Mysore
22
overcast clouds

Social Media

ಮಂಗಳವಾರ, 16 ಜೂನ್ 2026
Light
Dark

ಅಭಿವಾ ಪಾರ್ಟಿಯಲ್ಲಿ ಸುಮಲತಾ ಜೊತೆ ಯಶ್‌, ದಚ್ಚು ಭರ್ಜರಿ ಸ್ಟೆಪ್‌, ಮಾಲಾಶ್ರೀ ಡ್ಯಾನ್ಸ್‌ಗೆ ಫ್ಯಾನ್ಸ್‌ ಫಿದಾ!

ಬೆಂಗಳೂರು : ಅಂಬಿ ಕನಸಿನಂತೆ ಸುಮಲತಾ ಅಂಬರೀಶ್, ಪುತ್ರ ಅಭಿಷೇಕ್ ವಿವಾಹನ್ನು ಎಲ್ಲರೂ ಹುಬ್ಬೆರೇಸುವಂತೆ ಅದ್ದೂರಿಯಾಗಿ ಮಾಡಿದ್ದಾರೆ. ಅಭಿಷೇಕ್ ಹಾಗೂ ಅವಿವಾ ಸೋಮವಾರದಂದು ಹಸೆಮಣೆ ಏರಿದರು.
ಬಳಿಕ ರಾಜಕೀಯ ಸಿನಿ ಗಣ್ಯರ ಸಮ್ಮುಖದಲ್ಲಿ ಗ್ರ್ಯಾಂಡ್‌ ಆರತಕ್ಷತೆ ನಡೆಯಿತು. ಬಳಿಕ ನಗರದ ಖಾಸಗಿ ಹೋಟೆಲ್‌ನಲ್ಲಿ ಅಂಬರೀಶ್ ಹಾಗೂ ಸುಮಲತಾ ಆಪ್ತರಿಗಾಗಿ ಅಭಿವಾ ಹೆಸರಿನ ಪಾರ್ಟಿ ಆಯೋಜಿಸಿದ್ದರು.

ಈ ಪಾರ್ಟಿಯಲ್ಲಿ ಸುಮಲತಾ ಅಂಬರೀಶ್, ಅಭಿಷೇಕ್ ದಂಪತಿ, ಯಶ್‌ ದರ್ಶನ್‌ ಸೇರಿದಂತೆ ಸ್ಯಾಂಡಲ್ವುಡ್‌ ಅನೇಕ ಸಿನಿಮಾ ನಟರು ಈ ಭಾಗಿಯಾಗಿ ಭರ್ಜರಿ ಸ್ಟೆಪ್‌ ಹಾಕಿದ್ದಾರೆ. ಆ ವೇಳೆ ‘ಅಂಬಿ ನಿಂಗೆ ವಯಸ್ಸಾಯ್ತೋʼ ಸಿನಿಮಾದ ಹೇ ಜಲೀಲಾ’ಬುಲ್‌ ಬುಲ್’ ಚಿತ್ರದ ‘ಜ್ಯೂನಿಯರ್ ಸೀನಿಯರ್, ಯಶ್‌ ನಟನೆಯ ಸಿನಿಮಾ ಹಾಡುಗಳಿಗೆ ಅಭಿವಾ ಪಾರ್ಟಿಯಲ್ಲಿ ಚಿತ್ರರಂಗದ ಕಲಾವಿದರು ಭಾಗಿಯಾಗಿದ್ದರು. ಅದರ ನಡುವೆ ಹಲವು ವರ್ಷಗಳ ನಂತರ ನಟಿ ಮಲಾಶ್ರೀ ನೃತ್ಯ ಎಲ್ಲರ ಗಮನ ಸೆಳೆದಿದೆ.

ಅಷ್ಟೇ ಅಲ್ಲದೇ ಈ ಸಂಗೀತ ಕಾರ್ಯಕ್ರಮದಲ್ಲಿ ಶಿವಣ್ಣ- ಪ್ರಭುದೇವಾ ಪ್ರಿಯಾಂಕ ಉಪೇಂದ್ರ,ರಾಗಿಣಿ ಪ್ರಜ್ವಲ್ ಸೇರಿದಂತೆ ಸುಮಲತಾ ಜೊತೆ ಭರ್ಜರಿ ಸ್ಟೆಪ್‌ ಹಾಕಿದ್ದಾರೆ.ಅಭಿಷೇಕ್ ಅವಿವಾ ಪರಸ್ಪರ ಪ್ರೀತಿಗೆ ಬಾಲಿವುಡ್‌, ಟಾಲಿವುಡ್‌ , ಸ್ಯಾಂಡಲ್ವುಡ್‌ ನಟರ ನಟಿಯರು ಹಿರಿಯ ಗಣ್ಯರು, ಸಿಎಂ ಸಿದ್ಧರಾಮಯ್ಯ ಸೇರಿದಂತೆ ರಾಜಕೀಯ ಮುಖಂಡರು ಎಲ್ಲೂರು ಬಂದು ಮದುವೆಗೆ ಶುಭ ಕೋರುವ ಮೂಲಕ ಸಾಕ್ಷಿಯಾದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!