ರಸಗೊಬ್ಬರ ನಿಯಂತ್ರಣ ಆದೇಶ ೧೯೮೫ರ ಅನ್ವಯದಂತೆ ನ್ಯಾನೊ ಡಿಎಪಿ ಯೂರಿಯಾ ಬಳಕೆಗೆ ಸರ್ಕಾರ ಅನುಮತಿ ನೀಡಿದ್ದರಿಂದ ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳ ಮೂಲಕ ರೈತರಿಗೆ ದ್ರವರೂಪದ ನ್ಯಾನೊ ಡಿಎಪಿ ಯೂರಿಯಾ ಪೂರೈಕೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ.
ದೇಶದ ಎಲ್ಲ ಕೃಷಿ ಹವಾಮಾನ ವಲಯಗಳ ವ್ಯಾಪ್ತಿಯಲ್ಲಿ ದ್ರವರೂಪದ ನ್ಯಾನೊ ಡಿಎಪಿ ಬಳಕೆಗೆ ಸಂಬಂಧಿಸಿದಂತೆ ರಸಗೊಬ್ಬರ ಇಲಾಖೆ ಮತ್ತು ಗೊಬ್ಬರ ತಯಾರಿಸುವ ಕಂಪೆನಿಗಳಿಂದ ಅಭಿಯಾನ ಆರಂಭಿಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ತಿಳಿಸಿದ್ದಾರೆ. ಸದ್ಯ ಕೋರಮಂಡಲ್ ಇಂಟರ್ ನ್ಯಾಷನಲ್ ಕಂಪೆನಿ, ಜುವಾರಿ ಫಾರ್ಮ್ ಹಬ್ ಕಂಪೆನಿ ಮತ್ತು ಇಫ್ಕೊ ಕಂಪೆನಿಗಳು ಈ ಗೊಬ್ಬರವನ್ನು ಉತ್ಪಾದಿಸುತ್ತಿವೆ ಎಂದು ತಿಳಿಸಿದ್ದಾರೆ.





