Mysore
22
broken clouds

Social Media

ಸೋಮವಾರ, 13 ಜನವರಿ 2025
Light
Dark

ಜೊತೆ ಜೊತೆಯಲಿ ತಂಡದ ರಂಪಾಟ: ಅನಿರುಧ್‌ ಜೊತೆನಿಂತ ಮಹಿಳಾ ಅಭಿಮಾನಿಗಳು

ಜನಪ್ರಿಯ ‘ಜೊತೆ ಜೊತೆಯಲಿ’ ಸೀರಿಯಲ್​ ತಂಡದ ಒಳಗಿನ ರಂಪಾಟ ಜಗಜ್ಜಾಹೀರಾಗಿದೆ. ಈ ವಿವಾದ ಹೊಸ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. ಧಾರಾವಾಹಿ ನಿರ್ಮಾಪಕರಾದ ಆರೂರು ಜಗದೀಶ್ ಅವರು ನಟ ಅನಿರುದ್ಧ್​ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. ಅವುಗಳಿಗೆಲ್ಲ ಪ್ರತ್ಯುತ್ತರ ನೀಡಿರುವ ಅನಿರುದ್ಧ್​ ಅವರು ಈಗಾಗಲೇ ತಮ್ಮ ವಾದ ಮಂಡಿಸಿದ್ದಾರೆ. ಈ ನಡುವೆ ಅನಿರುದ್ಧ್ ಅವರ ಮಹಿಳಾ ಅಭಿಮಾನಿಗಳು ಆರೂರು ಜಗದೀಶ್​ ವಿರುದ್ಧ ಗರಂ ಆಗಿದ್ದಾರೆ. ತಮ್ಮ ನೆಚ್ಚಿನ ನಟನನ್ನು ಧಾರಾವಾಹಿಯಿಂದ ಕೈ ಬಿಟ್ಟಿರುವುದನ್ನು ಪ್ರಶ್ನಿಸಿ ಅಭಿಮಾನಿಗಳು ಧ್ವನಿ ಎತ್ತಿದ್ದಾರೆ. ‘ಧಾರಾವಾಹಿ ತಂಡದಲ್ಲಿ ಮನಸ್ತಾಪ ಆದಾಗ ಅದನ್ನು ಅವರೇ ಒಳಗೆ ಬಗೆಹರಿಸಿಕೊಳ್ಳಬೇಕು. ಅದರ ಬದಲು ಸಾರ್ವಜನಿಕವಾಗಿ ಮಾತನಾಡಬಾರದಿತ್ತು’ ಎಂದು ನಟ ಅನಿರುದ್ಧ್​ ಅವರ ಮಹಿಳಾ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘20ನೇ ಸಂಚಿಕೆಯಲ್ಲಿ ಆದ ತೊಂದರೆಗಳನ್ನು 700 ಎಪಿಸೋಡ್​ ನಂತರ ಹೇಳಿದ್ದು ಎಷ್ಟು ಸರಿ? ಅರೂರು ಜಗದೀಶ್​ ಅವರಿಗೆ ಹೊಟ್ಟೆಕಿಚ್ಚು. ನಟರು ಮೊದಲೇ ಸೀನ್​ ಪೇಪರ್​ ಕೊಡಿ ಅಂತ ಕೇಳುವುದೇ ತಪ್ಪಾ? ಬಹಿಷ್ಕಾರ ಮಾಡಿದ್ದರಲ್ಲಿ ದುರುದ್ದೇಶ ಕಾಣುತ್ತಿದೆ. ಇದು ಬೇರೆ ಎಲ್ಲ ಕಲಾವಿದರಿಗೂ ಒಂದು ವಾರ್ನಿಂಗ್​ ರೀತಿ ಇದೆ. ಯಾವುದೇ ನಟ-ನಟಿಯರು ಧ್ವನಿ ಎತ್ತಿದರೆ ಅವರಿಗೂ ಹೀಗೆಯೇ ಆಗಲಿದೆ ಎಂಬಂತಾಗಿದೆ’ ಎಂದು ಅಭಿಮಾನಿಗಳು ಹೇಳಿದ್ದಾರೆ.

‘ಜೊತೆ ಜೊತೆಯಲಿ’ ಧಾರಾವಾಹಿ ತಂತ್ರಜ್ಞರಿಗೆ ಅನಿರುದ್ಧ್​ ಅವರು ಸರಿಯಾಗಿ ಸಹಕಾರ ನೀಡಿಲ್ಲ ಎಂಬುದು ನಿರ್ಮಾಪಕ ಆರೂರು ಜಗದೀಶ್​ ಅವರ ಆರೋಪ. ಆ ಕಾರಣದಿಂದ ನಿರ್ಮಾಪಕರ ಸಂಘದವರು ಅನಿರುದ್ಧ್​ ಅವರನ್ನು ಎರಡು ವರ್ಷ ಕಿರುತರೆಯಿಂದ ಹೊರಗಿಡುವ ಬಗ್ಗೆ ನಿರ್ಧರಿಸಿರುವ ವಿಚಾರ ತಿಳಿದುಬಂದಿದೆ. ಇದನ್ನು ಅಭಿಮಾನಿಗಳು ವಿರೋಧಿಸಿದ್ದಾರೆ.

ಬೆಂಗಳೂರಿನ ಪ್ರೆಸ್​ ಕ್ಲಬ್​ನಲ್ಲಿ ಅನಿರುದ್ಧ್​ ಅವರ ಮಹಿಳಾ ಅಭಿಮಾನಿಗಳು ಸುದ್ದಿಗೋಷ್ಠಿ ನಡೆಸಿದ್ದಾರೆ. ‘ಧಾರಾವಾಹಿಗೆ ಅನಿರುದ್ಧ್​ ವಾಪಸ್​ ಬರಬೇಕು. ಆ ಮೂಲಕ ನ್ಯಾಯ ಸಿಗಬೇಕು’ ಎಂದು ಫ್ಯಾನ್ಸ್​ ಒತ್ತಾಯಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ