ಕಿಡ್ನಿ ಸ್ಟೋನ್ ಸಮಸ್ಯೆ ಈಗ ಸಾಮಾನ್ಯ ಎಂಬಂತಾಗಿದೆ. ಅತ್ಯಾಧುನಿಕ ಚಿಕಿತ್ಸೆಗಳಿಂದ ಇದನ್ನು ನಿವಾರಣೆ ಮಾಡಬಹುದಾದರೂ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ.
ಹೆಚ್ಚು ನೀರು ಕುಡಿಯುವುದು, ಉತ್ತಮ ಆಹಾರ ಸೇವಿಸುವುದರಿಂದಲೇ ಕಿಡ್ನಿಯಲ್ಲಿ ಕಲ್ಲಾಗುವುದನ್ನು ತಪ್ಪಿಸಿ ಆರೋಗ್ಯಯುತ ಜೀವನ ನಡೆಸಬಹುದು.
ತಿಳಿದಿರಬೇಕಾದ ಅಂಶಗಳು
* ದೇಹದಲ್ಲಿ ಉಪ್ಪು, ಕೆಲವು ಲವಣಾಂಶಗಳು ಹರಳಿನ ರೂಪಕ್ಕೆ ಮಾರ್ಪಟ್ಟು ಕಿಡ್ನಿಯಲ್ಲಿ ಸೇರುತ್ತವೆ. ಇವುಗಳನ್ನೇ ಸರಳವಾಗಿ ಕಿಡ್ನಿ ಸ್ಟೋನ್ ಎನ್ನುವುದು.
* ಹೆಚ್ಚು ನೀರು ಅಥವ ನೀರಿ ಅಂಶ ಹೆಚ್ಚಿರುವ ಆಹಾರ ಸೇವನೆಯಿಂದ ಘನ ರೂಪಕ್ಕೆ ತಿರುಗಿನ ಅರಳುಗಳು ಕರಗಿ ಮೂತ್ರದೊಂದಿಗೆ ಹೊರಗೆ ಬರುತ್ತವೆ.
* ನೀರಿನ ಸೇವನೆ ಕಡಿಮೆಯಾದಷ್ಟೂ ದೇಹದಲ್ಲಿನ ಲವಣಾಂಶಗಳು ಘನ ರೂಪಕ್ಕೆ ತಿರುಗಿ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತಾ ಹೋಗುತ್ತದೆ.
* ಹೊಟ್ಟೆಯ ಕೆಳಗೆ, ಪೆಕ್ಕೆಲುಬುಗಳ ಬಳಿ ನೋವು ಕಾಣಿಸಿಕೊಳ್ಳುವುದು, ಮೂತ್ರ ಮಾಡುವಾಗ ನೋವುಂಟಾಗುವುದು ಕಿಡ್ನಿ ಸ್ಟೋನ್‌ನ ಲಕ್ಷಣ.
* ಕಿಡ್ನಿ ಸ್ಟೋನ್ ಅನುವಂಶೀಯವೂ ಹೌದು. ವೈದ್ಯರ ಸಲಹೆ ಪಡೆದು ಉತ್ತಮ ಆಹಾರ ಕ್ರಮ ರೂಢಿಸಿಕೊಂಡರೆ ಇದನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು.
* ಬೇರೆ ಬೇರೆ ಆರೋಗ್ಯ ಸಮಸ್ಯೆಗಳಿಗೆ ಮಾತ್ರೆಗಳನ್ನು ಹೆಚ್ಚಾಗಿ ತೆಗೆದುಕೊಳ್ಳುವುದರಿಂದಲೂ ಕಿಡ್ನಿ ಸ್ಟೋನ್ ಉಂಟಾಗುತ್ತದೆ.
* ನಾವು ಸೇವಿಸುವ ನೀರಿನಲ್ಲಿ ಹೆಚ್ಚಿನ ಕ್ಯಾಲ್ಸಿಯಂ, ಲವಣಾಂಶಗಳು ಇದ್ದರೆ ಅದರಿಂದಲೂ ಕಿಡ್ನಿ ಸ್ಟೋನ್ ಉಂಟಾಗಬಹುದು.
* ದಿನಕ್ಕೆ ಕನಿಷ್ಟ ೪-೬ ಲೀ. ನೀರು ಅಥವಾ ಪೇಯಗಳ ಸೇವನೆಯಿಂದ ಕಿಡ್ನಿ ಸ್ಟೋನ್ ಉಂಟಾಗುವುದನ್ನು ತಡೆಯಬಹುದು.
* ಅಕ್ಸಲೇಟ್ ಅಂಶ ಅಧಿಕವಾಗಿರುವ ಮಾಂಸ, ನಟ್ಸ್, ಬ್ರೋಕಲಿ ಮುಂತಾದ ಆಹಾರಗಳ ಸೇವನೆಗೆ ಮಿತಿ ಹೇರಬೇಕು.
* ತಂಬಾಕು, ಗುಟ್ಕಾ ಸೇವೆನೆ ಅತಿಯಾದರೂ ಕಿಡ್ನಿ ಸ್ಟೋನ್ ಉಂಟಾಗುತ್ತದೆ. ಹಾಗಾಗಿ ಇವುಗಳಿಗೆ ಕಡಿವಾಣ ಹಾಕಬೇಕು.
* ದೇಹದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿ ಇಟ್ಟುಕೊಂಡು, ಅಧಿಕ ಬೊಜ್ಜು ಉಂಟು ಮಾಡುವ ಆಹಾರಗಳನ್ನು ವರ್ಜಿಸಬೇಕು.
* ಎಳನೀರು, ನಿಂಬೆರಸ, ಬಾರ್ಲಿ ನೀರು, ಬಾಳೆ ದಿಂಡಿನ ರಸ, ದಾಳಿಂಬೆ ಜ್ಯೂಸ್, ಹಣ್ಣುಗಳ ಸೇವನೆ ಒಳ್ಳೆಯದು.