ತಾಜ್‌ಮಹಲ್ 2
ದೇವರಾಜ್ ಕುಮಾರ್ ನಿರ್ದೇಶಿಸಿ, ಮುಖ್ಯಪಾತ್ರದಲ್ಲಿ ನಟಿಸಿರುವ ಚಿತ್ರ ‘ತಾಜ್‌ಮಹಲ್ ೨’. ಸಮೃದ್ಧಿ, ಶೋಭರಾಜ್, ವಿಕ್ಟರಿ ವಾಸು, ಸುಧಿ, ಕಡ್ಡಿಪುಡಿ ಚಂದ್ರು ತಾರಾಗಣದಲ್ಲಿದ್ದಾರೆ. ಮನವರ್ ಸೆ ನವಲಗುಂದ ಗೀತರಚನೆ, ಸಂಭಾಷಣೆ, ವಿಕ್ರಂ ಸಿಲ್ವ ಸಂಗೀತ ಸಂೋಂಜನೆ, ವೀನಸ್ ಮೂರ್ತಿ ಛಾಯಾಗ್ರಹಣ, ವಿಜಯಕುಮಾರ್ ಸಂಕಲನ ಚಿತ್ರಕ್ಕಿದೆ.
ಫ್ಯಾಂಟಸಿ
ಪವನ್ ಡ್ರೀಂ ಫಿಲಂಸ್ ಲಾಂಛನದಲ್ಲಿ ಪವನ್‌ಕುಮಾರ್ ನಿರ್ಮಿಸಿ, ನಿರ್ದೇಶಿಸಿರುವ ಚಿತ್ರ ‘ಫ್ಯಾಂಟಸಿ’. ಆರ್.ಎಸ್.ಗಣೇಶ್ ನಾರಾಯಣ್ ಸಂಗೀತ ಸಂೋಂಜನೆ, ಪಿ.ಕೆ.ಎಚ್.ದಾಸ್ ಛಾಯಾಗ್ರಹಣ ಇರುವ ಚಿತ್ರದಲ್ಲಿ ಪ್ರಿಯಾಂಕ ಶಿವಣ್ಣ, ಅನುರಾಗ್ ಎಸ್. ಪಾಟೀಲ್, ರಾಜ ಬಲವಾಡಿ, ಹರಿಣಿ ಶ್ರೀಕಾಂತ್, ಹೇಮಂತ್ ಶ್ರೀನಿವಾಸ್, ಗೌರೀಶ್ ಅಕ್ಕಿ ನಟಿಸಿದ್ದಾರೆ.
ಮರ್ಕಟ
ಗಣೇಶ್ ರಾಂಪುರ ನಿರ್ಮಾಣದ ಚಿತ್ರ ‘ಮರ್ಕಟ’. ಇದನ್ನು ವಿಜಯ್ ರಾಜ್ ನಿರ್ದೇಶಿಸಿ, ನಿರ್ಮಿಸಿದ್ದಾರೆ. ರಾಜ್, ಗಣೇಶ್, ಪೂಜಾ, ಬದ್ರಿ, ಚರಣ್, ರುಚಿತಾ ತಾರಾಗಣದಲ್ಲಿರುವ ಚಿತ್ರಕ್ಕೆ ಕೃಷ್ಣ ಮೂರ್ತಿ ಗೀತರಚನೆ, ಕೆವಿನ್ ಎಂ. ರಾಗಸಂೋಂಜನೆ, ರಾಜಭಾಸ್ಕರ್ ಹಿನ್ನೆಲೆ ಸಂಗೀತವಿದೆ.
ಸರ್ವಸ್ಯ ನಾಟ್ಯಂ
ಡಿಎಂಕೆ ಆಡ್ ಜೋನ್ ಲಾಂಛನದಲ್ಲಿ ಮನೋಜ್ ವರ್ಮ ನಿರ್ಮಿಸಿರುವ ಚಿತ್ರ ‘ಸರ್ವಸ್ಯ ನಾಟ್ಯಂ’. ಮಂಜುನಾಥ್ ಬಿ.ಎನ್. ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಚಿತ್ರಕ್ಕೆ ಹರ್ಷ ಚಲುವರಾಜ್ ಸಂಭಾಷಣೆ ಇದೆ. ನೂರಾರು ಮಕ್ಕಳ ಜೊತೆ, ಅನಾಥ ಮಕ್ಕಳಿಗೆ ನೃತ್ಯ ಹೇಳಿಕೊಡುವ ಶಿಕ್ಷಕನ ಪಾತ್ರದಲ್ಲಿ ಬಿಗ್‌ಬಾಸ್ ಖ್ಯಾತಿಯ ರಿಷಿ ಕುಮಾರ ಸ್ವಾಮೀಜಿ ನಟಿಸಿದ್ದಾರೆ.