-ಆರ್.ಎಸ್. ಆಕಾಶ್
ಕೊರೊನಾ ನಂತರ ವಿಶ್ವ ಮಟ್ಟದಲ್ಲಿ ಹಲವಾರು ಸಮಸ್ಯೆಗಳು ಎದುರಾಗಿವೆ. ಇಂತಹ ಹೊತ್ತಿನಲ್ಲಿಯೇ ಮಂಕಿಪಾಕ್ಸ್ (ಮಂಗನ ಕಾಯಿಲೆ) ಎನ್ನುವ ಹೊಸ ವೈರಸ್ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದು, ಹೆಚ್ಚಿನವರು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ಇದಕ್ಕೆ ಹೆಚ್ಚಿನ ಆತಂಕ ಬೇಡ ಎನ್ನುತ್ತವೆ ಇಲ್ಲಿಯವರೆಗೂ ಬಂದಿರುವ ವರದಿಗಳು.
ಮಂಕಿಪಾಕ್ಸ್ ಮೂಲ
ಇದು ನೈಜೀರಿಯಾದ ತಳಿಯಾಗಿದ್ದು, ಮಾನವರು ಮತ್ತು ಇತರ ಪ್ರಾಣಿಗಳಲ್ಲಿ ಕಂಡುಬರುವ ಸಾಂಕ್ರಾಮಿಕ ಕಾಯಿಲೆ. ಈಗ ಜಾಗತಿಕ ಮಟ್ಟದಲ್ಲಿ ವಿವಿಧ ದೇಶಗಳಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಮೇ ೬ ರಂದು ನಮ್ಮ ದೇಶದಲ್ಲಿ (ಕೇರಳ) ಮೊದಲ ಪ್ರಕರಣ ಪತ್ತೆಯಾಗಿದ್ದು, ಪ್ರಸ್ತುತ ಕೇರಳದಲ್ಲಿ ಎರಡು ಸಕ್ರಿಯ ಪ್ರಕರಣಗಳು ಇವೆ.
ಮುಖ್ಯವಾಗಿ ಯುರೋಪ್, ಉತ್ತರ ಮತ್ತು ದಕ್ಷಿಣ ಅಮೆರಿಕಾದಲ್ಲಿ, ಏಷ್ಯಾ, ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಖಂಡಗಳಲ್ಲಿ ಈ ವೈರಾಣು ಹರಡುವಿಕೆ ಹೆಚ್ಚಿದೆ. ಈಗಾಗಲೇ ೬೩ ದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಕಂಡುಬಂದಿವೆ. ಜುಲೈ ೨೦ರ ಹೊತ್ತಿಗೆ ಜಾಗತಿಕವಾಗಿ ಒಟ್ಟು ೧೪,೫೪೭ ಪ್ರಕರಣಗಳು ದೃಢಪಟ್ಟಿವೆ.
ರೋಗ ಲಕ್ಷಣಗಳು
ಮಂಕಿಪಾಕ್ಸ್‌ನ ಲಕ್ಷಣಗಳು ೬ ರಿಂದ ೧೩ ದಿನಗಳಲ್ಲಿ ಕಾಣಿಸಿಕೊಳ್ಳುತ್ತವೆ. ಮುಖ್ಯವಾಗಿ ಜ್ವರ, ತೀವ್ರ ತಲೆನೋವು, ಬೆನ್ನು ಮತ್ತು ಸ್ನಾಯುಗಳಲ್ಲಿ ನೋವು, ಸುಸ್ತು ಕಂಡುಬರುತ್ತದೆ. ದುಗ್ಥರಸ ಗ್ರಂಥಿಗಳು ಊದಿಕೊಳ್ಳುತ್ತವೆ. ಮುಖ್ಯವಾಗಿ ಚರ್ಮದ ಮೇಲೆ ದೊಡ್ಡ ಧಾನ್ಯದ ಗಾತ್ರದ ಗುಳ್ಳೆಗಳು ಮೂಡುತ್ತವೆ. ಇದು ಸೋಂಕಿತ ವ್ಯಕ್ತಿಯ ಚರ್ಮವನ್ನು ಸಂಪರ್ಕಿಸಿದಾಗ, ಅವರೊಂದಿಗೆ ಲೈಂಕಿಕ ಕ್ರಿಯೆಯಲ್ಲಿ ತೊಡಗಿದಾಗ, ಬಾಯಿಯಿಂದ ಬಾಯಿಗೆ ಹರಡುತ್ತದೆ.
ಎಚ್ಚರಿಕೆಯ ಕ್ರಮಗಳೇನು?
* ಇಲಿಗಳನ್ನು ಹೋಲುವ ಪ್ರಾಣಿಗಳಿಂದ ಅಂತರ ಕಾಯ್ದುಕೊಳ್ಳಬೇಕು.
* ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು.
* ಸೋಂಕಿತ ವ್ಯಕ್ತಿಯಿಂದ ಅಂತರ ಕಾಯ್ದುಕೊಳ್ಳುವುದು.
* ಕೆಮ್ಮು ಇರುವ ವ್ಯಕ್ತಿ ಬಗ್ಗೆ ಎಚ್ಚರ ವಹಿಸುವುದು
ಈಗಾಗಲೇ ಕೊರೊನಾ ವೈರಸ್‌ಗೆ ಬಳಕೆ ಮಾಡುತ್ತಿರುವ ಲಸಿಕೆಯಿಂದಲೇ ಮಂಕಿಪಾಕ್ಸ್‌ಗೆ ಕಡಿವಾಣ ಹಾಕಬಹುದು. ಇದರಿಂದ ಹೆಚ್ಚಿನ ಪ್ರಮಾಣದ ತೊಂದರೆ ಇಲ್ಲ. ಸೂಕ್ತ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡರೆ ಮಂಗನಕಾಯಿಲೆಯನ್ನು ಸುಲಭವಾಗಿ ನಿಯಂತ್ರಣ ಮಾಡಬಹುದು ಎನ್ನುವ ಮಾತನ್ನು ಈಗಾಗಲೇ ಸಾಕಷ್ಟು ಮಂದಿ ಹಿರಿಯ ಸಂಶೋಧಕರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಯಾವುದೇ ಮಂಕಿಪಾಕ್ಸ್ ಪ್ರಕರಣಗಳು ಕಂಡು ಬಂದಿಲ್ಲ. ಇದು ಅಷ್ಟೊಂದು ಪರಿಣಾಮಕಾರಿಯಾದ ವೈರಸ್ ಅಲ್ಲ. ಆದರೂ ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕು. ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಂಡವರು ಇದರ ಬಗ್ಗೆ ಆತಂಕ ಪಡಬೇಕಿಲ್ಲ. ಈಗಾಗಲೇ ಕೇರಳದಲ್ಲಿ ಮಂಕಿಪಾಕ್ಸ್ ಪ್ರಕರಣ ದಾಖಲಾಗಿದ್ದು, ಈಗಾಗಲೇ ಗಡಿಭಾಗಗಳಲ್ಲಿ ಸೂಕ್ತ ಕಟ್ಟೆಚ್ಚರ ವಹಿಸಿಲಾಗಿದೆ.
– ಡಾ. ಮಹದೇವಪ್ರಸಾದ್, ಡಿಎಸ್‌ಒ, ಮೈಸೂರು