Mysore
32
broken clouds

Social Media

ಭಾನುವಾರ, 27 ಸೆಪ್ಟೆಂಬರ್ 2026
Light
Dark

ಹನುಮಂತನ ಫಸ್ಟ್‌ಲುಕ್‌ ಬಿಡುಗಡೆ ಮಾಡಿದ ‘ಆದಿಪುರುಷ‘ ಚಿತ್ರತಂಡ

ಹನುಮ ಜಯಂತಿಯ ಪ್ರಯುಕ್ತ ‘ಆದಿಪುರುಷ’ ಚಿತ್ರ ತಂಡ ‘ಹನುಮಂತನ‘ ಫಸ್ಟ್‌ ಲುಕ್‌ ಬಿಡುಗಡೆ ಮಾಡಿದ್ದು, ಮರಾಠಿ ನಟ ದೇವದತ್ತ ನಾಗೆ ಹನುಮನಾಗಿ ಕಾಣಿಸಿಕೊಂಡಿದ್ದಾರೆ.

ತಪಸ್ಸು ಮಾಡುತ್ತಿರುವ ಭಂಗಿಯಲ್ಲಿ ಕುಳಿತಿರುವ ಹನುಮಂತನ ಫಸ್ಟ್‌ಲುಕ್‌ ಪೋಸ್ಟರ್‌ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ನಟ ಪ್ರಭಾಸ್‌, ‘ರಾಮನ ಭಕ್ತ ಮತ್ತು ರಾಮಾಯಣದ ಪ್ರಾಣ‘ ಎಂದು ಬರೆದುಕೊಂಡಿದ್ದಾರೆ.

ಹನುಮ ಪಾತ್ರಧಾರಿ ದೇವದತ್ತ ನಾಗೆ ಮೊದಲು ಮರಾಠಿ ಕಿರುತರೆಯಲ್ಲಿ ನಟಿಸುತ್ತಿದ್ದರು. ಮರಾಠಿ ಧಾರವಾಹಿ ‘ಜೈ ಮಲ್ಹಾರ್‌‘ನಲ್ಲಿ ಭಗವಾನ್‌ ಖಂಡೋಬಾ ಪಾತ್ರದಲ್ಲಿ ನಟಿಸಿ ಹೆಸರುವಾಸಿಯಾಗಿದ್ದರು. 2013ರಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಅವರು ಅನೇಕ ಚಿತ್ರಗಳಲ್ಲಿ ನಟಿಸಿ ಭರವಸೆಯ ನಟ ಎನಿಸಿಕೊಂಡಿದ್ದಾರೆ.

ಬ್ಲಾಕ್‌ಬ್ಲಾಸ್ಟರ್‌ ‘ತನ್ಹಾಜಿ:ದಿ ಅನ್‌ಸಂಗ್ ವಾರಿಯರ್‌‘ ಚಿತ್ರದ ನಿರ್ದೇಶಕ ಓಂ ರಾವುತ್‌ ಆದಿಪುರುಷ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ರಾಮಾಯಣ ಕಥೆಯಾಧಾರಿತ ಚಿತ್ರ ಇದಾಗಿದ್ದು, ಬಾಹುಬಲಿ ಖ್ಯಾತಿಯ ಪ್ರಭಾಸ್‌ ಈ ಚಿತ್ರದಲ್ಲಿ ರಾಘವ ಪಾತ್ರವನ್ನು ನಿರ್ವಹಿಸಲಿದ್ದಾರೆ. ಬಾಲಿವುಡ್‌ ನಟಿ ಕೃತಿ ಸನೂನ್‌ ಸೀತೆಯಾಗಿ ಕಾಣಿಸಿಕೊಂಡರೆ, ನಟ ಸನ್ನಿ ಲಕ್ಷಣನಾಗಿ ಕಾಣಿಸಿಕೊಂಡಿದ್ದಾರೆ. ಜೂನ್‌ 16ರಂದು ಚಿತ್ರ ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!