ರಾಜಕುಮಾರ್ ಮೊಮ್ಮಗ, ಪೂರ್ಣಿಮಾ -ರಾಮಕುಮಾರ್ ಮಗ ಧೀರೇನ್ ರಾಮಕುಮಾರ್ ಅಭಿನಯದ ಚೊಚ್ಚಲ ಚಿತ್ರ ಶಿವ ೧೪೩’, ತೆರೆಗೆ ಬರುವ ಮೊದಲೇ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡ, ರಾಷ್ಟ್ರೀಯ ಪ್ರಶಸ್ತಿ ಪಡೆದ ?ಡೊಳ್ಳು’, ಚಾಣಾಕ್ಷ ಎಂಜಿನಿಯರ್ ಒಬ್ಬನ ಕಥಾನಕ ಎನ್ನಲಾದ ?ಕೌಟಿಲ್ಯ’ ಮತ್ತು ಡಿಜಿಟಲ್ ಲೋಕದಲ್ಲಿ ಚಿರಪರಿಚಿತ ಶಬ್ದವೇ ಶೀರ್ಷಿಕೆಯಾದ ?ವಿಕಿಪೀಡಿಯ’ ಈ ವಾರ ತೆರೆಗೆ ಬರುತ್ತಿರುವ ನಾಲ್ಕು ಚಿತ್ರಗಳು.
‘ಶಿವ ೧೪೩’
ರಾಜ್‌ಕುಮಾರ್ ಅವರ ಮೊಮ್ಮಗ, ರಾಮ್‌ಕುಮಾರ್ ಮಗ ಧೀರನ್ ರಾಮ್‌ಕುಮಾರ್ ನಾಯಕನಾಗಿ ಎಂಟ್ರಿ ಕೊಡುತ್ತಿರುವ ಚಿತ್ರ ‘ಶಿವ ೧೪೩’. ಅನಿಲ್ ಕುಮಾರ್ ಆಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ಜಯಣ್ಣ ಫಿಲಂಸ್ ಬಂಡವಾಳ ಹೂಡಿದೆ. ಮಾನ್ವಿತಾ ಕಾಮತ್ ನಾಯಕಿಯಾಗಿರುವ ಚಿತ್ರದಲ್ಲಿ ಚಿಕ್ಕಣ್ಣ, ಪುನೀತ್ ರುದ್ರನಾಗ್, ಸಾಧುಕೋಕಿಲ ಇದ್ದಾರೆ. ಅರ್ಜುನ್ ಜನ್ಯ ಸಂಗೀತ, ಶಿವ ಬಿ.ಕೆ.ಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ.
‘ಡೊಳ್ಳು’
ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಗಳಿಸಿರುವ ಚಿತ್ರ ‘ಡೊಳ್ಳು’. ಒಡೆಯರ್ ಮೂವೀಸ್ ಬ್ಯಾನರ್‌ನಡಿ ಅಪೇಕ್ಷಾ, ಪವನ್ ಒಡೆಯರ್ ದಂಪತಿ ನಿರ್ಮಿಸಿರುವ ಚಿತ್ರವಿದು. ಸಾಗರ್ ಪುರಾಣಿಕ್ ನಿರ್ದೇಶನ, ಶ್ರೀನಿಧಿ ಡಿ.ಎಸ್. ಚಿತ್ರಕಥೆ, ಅನಂತ ಕಾಮತ್ ಎಂ. ಸಂಗೀತ ಸಂೋಂಜನೆ ಚಿತ್ರಕ್ಕಿದೆ. ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ, ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರಣ್ಯ ಸುರೇಶ್ ಸೇರಿ ಹಲವರ ತಾರಾ ಬಳಗವಿದೆ.
‘ಕೌಟಿಲ್ಯ’
ಪ್ರಭಾಕರ್ ಶೇರಖಾನೆ ನಿರ್ದೇಶನದ ಚಿತ್ರ ‘ಕೌಟಿಲ್ಯ’. ಇದಕ್ಕೆ ಬಂಡವಾಳ ಹೂಡಿರುವುದು ಬಿ.ಎ. ವಿಜೇಂದ್ರ ಮತ್ತು ಸುರೇಖಾ. ‘ಬಿಗ್ ಬಾಸ್’ ನಲ್ಲಿ ಪಾಲ್ಗೊಂಡ ಅರ್ಜುನ್ ರಮೇಶ್ ನಾಯಕರಾಗಿದ್ದು, ಪ್ರಿಯಾಂಕ ಚಿಂಚೊಳಿ ನಾಯಕಿ. ಮಡೆನೂರು ಮನು, ಲಕ್ಷ್ಮೀಶ್ ಭಟ್, ಸುಶ್ಮಿತಾ ಸೋನು, ಹರಿಣಿ ಶ್ರೀಕಾಂತ್, ಜೊತೆಗಿದ್ದಾರೆ. ಕಿರಣ್ ಕೃಷ್ಣಮೂರ್ತಿ ಸಂಗೀತ ಸಂೋಂಜನೆ, ನೌಶಾದ್ ಆಲಂ ಛಾಯಾಗ್ರಹಣ ಚಿತ್ರಕ್ಕಿದೆ.
‘ವಿಕಿಪೀಡಿಯ’
ರಫ್ ಕಟ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ‘ವಿಕಿಪೀಡಿಯ’ ಚಿತ್ರ ತಯಾರಾಗಿದ್ದು, ಸೋಮು ಹೊಯ್ಸಳ ಚಿತ್ರದ ನಿರ್ದೇಶಕರು. ಯಶವಂತ್, ಆಶಿಕಾ ಸೋಮಶೇಖರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರದಲ್ಲಿ ರಕ್ಷಿತಾ, ರಾಧಾ ರಾಮಚಂದ್ರ, ಮೈಸೂರು ಶ್ರೀಹರಿ, ಮಂಜುನಾಥ ಹೆಗ್ಡೆ ಜತೆಗಿದ್ದಾರೆ. ರಾಕೇಶ್ ಮತ್ತು ನೀಲಿಮ ಸಂಗೀತ ಸಂೋಂಜನೆ, ಚಿದಾನಂದ್ ಎಚ್.ಕೆ. ಛಾಯಾಗ್ರಹಣ ಇದೆ.