Mysore
21
overcast clouds
Light
Dark

ಅಕ್ಷಯ್ ಕುಮಾರ್ ಸಿನಿಮಾ ವಿರುದ್ಧ ಉಜ್ಜಯಿನಿ ಅರ್ಚಕ ಅಸಮಾಧಾನ

ಬಾಲಿವುಡ್ ನ ಖ್ಯಾತ ನಟ ಅಕ್ಷಯ್ ಕುಮಾರ್ ನಟನೆಯ ಓ ಮೈ ಗಾಡ್ ಸಿನಿಮಾಗೆ ದಿನಕ್ಕೊಂದು ಸಂಕಷ್ಟ ಎದುರಾಗುತ್ತಿದೆ. ಈವರೆಗೂ ಸೆನ್ಸಾರ್ ಮಂಡಳಿಯಿಂದ ನಾನಾ ರೀತಿಯ ತೊಂದರೆಗಳನ್ನು ಅನುಭವಿಸಿದ್ದ ಚಿತ್ರತಂಡ, ಇದೀಗ ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯದ ಅರ್ಚಕರ ಆಕ್ರೋಶಕ್ಕೆ ಕಾರಣವಾಗಿದೆ.

ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ವಯಸ್ಕರ ಚಿತ್ರದ ಪ್ರಮಾಣ ಪತ್ರ ನೀಡಿರುವುದರಿಂದ ಅರ್ಚಕರು ಸಿಡಿದೆದ್ದಿದ್ದಾರೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಶಿವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರು ಶಿವತಾಂಡವ ನೃತ್ಯ ಕೂಡ ಮಾಡುತ್ತಾರಂತೆ. ಆ ದೃಶ್ಯಗಳನ್ನು ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದ ಆವರಣದಲ್ಲಿ ಚಿತ್ರೀಕರಣ ಮಾಡಲಾಗಿದೆಯಂತೆ. ಆ ದೃಶ್ಯಗಳನ್ನು ಚಿತ್ರದಿಂದ ಕೈ ಬಿಡಬೇಕು ಎಂದು ಅರ್ಚಕರು ಆಗ್ರಹ ಮಾಡಿದ್ದಾರೆ. ಒಂದು ವೇಳೆ ದೃಶ್ಯಗಳನ್ನು ಡಿಲೀಟ್ ಮಾಡದೇ ಇದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ