Mysore
24
haze

Social Media

ಶನಿವಾರ, 06 ಡಿಸೆಂಬರ್ 2025
Light
Dark

ಆಶಾ ಅವರ ಕೃಷಿ ಕಂಪನಿ

 ಡಿ.ಎನ್.ಹರ್ಷ

ಕಾಲಕ್ಕೆ ತಕ್ಕಂತೆ ನಾವೂ ಬದಲಾಗಬೇಕು. ಇಲ್ಲದಿದ್ದರೆ ಹಿಂದುಳಿದು ಬಿಡು ತ್ತೇವೆ ಎಂಬ ಮಾತಿದೆ. ನಮ್ಮದು ಕೃಷಿ ಪ್ರಧಾನ ದೇಶವಾದರೂ ನಾವೂ ಆಧುನಿಕತೆಗೆ ತೆರೆದುಕೊಳ್ಳುವ ಸಲುವಾಗಿ ಎಲ್ಲ ರಂಗಗಳಲ್ಲಿಯೂ ಯಾಂತ್ರಿಕತೆಯನ್ನು ಅಳ ವಡಿಸಿಕೊಳ್ಳುತ್ತಿದ್ದೇವೆ. ಇಂತಹ ಯಾಂತ್ರಿಕತೆಯನ್ನು ನಮ್ಮ ಕೃಷಿ ರಂಗದಲ್ಲಿಯೂ ಅಳವಡಿಸಿಕೊಂಡು ಮುಂದುವರಿಯುವುದು ಪ್ರಸ್ತುತದಲ್ಲಿಅನಿವಾರ್ಯವಾಗಿದೆ.

ದೊಡ್ಡಬಳ್ಳಾಪುರದ ಮೂಲದ ವಿ.ಆಶಾ, ಎಂಬವರು ಬೆಂಗಳೂರಿನಲ್ಲಿ ‘ನವೋಮಿಕ ಅಗ್ರಿ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಎನ್ನುವ ಸಂಸ್ಥೆಯೊಂದನ್ನು ಕಟ್ಟಿಕೊಂಡು ನೂರಾರು ಕೃಷಿಕರಿಗೆ ಅಗತ್ಯ ಕೃಷಿ ಉಪಕರಣಗಳನ್ನುಪೂರೈಕೆ ಮಾಡುತ್ತಿದ್ದಾರೆ.

ಸಾಂಪ್ರದಾಯಿಕ ಕುಟುಂಬವೊಂದರಲ್ಲಿ ಜನಿಸಿದ ಆಶಾ ಬಿ.ಇಡಿ ಜತೆಗೆ ಇಂಗ್ಲಿಷ್ ವಿಷಯದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಸರ್ಕಾರದ ಉನ್ನತ ಹುದ್ದೆಗಳನ್ನು ಅಲಂಕರಿಸುವ ಅವಕಾಶವಿದ್ದರೂ ಅವುಗಳತ್ತ ಆಸಕ್ತಿ ತೋರದೆ ತನ್ನದೇ ಆದ ಸ್ವಂತ ಉದ್ಯೋಗ ಮಾಡ ಬೇಕು ಎಂದುಕೊಂಡ ಆಶಾ ಆಯ್ಕೆ ಮಾಡಿ ಕೊಂಡದ್ದು ಕೃಷಿ ಕ್ಷೇತ್ರವನ್ನು. ಪ್ರಾರಂಭದಲ್ಲಿ, ರತ್ನಗಿರಿ ಇಂಪೆಕ್ಸ್ ಎಂಬ ಸಂಸ್ಥೆಯಲ್ಲಿ ಕೆಲಸ ಮಾಡಿ ಮುಂದೆ ಕೋಡಿ ಬೈಲು ಅಗ್ರಿ ಏಜೆನ್ಸಿಯಲ್ಲಿ ದಶಕಗಳಿಗಿಂತಲೂ ಹೆಚ್ಚು ಕಾಲ ಕೆಲಸ ಮಾಡುತ್ತಾ ಭಾರತ ಸೇರಿದಂತೆ ಚೀನಾ, ಕೊರಿಯಾ ಮುಂತಾದ ದೇಶಗಳಲ್ಲಿ ಪ್ರವಾಸ ಮಾಡಿ ಕೃಷಿ ಯಂತ್ರ ಜ್ಞಾನದಲ್ಲಿ ಪರಿಣತಿ ಪಡೆದುಕೊಂಡಿದ್ದಾರೆ.

೨೦೨೦ರಲ್ಲಿ ತಮ್ಮದೇ ಆದ ಸ್ವಂತ naomika  ಎಂಬ ಕಂಪೆನಿಯನ್ನು ಆರಂಭಿಸಿದರು. ಉದ್ಯಮ ಆರಂಭಿಸಿದ ಆರಂಭದಲ್ಲಿಯೇ ಕೊರೊನಾ ಮಹಾಮಾರಿ ಆವರಿಸಿ ಆಶಾರವರನ್ನು ವಿಚಲಿತ ಗೊಳಿಸಿತು. ಆದರೂ ಎದೆಗುಂದದ ಇವರು ಒಂದು ಕೋಟಿ ರೂ.ಗಳಿಗೂ ಹೆಚ್ಚು ವ್ಯವಹಾರ ಮಾಡುವ ಮೂಲಕ ಸವಾಲನ್ನು ಮೆಟ್ಟಿನಿಂತರು. ಅಷ್ಟೇ ಅಲ್ಲ ಇಂದು ೧೫ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುವ ಮೂಲಕ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳಿಗೆ ಕೃಷಿ ಉಪಕರಣಗಳನ್ನು ಪೂರೈಸು ವಷ್ಟರ ಮಟ್ಟಿಗೆ ತಮ್ಮ ಉದ್ಯೋಮ ವನ್ನು ವಿಸ್ತರಿಸಿಕೊಂಡಿದ್ದಾರೆ.

ನವೋಮಿಕ ಕಂಪೆನಿಯಲ್ಲಿ ಉತ್ಪನ್ನ ಶ್ರೇಣಿಯ ಬ್ರಷ್ ಕಟ್ಟರ್‌ಗಳು, ೨ ಸ್ಟ್ರೋಕ್ ಮತ್ತು ೪ ಸ್ಟ್ರೋಕ್, ಬ್ಯಾಟರಿ ಸ್ಪ್ರೇಯರ್‌ಗಳು, ನ್ಯಾಪ್‌ಸಾಕ್ ಸ್ಪ್ರೇಯರ್, ಪವರ್ ಸ್ಪ್ರೇಯರ್‌ಗಳಂತಹ ಎಲ್ಲ ರೀತಿಯ ಸ್ಪ್ರೇಯರ್‌ಗಳು, ಎಲ್ಲ ರೀತಿಯ ಟಿಲ್ಲರ್‌ಗಳು ಮತ್ತು ಪವರ್ ವೀಡರ್‌ಗಳು, ಚೈನ್ ಗರಗಸಗಳು, ಚಾಫ್ ಕಟ್ಟರ್ ಗಳು, ಹಾಲು ಕರೆಯುವ ಯಂತ್ರಗಳು, ಲಾನ್ ಮೂವರ್ಸ್, ಜನರೇಟರ್‌ಗಳು ಸೇರಿ ದಂತೆ ೧೦೦ಕ್ಕೂ ಹೆಚ್ಚು ವಿವಿಧ ಕೃಷಿ ಉಪಕರಣಗಳನ್ನು ಇವರು ಮಾರಾಟ ಮಾಡುತ್ತಿದ್ದಾರೆ.

ರಾಜ್ಯದಲ್ಲಿಯೇ ಹೊಂಡಾ ಕಂಪೆನಿಯ ಪಾಲುದಾರರಾಗಿರುವ ಇವರು naomika  honda ಪವರ್ ಉತ್ಪನ್ನಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡುತ್ತಾ ಬಂದಿದ್ದಾರೆ. ಪ್ರಸ್ತುತ   naomika ಮಲ್ಟಿ ಸ್ಕಿಲ್ ಡೆವಲ ಪ್ಮೆಂಟ್ ಸೆಂಟರ್’ ಎನ್ನುವ ಕೌಶಲ ತರಬೇತಿ ಕೇಂದ್ರದ ಮೂಲಕ ಅನೇಕರಿಗೆ ಕೃಷಿ ಯಂತ್ರೋಪಕರಣಗಳನ್ನು ರಿಪೇರಿ ಮಾಡುವ ತರಬೇತಿ ನೀಡುತ್ತಿದ್ದಾರೆ.

ಇಂತಹ ಕ್ಷೇತ್ರಗಳಿಗೆ ಹೆಣ್ಣು ಮಕ್ಕಳು ಬರಬೇಕು. ತಮ್ಮದೇ ಒಂದು ಸಂಸ್ಥೆ ತೆರೆದು ನೂರಾರು ಮಹಿಳೆಯರಿಗೆ ಉದ್ಯೋಗ ಕೊಡಬೇಕು. ಸಬ್ಸಿಡಿ ದರಕ್ಕಿಂತಲೂ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಕೃಷಿ ಯಂತ್ರೋಪಕ ರಣಗಳನ್ನು ಕೃಷಿಕರಿಗೆ ತಲುಪಿಸಬೇಕು ಎನ್ನುವ ಕನಸು ಆಶಾರದ್ದು. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಇವರ ಕಂಪೆನಿಯು ಬೆಂಗಳೂರಿನ ಸುಂಕದಕಟ್ಟೆಯಲ್ಲಿದೆ. ಹೆಚ್ಚಿನ ಮಾಹಿತಿಗಾಗಿ ಡಿಡಿಡಿ. www.naomika.co.in  ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

ಕೆಲವು ಸಂಘ-ಸಂಸ್ಥೆಗಳು ಆಶಾರವರ ಸಾಧನೆಯನ್ನು ಗುರುತಿಸಿ ಗೌರವಿಸಿವೆ. ಅಲ್ಲದೆ ಇವರ ಸಂಸ್ಥೆಯ ಉಪಕರಣಗಳು ಬೇರೆ ಬೇರೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಕೃಷಿ ಮೇಳಗಳಲ್ಲಿ ವಸ್ತು ಪ್ರದರ್ಶನಗೊಂಡು ವಿವಿಧ ಪ್ರಶಸ್ತಿ ಗಳನ್ನೂ ಪಡೆದಿವೆ. ಆಶಾ ಅವರನ್ನು ಸಂಪರ್ಕಿ ಸಬೇಕಾ ದ್ದಲ್ಲಿ ೮೦೯೫೭-೭೨೫೫೫ ಈ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

 

Tags:
error: Content is protected !!