ತಿರುಗುತ್ತಲೇ ಇರುವ ಬುಗುರಿ
ಬೆರಗು ಮೂಡಿಸಿ
ಬಣ್ಣದ ಬುಗುರಿ
ಬಚ್ಚಿಡಲಾಗದ
ಸೂರ್ಯನ ಹಾಗೆ
ಗಿರಗಿರನೆ ತಿರುಗುತ್ತ
ಗೆರೆಯದಾಟಿ ಮರೆತು ಕಕ್ಕುಲಾತಿ
ಆಗಾಗ ಹೊಡೆದು ಗುನ್ನ
ಮಾಡಿತ್ತು
ಘಾಸಿ
ವ್ಯಂಗ್ಯ ಕೀಟಲೆಗಳಲಿ
ನಗಿಸಿತ್ತು ಸುತ್ತ ನೆರೆದವರ
ಆಕಾಶಕ್ಕೆ ನೆಗೆದು
ಪಾತಾಳಕ್ಕೂ ಜಿಗಿದು
ಬಿಡಿಸಿ ಬಗೆಬಗೆ ಚಿತ್ತಾರ
ತನ್ನ ಸುತ್ತ ತಾನೇ ಬಲೆನೇಯ್ದು
ತಳಮಳದಿ ನಶೆಯೊಳಗೆ ತೇಲುತ್ತ
ತಕರಾರುಗಳ ಜೀಕುತ್ತ
ಅನಾದಿ ಏಕಾಂಗಿ ನಾದವ ನುಡಿಸುತ್ತ
ಯಾರ ಮಾತಿಗೂ ಕೇರು ಮಾಡದೆ
ಸುಡುಸಂಕಟ
ಭೂಮಿ ಸುತ್ತುತ್ತಲೇ ಇತ್ತು
– ಎಸ್.ನರೇಂದ್ರಕುಮಾರ್





