Mysore
27
scattered clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಈಗ ಎಲ್ಲೆಲ್ಲೂ ನಾರಿ ಪವರ್

ಭಾರತೀಯ ಮಹಿಳೆ ಇಂದು ಅಡುಗೆ ಮನೆಗೇ ಸೀಮಿತವಾಗಿ ಉಳಿದಿಲ್ಲ. ಬಾಹ್ಯಾಕಾಶ ಕಾರ್ಯಾಚರಣೆಗಳಿಂದ ತಳಮಟ್ಟದ ಆಡಳಿತದವರೆಗೆ, ಅಡುಗೆ ಮನೆಗಳಿಂದ ಬೋರ್ಡ್ ರೂಮ್‌ಗಳವರೆಗೆ ನಾರಿಶಕ್ತಿ ಮುಂದೆ ಸಾಗುತ್ತಿದೆ.

ಸೂಕ್ತ ಅವಕಾಶಗಳು ಸಿಕ್ಕಾಗ ಭಾರತದಲ್ಲಿ ಮಹಿಳೆಯರು ಬದಲಾವಣೆಗೆ ಕಾರಣವಾಗುವ ಅಪಾರ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತಾ ಮುನ್ನಡೆದಿದ್ದಾರೆ. ದೇಶವು ತನ್ನ ಬೆಳವಣಿಗೆಯ ಹಾದಿಯಲ್ಲಿ ವೇಗವಾಗಿ ಸಾಗುತ್ತಿದ್ದಂತೆ, ಮಹಿಳೆಯರ ಮಹತ್ವಾಕಾಂಕ್ಷೆಗಳು ಮತ್ತು ನಿರೀಕ್ಷೆಗಳು ಸಹ ಹೆಚ್ಚುತ್ತಿವೆ.

ಈ ನಿರೀಕ್ಷೆಗೆ ಅನುಗುಣವಾಗಿ ಕೇಂದ್ರಸರ್ಕಾರ ಮಹಿಳೆಯರು ಇನ್ನು ಮುಂದೆ ಕೇವಲ ಭಾಗವಹಿಸುವವರು ಮಾತ್ರವಲ್ಲ; ಅವರು ನಾಯಕರು, ನಾವೀನ್ಯಕಾರರು, ರಕ್ಷಕರು ಮತ್ತು ಉದ್ಯಮಿಗಳು ಎಂಬ ಭವಿಷ್ಯಕ್ಕೆ ಅಡಿಪಾಯ ಹಾಕಿದೆ.

ಇಂದು ಮಹಿಳೆಯರು ಸ್ವಸಹಾಯ ಗುಂಪುಗಳನ್ನು ಮುನ್ನಡೆಸುತ್ತಿ ದ್ದಾರೆ, ವ್ಯವಹಾರಗಳನ್ನು ಪ್ರಾರಂಭಿಸುತ್ತಿದ್ದಾರೆ, ವಿಜ್ಞಾನ, ರಕ್ಷಣೆ ಮತ್ತು ಕ್ರೀಡೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಎಲ್ಲಕ್ಕಿಂತ ವಿಶೇಷವಾಗಿ, ದೇಶದ ಭವಿಷ್ಯವನ್ನು ರೂಪಿಸುತ್ತಿದ್ದಾರೆ. ಭಾರತದ ಜನಸಂಖ್ಯೆಯ ಸುಮಾರು ಶೇ.೬೭.೭ರಷ್ಟು ಜನರು ಮಹಿಳೆಯರು ಮತ್ತು ಮಕ್ಕಳೇ ಇರುವುದರಿಂದ, ಅವರ ಸಬಲೀಕರಣವು ಕೇವಲ ಸಾಮಾಜಿಕ ಸುಧಾರಣೆಯಲ್ಲ, ಇದು ಕಡ್ಡಾಯ ಕಾರ್ಯತಂತ್ರವಾಗಿದೆ. ಭಾರತವು ಅಮೃತ ಕಾಲಕ್ಕೆ ಪ್ರವೇಶಿಸುತ್ತಿದ್ದಂತೆ, ನಾರಿಶಕ್ತಿಯು ಬಲವಾದ, ಎಲ್ಲರನ್ನೂ ಒಳಗೊಂಡ ರಾಷ್ಟ್ರವನ್ನು ಮುಂದಕ್ಕೆ ಕೊಂಡೊಯ್ಯುವ ಅವಿನಾಭಾವ ಶಕ್ತಿಯಾಗಿ ನಿಂತಿದೆ.

ಪುರುಷ ಪ್ರಧಾನ ಸಮಾಜದಲ್ಲಿ ತಲೆಮಾರುಗಳಿಂದಲೂ ಭಾರತೀಯ ಮಹಿಳೆಯರು ವ್ಯವಸ್ಥಿತ ಅಡೆತಡೆಗಳನ್ನು ಎದುರಿಸುತ್ತಿದ್ದರು. ವಿಶೇಷವಾಗಿ ಗ್ರಾಮೀಣ ಸಮುದಾಯಗಳಲ್ಲಿ ಶಿಕ್ಷಣ, ಆರೋಗ್ಯ, ರಕ್ಷಣೆ, ಉದ್ಯೋಗ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಗೆ ಸೀಮಿತ ಪ್ರವೇಶವಿತ್ತು. ಆದರೆ ಕೇಂದ್ರ ಸರ್ಕಾರ ಮಹಿಳೆಯರನ್ನು ಇನ್ನು ಮುಂದೆ ನಿಷ್ಕ್ರಿಯ ಫಲಾನುಭವಿಗಳಾಗಿ ನೋಡಲಾಗುವುದಿಲ್ಲ, ಬದಲಾಗಿ ಬದಲಾವಣೆಯ ಸಬಲೀಕೃತ ಏಜೆಂಟ್‌ಗಳಾಗಿ ನೋಡಲಾಗುತ್ತದೆ, ಇದು ಭಾರತದ ಬೆಳವಣಿಗೆಯ ಯಶೋಗಾಥೆಯಾಗಿದೆ ಎಂದು ಹೇಳಿದೆ.

ದಿಟ್ಟ, ಎಲ್ಲರನ್ನೂ ಒಳಗೊಂಡ ಮತ್ತು ಜೀವನಚಕ್ರ ಆಧಾರಿತ ಕಾರ್ಯ ವಿಧಾನದಿಂದ ಪ್ರೇರಿತವಾಗಿ, ಸರ್ಕಾರವು ಆರೋಗ್ಯ, ಶಿಕ್ಷಣ, ವಸತಿ, ಡಿಜಿಟಲ್ ಪ್ರವೇಶ, ನೈರ್ಮಲ್ಯ ಮತ್ತು ಆರ್ಥಿಕ ಸೇರ್ಪಡೆಯಲ್ಲಿ ಉದ್ದೇಶಿತ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ. ‘ನಾರಿಶಕ್ತಿ’ ಈಗ ರಾಷ್ಟ್ರೀಯ ಧ್ಯೇಯವಾಗಿದ್ದು, ನಗರ ಅಥವಾ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ಮಹಿಳೆಯೂ ಘನತೆ, ಸುರಕ್ಷತೆ ಮತ್ತು ಸ್ವಾವಲಂಬನೆಯೊಂದಿಗೆ ಬದುಕಲು ಅಧಿಕಾರ ನೀಡುತ್ತದೆ.

ಜೀವನದ ಪ್ರತಿಯೊಂದು ಹಂತದಲ್ಲೂ ಸಬಲೀಕರಣ ಕೇವಲ ಒಂದು ಘಟನೆಯಲ್ಲ, ಇದು ಒಂದು ಪ್ರಯಾಣ. ಜೀವನದ ಪ್ರತಿಯೊಂದು ಹಂತದಲ್ಲೂ ಮಹಿಳೆಯರನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾದ ಕಾರ್ಯಕ್ರಮಗಳ ಮೂಲಕ ಭಾರತ ಸರ್ಕಾರವು ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಕಾನೂನು ಕ್ಷೇತ್ರಗಳಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸಲು ಸಮಗ್ರ, ಜೀವನಚಕ್ರ ಆಧಾರಿತ ನೀತಿ ಚೌಕಟ್ಟನ್ನು ಅಳವಡಿಸಿಕೊಂಡಿದೆ. ಹಿಂಸೆ ಮತ್ತು ತಾರತಮ್ಯದ ವಿರುದ್ಧದ ಸಾಂವಿಧಾನಿಕ ರಕ್ಷಣೆಗಳು ಮತ್ತು ಹೆಗ್ಗುರುತು ಕಾನೂನುಗಳಿಂದ ಹಿಡಿದು, ಬೇಟಿ ಬಚಾವೊ ಬೇಟಿ ಪಡಾವೊ, ಮಿಷನ್ ಶಕ್ತಿ ಮತ್ತು ಐತಿಹಾಸಿಕ ನಾರಿ ಶಕ್ತಿ ವಂದನ್ ಅಧಿನಿಯಮದಂತಹ ಪರಿವರ್ತನೀಯ ಯೋಜನೆಗಳವರೆಗೆ ಕೇಂದ್ರ ಸರ್ಕಾರದ ಗಮನವು ಮಹಿಳಾ ಅಭಿವೃದ್ಧಿಯಿಂದ ಮಹಿಳಾ ನೇತೃತ್ವದ ಅಭಿವೃದ್ಧಿಯತ್ತ ಸಾಗಿದೆ. ಶಿಕ್ಷಣದಲ್ಲಿ ವಿಶೇಷವಾಗಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರದಲ್ಲಿ ಕೌಶಲ, ಸ್ವಸಹಾಯ ಗುಂಪುಗಳ ಮೂಲಕ ಉದ್ಯಮಶೀಲತೆ ಮತ್ತು ಸಾರ್ವಜನಿಕ  ಸೇವೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿದೆ.

ಕಾನೂನು ಸುಧಾರಣೆಗಳು ಮತ್ತು ಕಾರ್ಮಿಕ ಸಂಹಿತೆಗಳು ಸುರಕ್ಷಿತ ಮತ್ತು ಎಲ್ಲರನ್ನೂ ಒಳಗೊಂಡ ಕೆಲಸದ ಸ್ಥಳಗಳನ್ನು ಉತ್ತೇಜಿಸುತ್ತವೆ. ಆದರೆ ಪಿಎಂ ಆವಾಸ್ ಯೋಜನೆ, ಡೇ- ಎನ್‌ಆರ್‌ಎಲ್‌ಎಂ ಮತ್ತು ಕೃಷಿ ಬೆಂಬಲ ಉಪಕ್ರಮಗಳಂತಹ ಯೋಜನೆಗಳು ಮಹಿಳೆಯರನ್ನು ಆರ್ಥಿಕವಾಗಿ  ಮತ್ತು ಸಾಮಾಜಿಕವಾಗಿ ಸಬಲೀಕರಣಗೊಳಿಸಿವೆ. ತಳಮಟ್ಟದ ಆಡಳಿತದಿಂದ ಹಿಡಿದು ರಕ್ಷಣಾ ಪಡೆಗಳು ಮತ್ತು ವಾಯುಯಾನದವರೆಗೆ, ಮಹಿಳೆಯರು ಈಗ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದು, ಸಮಗ್ರ ಮತ್ತು ಸುಸ್ಥಿರ ರಾಷ್ಟ್ರೀಯ ಬೆಳವಣಿಗೆಗೆ ಕಾರಣರಾಗಿದ್ದಾರೆ.

” ಇಂದಿನ ಮಹಿಳೆಯರು ರಕ್ಷಣಾ ಕ್ಷೇತ್ರದಲ್ಲಿ, ಪೊಲೀಸ್ ಸೇವೆಗಳಲ್ಲಿ ಮತ್ತು ಸಶಸ್ತ್ರ ಪಡೆಗಳ ಎಲ್ಲಾ ವಿಭಾಗಗಳಲ್ಲಿ ಹೆಮ್ಮೆಯಿಂದ ಸಮವಸ್ತ್ರ ಧರಿಸುತ್ತಾರೆ. ಸೈನಿಕ್ ಶಾಲೆಗಳು ಮತ್ತು ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಹೆಣ್ಣು ಮಕ್ಕಳನ್ನು ಸೇರಿಸುವಂತಹ ದಿಟ್ಟ ಕ್ರಮ ಐತಿಹಾಸಿಕ ಮೈಲಿಗಲ್ಲುಗಳಾಗಿವೆ. ಭಾರತದ ವೈಜ್ಞಾನಿಕ ಶ್ರೇಷ್ಠತೆ ಮತ್ತು ಲಿಂಗ ಸಮಾನತೆ ಒಳಗೊಳ್ಳುವಿಕೆಯನ್ನು ಸಂಕೇತಿಸುವ ಚಂದ್ರಯಾನ-೩ರ ಯಶಸ್ಸಿನಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಿದ್ದಾರೆ. ವಿಶ್ವದಲ್ಲೇ ಅತಿ ಹೆಚ್ಚು ಮಹಿಳಾ ಪೈಲಟ್‌ಗಳನ್ನು ಹೊಂದಿರುವ ದೇಶವೂ ನಮ್ಮದೇ. STEM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ)ದಲ್ಲಿ ಪದವಿ ಪಡೆಯುವ ಮಹಿಳೆಯರ ಅನುಪಾತ ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಇದು ಭಾರತೀಯ ನಾರಿಯರ ಆತ್ಮವಿಶ್ವಾಸ, ಸಮರ್ಥ ಮತ್ತು ಮಹತ್ವಾಕಾಂಕ್ಷೆಯ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.”

Tags:
error: Content is protected !!