Mysore
15
few clouds

Social Media

ಗುರುವಾರ, 22 ಜನವರಿ 2026
Light
Dark

ಋತುಸ್ರಾವದ ಕೊನೆಯ ದಿನಗಳ ತಳಮಳಗಳು

ರಶ್ಮಿ ಕೆ.ವಿಶ್ವನಾಥ್ ಮೈಸೂರು

ಮೆನೋಪಾಸ್ – ಋತುಮತಿಯಾದ ಪ್ರತಿಯೊಬ್ಬ ಹೆಣ್ಣು ಮಗಳು ಸಹ ಅದರ ಕಡೆಯ ಹಂತವನ್ನು ತಲುಪುವ ದಿನಗಳವು. ಪ್ರತೀ ತಿಂಗಳು ಪೀರಿಯಡ್ಸ್ ನೋವುಗಳನ್ನೆಲ್ಲ ಸಹಿಸಿ ಕೊನೆಗೂ ಕೊನೆಯಾಗುತ್ತಿರುವುದಕ್ಕೆ ಸಂತಸ ಪಡಬೇಕೋ ಅಥವಾ ದೈಹಿಕವಾಗಿ(ಬಯಾಲಾಜಿಕಲ್) ಮತ್ತು ಮಾನಸಿಕವಾಗಿ(ಸೈಕಲಾಜಿಕಲ್) ಮಹಿಳೆಯರ ಮೇಲೆ ಅತ್ಯಂತ ಕೆಟ್ಟ ಪ್ರಭಾವ ಬೀರುವ ಮೆನೋಪಾಸ್ ಬಗ್ಗೆ ದುಃಖ ಪಡಬೇಕೊ ತಿಳಿಯದಾಗಿಬಿಡುತ್ತದೆ.

ಮೆನೋಪಾಸ್ ಎಂದರೆ ಋತುಸ್ರಾವದ ಕೊನೆಯ ಹಂತ, ಅದು ಸ್ತ್ರೀಗೆ ೪೮ ವರ್ಷಗಳು ದಾಟಿದ ನಂತರ ಶುರುವಾಗಬೇಕಾದದ್ದು ಪ್ರಕೃತಿ ನಿಯಮ. ಆದರೆ ಕೆಲವರಿಗೆಲ್ಲ ೩೮ಕ್ಕೆ ಶುರುವಾಗುತ್ತಿರುವುದು ಮಾನವ ನಿರ್ಮಿತ ಪ್ರಕೃತಿಯ ಪ್ರಭಾವ. ಆ ಸಮಯದಲ್ಲಿ ಆಕೆಯಲ್ಲಾಗುವ ಬದಲಾವಣೆಗಳು ಹೇಳಲು ಆಗದ ಬಿಡಲೂ ಆಗದ ದ್ವಂದ್ವಗಳು. ಪುರುಷರಿಗೆ ೬೦ರ ನಂತರ ತಮ್ಮ ಕೆಲಸಕ್ಕೆ ನಿವೃತ್ತಿ ಸಿಗಬಹುದೇನೋ, ಆದರೆ ಮಹಿಳೆಗೆ ಆಕೆ ಕೊನೆಯುಸಿರೆಳೆದಾಗಲೆ. ದಿನದ ಪ್ರತಿಕ್ಷಣವೂ ಮಾನಸಿಕವಾಗಿಯೊ ಅಥವಾ ಭೌತಿಕವಾಗಿಯೊ ಆಕೆ ಕೆಲಸ ಮಾಡುತ್ತಲೇ ಇರುತ್ತಾಳೆ.

ಮಾಡಲೇಬೇಕು ಸಹ. ಅದು ಅವಶ್ಯ. ಬೇರೆ ಸಮಯದಲ್ಲಿ ಹೇಗಾದರೂ ನಿಭಾಯಿಸಿಬಿಡುತ್ತಾಳೇನೊ, ಆದರೆ ಮೆನೋಪಾಸ್ ಸಮಯದಲ್ಲಿ ಆಕೆಯ ಸಹನೆಯ ಕಟ್ಟೆ ಒಡೆದುಬಿಡುತ್ತದೆ. ತನ್ನ ಮೇಲೆ ಮತ್ತು ಇತರರ ಮೇಲೆ ಕೋಪ, ಸಿಟ್ಟು, ಅಸಮಾಧಾನ ಎಲ್ಲವೂ ಒಟ್ಟಿಗೆ ದಾಳಿ ಮಾಡಿಬಿಡುತ್ತವೆ. ಹಾಗಂತ ಎಲ್ಲವನ್ನೂ ಹಾಗೆಯೆ ಹರಿಯಬಿಡಲಾಗುವುದಿಲ್ಲವಲ್ಲ. ಟೀಯನ್ನು ಸೋಸಿ ಕುಡಿಯುವಂತೆ, ನುಗ್ಗಿಬಂದ ಕೋಪವನ್ನು ತಡೆದು ಹಿಡಿದು ಯೋಚಿಸಿ ಪ್ರತಿ ಮಾತಿಗೂ ಗಂಟಲಲ್ಲಿ ಫಿಲ್ಟರ್ ಇಟ್ಟು, ಮುಂದಿರುವವರ ಜೊತೆ ಮಾತನಾಡಬೇಕಾಗುತ್ತದೆ. ಅದೆಲ್ಲ ಫ್ರಸ್ಟ್ರೇಷನ್ ಅವಳೊಳಗೆ ಕೂಡಿಹಾಕಿ ಕೆಲವೊಮ್ಮೆ pressure cooker ಆಗಿಬಿಡುತ್ತಾಳೆ. ಆಕೆಯ ಹಾರ್ಮೋನ್‌ಗಳು ಅಷ್ಟರ ಮಟ್ಟಿಗೆ ಏರಿಳಿತವಾಗುತ್ತಿರುತ್ತವೆ.

ಮೆಂಟಲಿ, ಫಿಸಿಕಲಿ ಆಕೆ ಕುಗ್ಗಿಹೋಗಿರುತ್ತಾಳೆ. ನಿಮಗಾಗಿ ದುಡಿದ ಆ ಜೀವಕೆ ತಮ್ಮವರೆನ್ನುವ ನಿಮ್ಮ ಪ್ರೀತಿ ತುಂಬಾ ಅವಶ್ಯವಿರುತ್ತದೆ. ಅಷ್ಟು ಸಮಯ ಸಂಸಾರದ ನೌಕೆಯನ್ನ ಸೊಗಸಾಗಿ ಸಾಗಿಸಿದ ಅಕೆಗೂ ಒಂದು ಆದ್ಯತೆ ಇರಲಿ. ಅವಳ ಉತ್ತಮ ಕೆಲಸಗಳಿಗೆ ಪ್ರಶಂಸೆ, ಆಕೆ ಒಂಚೂರು ಕೂಗಾಡಿದರೆ ಸಹಿಸುವ ದೊಡ್ಡ ಮನಸು, ಆಕೆಯ ಬಗ್ಗೆ ಕಾಳಜಿ, ಅವಳೊಂದಿಗೆ ಮಮತೆ ತುಂಬಿದ ನಾಲ್ಕು ಮಾತುಗಳು… ಇವೆಲ್ಲವೂ ಆಕೆಗೆ ಆ ಸಮಯದಲ್ಲಿ ಸಿಕ್ಕಿದರೆ ಆಕೆಯ ಅರ್ಧ ಋಣವನ್ನು ನೀವು ತೀರಿಸಿದಂತೆಯೇ ಸರಿ. ನೆನಪಿರಲಿ, ಹೆಣ್ಣು ಮತ್ತೊಂದು ಜೀವವನ್ನು ಭೂಮಿಗೆ ತರಲು ಹೊತ್ತ ಅಂಗದ ಒಂದಂಶದ ಬೀಳ್ಕೊಡುಗೆ ಈ ಮೆನೋಪಾಸ್.

Tags:
error: Content is protected !!