ಕೆಲ ದಿನಗಳ ಹಿಂದೆ ಕೆ.ಆರ್.ಜಿ. ಸ್ಟುಡಿಯೋಸ್ ‘ಉತ್ತರಕಾಂಡ’ ಎನ್ನುವ ಟೈಟಲ್ ಅಡಿಯಲ್ಲಿ ಅಪ್ಪಟ ಉತ್ತರ ಕರ್ನಾಟಕದ ಗ್ಯಾಂಗ್‌ಸ್ಟರ್ ಕತೆ ಹೇಳಲು ತೀರ್ಮಾನಿಸಿತ್ತು. ಆದರೆ ಚಿತ್ರಕ್ಕೆ ನಾಯಕ ಯಾರು ಎನ್ನುವ ಪ್ರಶ್ನೆ ಉತ್ತರ ಸಿಕ್ಕಿರಲಿಲ್ಲ.
ಇದೀಗ ಡಾಲಿ ಧನಂಜಯ್ ಅವರ ಹುಟ್ಟುಹಬ್ಬದ ದಿನವೇ ಡಾಲಿಯೇ ನಾಯಕ ಎಂದು ಘೋಷಿಸಿ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ರಕ್ತಸಿಕ್ತ ಕೈಯಲ್ಲಿ ಸಿಗಾರ್, ಒಂದು ಬದಿ ಒಡೆದ ಕನ್ನಡಕ ಧರಿಸಿ, ಉದ್ದ ಗಡ್ಡ ಬಿಟ್ಟಿರುವ ಡಾಲಿ ಅಪ್ಪಟ ಗ್ಯಾಂಗ್‌ಸ್ಟರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಫಸ್ಟ್‌ಲುಕ್‌ನಲ್ಲಿ ಇರುವ ಗಡಸುತ ಚಿತ್ರದ ನಿರೀಕ್ಷೆಯನ್ನು ಹೆಚ್ಚಿಸಿದೆ. ಈ ಹಿಂದೆ ‘ದಯವಿಟ್ಟು ಗಮನಿಸಿ’, ‘ರತ್ನನ್ ್ರಪಂಚ’ ರೀತಿಯ ವಿಶಿಷ್ಟ ಸಿನಿಮಾಗಳ ನಿರ್ದೇಶನ ಮಾಡಿದ್ದ ರೋಹಿತ್ ಪದಕಿ ನಿರ್ದೇಶನದ ಹಿನ್ನೆಲೆಯಲ್ಲಿಯೂ ಕಾತರತೆ ಹೆಚ್ಚಿದೆ.
ಉತ್ತರ ಕರ್ನಾಟಕದಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣ ನಡೆಯಲಿದ್ದು, ಡಾಲಿ ಅವರ ‘ಹೊಯ್ಸಳ’ ಚಿತ್ರದ ನಂತರ ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ರೋಹಿತ್ ತಿಳಿಸಿದ್ದು, ಮುಂದಿನ ಅಪ್‌ಡೇಟ್ಸ್‌ಗಳಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಚರಣ್ ರಾಜ್ ಸಂಗೀತ, ಸ್ವಾಮಿ ಛಾಯಾಗ್ರಹಣ, ವಿಶ್ವಾಸ್ ಕಲಾ ನಿರ್ದೇಶನ ಚಿತ್ರಕ್ಕಿರಲಿದೆ.