Mysore
24
overcast clouds

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ಎಂಗೇಜ್‌ ಆಗೇಬಿಟ್ರು ವೈಷ್ಣವಿ ಗೌಡ : ಮದುವೆ ಆಗುತ್ತಿರುವ ಹುಡುಗ ಯಾರು ಗೊತ್ತಾ?

ಬೆಂಗಳೂರು: ಕನ್ನಡ ಕಿರುತೆರೆ ಲೋಕದ ಖ್ಯಾತ ನಟಿ,  ಅಗ್ನಿಸಾಕ್ಷಿ ಸನ್ನಿಧಿ ಎಂದೇ ಖ್ಯಾತಿ ಗಳಿಸಿರುವ ವೈಷ್ಣವಿ ಗೌಡ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆ ಮಾತಾಗಿದ್ದರು ವೈಷ್ಣವಿ ಗೌಡ. ಈ ಧಾರಾವಾಹಿ ದೊಡ್ಡ ಮಟ್ಟದ ಕ್ಯಾತಿ ತಂದುಕೊಟ್ಟಿತ್ತು.  ಧಾರಾವಾಹಿ ಬಳಿಕ ವೈಷ್ಣವಿ ಗೌಡ ಬಿಗ್ ಬಾಸ್ ಕನ್ನಡ ಸೀಸನ್ 8 ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಬಿಗ್ ಮನೆಯಲ್ಲಿ ಅದ್ಭುತ ಆಟವಾಡುವ ಮೂಲಕ ಎಲ್ಲರಿಗೂ ಇಷ್ಟವಾಗಿದ್ದರು. ಧಾರಾವಾಹಿ, ರಿಯಾಲಿಟಿ ಶೋ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಮಿಂಚಿದ್ದಾರೆ. ಇದೀಗ ಮದುವೆಯಾಗಲು ನಿರ್ಧರಿಸಿದ್ದಾರೆ. ವೈಷ್ಣವಿ ಗೌಡ ಅವರ ನಿಶ್ಚಿತಾರ್ಥದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Vaishnavi Gowdaಅಂದಹಾಗೆ ವೈಷ್ಣವಿ ಗೌಡ  ವಿದ್ಯಾ ಭರಣ್ ಎನ್ನುವರ ಜೊತೆ ಹಸೆಮಣೆ ಏರುತ್ತಿದ್ದಾರೆ. ವಿದ್ಯಾ ಭರಣ್ ಮತ್ತು ವೈಷ್ಣವಿ ಇಬ್ಬರೂ ಮಾಲೆ ಹಾಕಿಕೊಂಡು ನಿಂತಿರುವ ಫೋಟೋ ಈಗ ಎಲ್ಲಾ ಕಡೆ ಹರಿದಾಡುತ್ತಿದೆ. ವೈಷ್ಣವಿ ಮತ್ತು ವಿದ್ಯಾ ಭರಣ್ ಜೋಡಿಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಸದ್ಯ ವೈರಲ್ ಆಗಿರುವ ವೈಷ್ಣವಿ ಎಂಗೇಜ್ಮೆಂಟ್ ಫೋಟೋದಲ್ಲಿ ಶಂಕರ್ ಬಿದಿರಿ ಕೂಡ ಇದ್ದಾರೆ.

ವೈಷ್ಣವಿ ಹಸೆಮಣೆ ಏರುತ್ತಿರುವ ಹುಡುಗ ವಿದ್ಯಾ ಭರಣ್. ಈಗಾಗಲೇ ಒಂದು ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. 2018ರಲ್ಲಿ ರಿಲೀಸ್ ಆಗಿದ್ದ ವಿರಾಜ್ ಎನ್ನುವ ಸಿನಿಮಾದಲ್ಲಿ ವಿದ್ಯಾ ಭರಣ್ ನಟಿಸಿದ್ದರು. ಬೆಂಗಳೂರು ಮೂಲದ ಹುಡುಗ ವಿದ್ಯಾ ಭರಣ್ ಬಿಎಮ್‌ಎಸ್ ಇಂಜಿನಿಯರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಇದೀಗ ವೈಷ್ಣವಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!