Mysore
25
overcast clouds

Social Media

ಶುಕ್ರವಾರ, 25 ಏಪ್ರಿಲ 2025
Light
Dark

‘ರಂಗಸಮುದ್ರ’ದ ಚಿತ್ರೀಕರಣ ಮುಗಿದಿದೆ

ತಮ್ಮೂರಿನ ಹೆಸರನ್ನೇ ಇಟ್ಟುಕೊಂಡು ಚಿತ್ರ ನಿರ್ಮಿಸಲು ಹೊರಟ ‘ರಂಗಸಮುದ್ರ’ ಚಿತ್ರ ಬಹಳ ಹಿಂದೆೆುೀಂ ಸಿದ್ದವಾಗಿ ತೆರೆಗೆ ಬರಬೇಕಾಗಿತ್ತು. ಚಿತ್ರದಲ್ಲಿ ಜನಪ್ರಿಯ ನಟರೊಬ್ಬರು ಅವರಾಗಿಯೇ ಕಾಣಿಸಿಕೊಳ್ಳುವ ಸನ್ನಿವೇಶಕ್ಕೆ ಪುನೀತ್ ರಾಜಕುಮಾರ್ ಅವರನ್ನು ಸಂಪರ್ಕಿಸಲು ಚಿತ್ರತಂಡ ಪ್ರಯತ್ನಿಸಿತ್ತು. ಅವರನ್ನು ತಲಪಲು ನಾನಾ ಕಾರಣಗಳಿಂದ ತಡವಾಗಿತ್ತು. ಕೊನೆಗೂ ತಲಪುವ ದಿನ ಇನ್ನೇನು ಬಂತು ಎನ್ನುವಷ್ಟರಲ್ಲಿ ಅವರೇ ಇನ್ನಿಲ್ಲವಾಗಿದ್ದರು. ಸಹಜವಾಗಿೆುೀಂ ಚಿತ್ರತಂಡಕ್ಕೆ ಇದು ಭಾರೀ ಆಘಾತ ನೀಡಿತ್ತು. ಇದೀಗ ಅವರ ಬದಲಿಗೆ ಮತ್ತೊಬ್ಬ ಜನಪ್ರಿಯ ನಟರು ಅವರ ಪಾತ್ರ ನಿರ್ವಹಿಸಿ, ಬೆಂಗಳೂರು ನಗರದ ಹೊರವಲಯದಲ್ಲಿ ಅಂತಿಮ ಹಂತದ ಪೂರಕ ಸನ್ನಿವೇಶಗಳನ್ನು ಚಿತ್ರಿಸುವುದರೊಂದಿಗೆ ಚಿತ್ರೀಕರಣ ಮುಗಿದಿದೆ.

ತಮ್ಮ ಹೊಯ್ಸಳ ಕ್ರಿಯೇಷನ್ಸ್ ಮೂಲಕ ಕೆ. ಆರ್. ಹೊಯ್ಸಳ ಚಿತ್ರವನ್ನು ನಿರ್ಮಿಸುತ್ತಿದ್ದು, ರಾಜಕುಮಾರ್ ಅಸ್ಕಿ ನಿರ್ದೇಶಿಸುತ್ತಿದ್ದಾರೆ. ರಂಗಾಯಣ ರಘು, ಸಂಪತ್ ರಾಜ್, ಕೆವಿಆರ್, ದಿವ್ಯಾ ಗೌಡ, ಗುರುರಾಜ್ ಹೊಸಕೋಟೆ ಮೋಹನ್ ಜುನೇಜ, ಮೂಗು ಸುರೇಶ್, ಉಗ್ರಂ ಮಂಜು, ಸ್ಕಂದ ತೇಜಸ್, ಡ್ರಾಮಾ ಜ್ಯೂನಿಯರ್ ಮಹೇಂದ್ರ ಮತ್ತಿತರರು ಚಿತ್ರದ ಭೂಮಿಕೆಯಲ್ಲಿದ್ದು, ಜನಪ್ರಿಯ ನಟರ ಹೆಸರನ್ನು ಮುಂದೆ ಪ್ರಕಟಿಸುವುದಾಗಿ ಚಿತ್ರತಂಡ ಹೇಳಿದೆ. ಗಿರಿ ಛಾಯಾಗ್ರಹಣ, ದೇಸೀ ಮೋಹನ್ ಸಂಗೀತ ಸಂಯೋಜನೆ, ಶ್ರೀಕಾಂತ್ ಸಂಕಲನ, ವಾಗೀಶ್ ಚನ್ನಗಿರಿ ಗೀತ ರಚನೆ ಇದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ