ರೇಣುಕಾ ನಿಡುಗುಂದಿ
ಯಾವುದೇ ಒಬ್ಬ ಸರ್ವಾಧಿಕಾರಿ ಅಥವಾ ಭ್ರಷ್ಟ ರಾಜಕಾರಣಿ ಜನರಲ್ಲಿ ತನ್ನ ಬಗ್ಗೆ ಭಯ ಹುಟ್ಟಿಸಿ ಆಡಳಿತ ನಡೆಸುತ್ತಾನೆ. ಆದರೆ, ಯಾವಾಗ ಜನರು ಆತನನ್ನು ನೋಡಿ ನಗಲು ಹಾಗೂ ಹಾಸ್ಯ ಮಾಡಲು ಆರಂಭಿಸುತ್ತಾರೋ, ಆತನ ಅಧಿಕಾರದ ತಳಹದಿ ಅಲ್ಲಾಡತೊಡಗುತ್ತದೆ.
ಇತಿಹಾಸದ ಪುಟಗಳಲ್ಲಿ ಕೆಲವು ಪ್ರತಿಭಟನೆಗಳು ತಮ್ಮ ಗಂಭೀರತೆಯಿಂದ ಗಮನ ಸೆಳೆದರೆ, ಇನ್ನು ಕೆಲವು ತಮ್ಮ ವಿಭಿನ್ನ ಹಾಗೂ ವ್ಯಂಗ್ಯಭರಿತ ಶೈಲಿಯಿಂದ ಜಗತ್ತಿನ ಗಮನ ಸೆಳೆಯುತ್ತವೆ. ಅಂತಹದ್ದೇ ಒಂದು ವಿಚಿತ್ರ ಮತ್ತು ಐತಿಹಾಸಿಕ ರಾಜಕೀಯ ಪ್ರತಿಭಟನೆಯೇ ‘ಕಾಕ್ರೋಚ್ ಪಾರ್ಟಿ ಆಂದೋಲನ‘ (The Cockroach
Party Movement). ಇದು ವ್ಯವಸ್ಥೆಯ ವಿರುದ್ಧ ಜನಸಾಮಾನ್ಯರು ಹೂಡಿದ ಅತ್ಯಂತ ಸೃಜನಶೀಲ ರಾಜಕೀಯ ಸಮರ.
ಜಿರಳೆ ಕ್ರಾಂತಿ (ಬೆಲಾರಸ್‌ನ ಹೋರಾಟ) ೨೦೨೦ರಲ್ಲಿ ಯುರೋಪ್‌ನ ಬೆಲಾರಸ್ (Belarus) ದೇಶದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಈ ಆಂದೋಲನವು ಜಾಗತಿಕವಾಗಿ ಮುಂಚೂಣಿಗೆ ಬಂದಿತು. ಅಲ್ಲಿನ ಸರ್ವಾಧಿಕಾರಿ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ (Alexander Lukashenko) ಕಳೆದ ೨೬ ವರ್ಷಗಳಿಂದ ಅಧಿಕಾರದಲ್ಲಿದ್ದರು. ಅವರ ಆಡಳಿತ, ಭ್ರಷ್ಟಾಚಾರ ಮತ್ತು ವಿರೋಧ ಪಕ್ಷದವರನ್ನು ಹತ್ತಿಕ್ಕುವ ಶೈಲಿಯಿಂದ ಜನ ಬೇಸತ್ತಿದ್ದರು.
ಆ ಸಮಯದಲ್ಲಿ ಅಲ್ಲಿನ ಪ್ರಮುಖ ಬ್ಲಾಗರ್ ಮತ್ತು ರಾಜಕೀಯ ಆಕ್ಟಿವಿಸ್ಟ್ ಆಗಿದ್ದ ಸೆರ್ಗೆಯ್ ತಿಖಾನೋವ್ಸ್ತ್ರ್ಕಿ (Sergei Tikhanovsky) ಎಂಬುವವರು ಅಧ್ಯಕ್ಷ ಲುಕಾಶೆಂಕೊ ಅವರನ್ನು ಸೋವಿಯತ್ ಕಾಲದ ಒಂದು ಪ್ರಸಿದ್ಧ ಮಕ್ಕಳ ಕತೆಯಾದ ‘ದಿ ಮಾನ್ಸ್ತ್ರ್ಟರ್ ಕಾಕ್ರೋಚ್‘ (The Monster Cockroach) ಎಂಬ ಕಲ್ಪನೆಗೆ ಹೋಲಿಸಿದರು. ಆ ಕತೆಯಲ್ಲಿ ಒಂದು ಸಣ್ಣ ಜಿರಳೆ ತನ್ನ ಮೀಸೆಗಳನ್ನು ತಿರುವುತ್ತಾ ಎಲ್ಲಾ ಪ್ರಾಣಿಗಳನ್ನು ಹೆದರಿಸುತ್ತಿರುತ್ತದೆ. ತಿಖಾನೋವ್ಸ್ತ್ರ್ಕಿ ತಮ್ಮ ಭಾಷಣಗಳಲ್ಲಿ, ‘ನಾವು ಈ ಜಿರಳೆಯನ್ನು ಅಧಿಕಾರದಿಂದ ಓಡಿಸಬೇಕು‘ ಎಂದು ಕರೆ ನೀಡಿದರು. ಇದು ಜನಸಾಮಾನ್ಯರ ಮನಸ್ಸಿಗೆ ಎಷ್ಟು ತಟ್ಟಿತೆಂದರೆ, ಇಡೀ ಹೋರಾಟಕ್ಕೆ ‘ಕಾಕ್ರೋಚ್ ರೆವಲ್ಯೂಷನ್‘ (Slipper Revolution/ ಜಿರಳೆ ಕ್ರಾಂತಿ) ಎಂಬ ಹೆಸರು ಬಂದಿತು.
ಈ ಆಂದೋಲನದ ಅತ್ಯಂತ ಆಕರ್ಷಕ ಭಾಗವೆಂದರೆ ಜನರು ಪ್ರತಿಭಟನೆಗೆ ಬಳಸಿದ ಆಯುಧಗಳು.
ಚಪ್ಪಲಿಗಳ ಪ್ರದರ್ಶನ: ಜನರು ತಮ್ಮ ಕೈಗಳಲ್ಲಿ ಹಳೆಯ ಚಪ್ಪಲಿಗಳನ್ನು (Slippers) ಹಿಡಿದು ಬೀದಿಗಿಳಿದರು. ಜಿರಳೆಯನ್ನು ಕೊಲ್ಲಲು ಅಥವಾ ಓಡಿಸಲು ಚಪ್ಪಲಿ ಬಳಸುವುದು ವಾಡಿಕೆ. ಹಾಗಾಗಿ, ಸರ್ವಾಧಿಕಾರಿ ಸರ್ಕಾರವನ್ನು ಓಡಿಸಲು ಚಪ್ಪಲಿಗಳೇ ನಮ್ಮ ಆಯುಧ ಎಂಬ ಸಂದೇಶ ರವಾನಿಸಿದರು.
ಜಿರಳೆ ಚಿತ್ರದ ಪೋಸ್ಟರ್‌ಗಳು: ದೇಶದ ಪ್ರಮುಖ ನಗರಗಳ ಗೋಡೆಗಳ ಮೇಲೆ, ಬ್ಯಾನರ್‌ಗಳ ಮೇಲೆ ಜಿರಳೆಯ ಚಿತ್ರ ಬಿಡಿಸಿ ಅದರ ಕೆಳಗೆ ಮಾಜಿ ಅಧ್ಯಕ್ಷರ ಮುಖ ಹೋಲುವಂತೆ ಮೀಸೆಗಳನ್ನು ಬರೆಯಲಾಗಿತ್ತು.
ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್: ಇಂಟರ್ನೆಟ್‌ನಲ್ಲಿ ಹ್ಯಾಶ್ ಟ್ಯಾಗ್ ಬಳಸಿ ಲಕ್ಷಾಂತರ ಜನರು ಜಿರಳೆ ಮತ್ತು ಚಪ್ಪಲಿಯ ಮೀಮ್‌ಗಳನ್ನು ಹಂಚಿಕೊಳ್ಳುವ ಮೂಲಕ ಸರ್ಕಾರದ ಯಾಂತ್ರಿಕ ಕ್ರೌರ್ಯವನ್ನು ಹಾಸ್ಯದ ವಸ್ತುವಾಗಿಸಿದರು.
ಯಾವುದೇ ಒಬ್ಬ ಸರ್ವಾಧಿಕಾರಿ ಅಥವಾ ಭ್ರಷ್ಟ ರಾಜಕಾರಣಿ ಜನರಲ್ಲಿ ತನ್ನ ಬಗ್ಗೆ ಭಯ ಹುಟ್ಟಿಸಿ ಆಡಳಿತ ನಡೆಸುತ್ತಾನೆ. ಆದರೆ, ಯಾವಾಗ ಜನರು ಆತನನ್ನು ನೋಡಿ ನಗಲು ಹಾಗೂ ಹಾಸ್ಯ ಮಾಡಲು ಆರಂಭಿಸುತ್ತಾರೋ, ಆತನ ಅಽಕಾರದ ತಳಹದಿ ಅಲ್ಲಾಡ ತೊಡಗುತ್ತದೆ. ಕಾಕ್ರೋಚ್ ಆಂದೋಲನ ಮಾಡಿದ್ದು ಇದನ್ನೇ. ಕಾಕ್ರೋಚ್ ಪಾರ್ಟಿ ಅಥವಾ ಜಿರಳೆ ಆಂದೋಲನವು ಕೇವಲ ಬೆಲಾರಸ್ ದೇಶಕ್ಕೆ ಸೀಮಿತವಾಗಿಲ್ಲ; ಇದು ಜಗತ್ತಿನ ಯಾವುದೇ ಮೂಲೆಯಲ್ಲಿ ರಾಜಕಾರಣಿಗಳು ಸಾರ್ವಜನಿಕ ಸೇವಕರಾಗುವ ಬದಲು ಸಮಾಜವನ್ನು ನುಂಗಿ ನೀರು ಕುಡಿಯುವ ’ಪರಾವಲಂಬಿ ಕೀಟಗಳಂತೆ’ ವರ್ತಿಸಿದಾಗ ಜನರು ಹೇಗೆ ತಿರುಗಿಬೀಳಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆ. ಪ್ರಜಾಪ್ರಭುತ್ವದಲ್ಲಿ ಜನರೇ ಪ್ರಭುಗಳು ಮತ್ತು ವ್ಯವಸ್ಥೆ ಹಳಿ ತಪ್ಪಿದಾಗ ಅದನ್ನು ಸರಿಪಡಿಸಲು ನಾಗರಿಕರು ಬೀದಿಗಿಳಿಯಲು ಹಿಂಜರಿಯುವುದಿಲ್ಲ ಎಂಬುದನ್ನು ಈ ಇತಿಹಾಸ ನೆನಪಿಸುತ್ತದೆ



