಿತ. ರಂಗಭೂಮಿ ಹಿನ್ನೆಲೆಯಿಂದ ಬಂದು ತಮ್ಮ ವಿಶೇಷ ಮ್ಯಾನರಿಸಂನಿಂದ ಹೆಸರಾದ ಸತೀಶ್ ನೀನಾಸಂ ಅಯೋಗ್ಯ, ಡ್ರಾಮಾ, ಲವ್ ಇನ್ ಮಂಡ್ಯ ಸೇರಿ ಹಲವು ಟರ್ನಿಂಗ್ ಪಾಯಿಂಟ್‌ಗಳಲ್ಲಿ ಗೆದ್ದವರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ