ನಾಟಕ ಎನ್ನುವುದೇ ಸುಳ್ಳಿನ ಆಟ. ಈ ಸುಳ್ಳಿನ ಮೂಲಕವೇ ಸತ್ಯದ ಹುಡುಕಾಟ ಎನ್ನುವ ವಿಡಂಬನಾತ್ಮಕ ನಾಟಕ ‘ಅಡುಗೆ ಮನೆಯಲ್ಲೊಂದು ಹುಲಿ’.
ನಟನ ರಂಗಶಾಲೆಯ ವಾರಾಂತ್ಯ ರಂಗ ಪ್ರದರ್ಶನವಾಗಿ ಸೆ. ೧೧ ರಂದು ಪ್ರದರ್ಶನಗೊಳ್ಳುತ್ತಿರುವ ಈ ನಾಟಕದ ರಚನೆ ಬಿ. ಸುರೇಶ್ ಅವರದ್ದು. ನಟನದ ೨೦೨೧-೨೨ನೇ ಸಾಲಿನ ರಂಗಾಭ್ಯಾಸಿಗಳ ೩ನೇ ತಂಡದಿಂದ ಈ ಪ್ರಯೋಗ ನಡೆಯಲಿದ್ದು, ನಟನ ರಂಗಶಾಲೆಯ ಪ್ರಾಂಶುಪಾಲರಾದ ಮೇಘ ಸಮೀರ ಅವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಈ ನಾಟಕ ಪ್ರದರ್ಶನವಾಗಲಿದೆ.
ಸ್ಥಳ: ನಟನ ರಂಗಶಾಲೆ, ರಾಮಕೃಷ್ಣ ನಗರ, ಮೈಸೂರು
ಸಮಯ: ಸೆ. 11 ಭಾನುವಾರ ಸಂಜೆ 6.30ಕ್ಕೆ
ಹೆಚ್ಚಿನ ಮಾಹಿತಿಗಾಗಿ ದೂ.ಸಂ. 7259537777, 9480468327