Mysore
22
mist

Social Media

ಬುಧವಾರ, 10 ಡಿಸೆಂಬರ್ 2025
Light
Dark

ಚೇಸರ್’ ಚಿತ್ರದ ಟೀಸರ್

ಕೆಲವು ವರ್ಷಗಳ ಹಿಂದೆ ಪ್ರಾರಂಭವಾದ ಸುಮಂತ್ ಅಭಿನಯದ ಚಿತ್ರವು, ಇದೀಗ ‘ಚೇಸರ್’ ಹೆಸರಿನಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರವು ಸದ್ಯದಲ್ಲೇ ಬಿಡುಗಡೆಯಾಗಲಿದ್ದು, ಸದ್ಯ ಟೀಸರ್ ಬಿಡುಗಡೆಯಾಗಿದೆ. ಧ್ರುವಸರ್ಜಾ ಟೀಸರ್ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.

ಚಿತ್ರವನ್ನು ಮಾಲತಿ ಶೇಖರ್ ಶಿವಮೊಗ್ಗ ನಿರ್ಮಿಸಿದ್ದು, ಉಪೇಂದ್ರ ಅಭಿನಯದ ‘ಬುದ್ಧಿವಂತ 2′ ಚಿತ್ರದ ಖ್ಯಾತಿಯ ಎಂ.ಜಯರಾಮ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಾಯಕನಾಗಿ ಸುಮಂತ್ ಶೈಲೇಂದ್ರ ನಾಯಕಿಯಾಗಿ ರಕ್ಷ ಮೆನನ್ ನಟಿಸಿದ್ದಾರೆ. ಮಿಕ್ಕಂತೆ ರವಿಶಂಕರ್, ರಂಗಾಯಣ ರಘು, ಸಾಧು ಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್, ಸುಚೇಂದ್ರ ಪ್ರಸಾದ್, “ಕಡ್ಡಿಪುಡಿ’ ಚಂದ್ರು ಮುಂತಾದವರು ನಟಿಸಿದ್ದಾರೆ.

ನನ್ನ ಸ್ನೇಹಿತನ ಪ್ರೇಮ ವಿವಾಹಕ್ಕೆ ಸಾಕ್ಷಿ ಹಾಕಲು ಸಬ್‌ ರಿಜಿಸ್ಟ್ರಾರ್ ಕಚೇರಿಗೆ ಹೋಗಿದ್ದಾಗ ಅಲ್ಲಿ ನನಗೆ ಅವರು ಹೇಳಿದ ಕಥೆಯೇ ‘ಚೇಸರ್’ ಎಂದ ನಿರ್ದೇಶಕ ಎಂ.ಜಯರಾಮ, ಈ ಕಥೆಯನ್ನು ಮೆಚ್ಚಿ‌ ಸಿನಿಮಾ ನಿರ್ಮಾಣ ಮಾಡಿದ ಮಾಲು ಶೇಖರ್ ಅವರಿಗೆ ಹಾಗೂ ಚಿತ್ರ ಉತ್ತಮವಾಗಿ ಬರಲು ಸಹಕಾರ ನೀಡಿದ ಇಡೀ ತಂಡಕ್ಕೆ ವಿಶೇಷವಾಗಿ ಟೀಸರ್ ಬಿಡುಗಡೆ ಮಾಡಿಕೊಟ್ಟ ಧ್ರುವ ಸರ್ಜಾ ಅವರಿಗೆ ವಿಶೇಷ ಧನ್ಯವಾದ’ ಎಂದರು.

ನಿರ್ಮಾಪಕಿಯಾಗಲು ನನ್ನ ಕುಟುಂಬದ ಸಹಕಾರವೇ ಕಾರಣ ಎಂದ ನಿರ್ಮಾಪಕಿ ಮಾಲತಿ ಶೇಖರ್, 10 ವರ್ಷಗಳ ಹಿಂದೆ “ಅಂಜನಿ ಪುತ್ರ’ ಚಿತ್ರದಲ್ಲಿ ಪುನೀತ್ ರಾಜ್‌ ಕುಮಾರ್ ಅವರ ಚಿಕ್ಕಮ್ಮನ ಪಾತ್ರದಲ್ಲಿ ಅಭಿನಯಿಸಿದ್ದೆ. ಈ ಚಿತ್ರದ ಮೂಲಕ ನಿರ್ಮಾಪಕಿಯಾಗಿದ್ದೇನೆ. ಧ್ರುವ ಸರ್ಜಾ ಟೀಸರ್ ಬಿಡುಗಡೆ ಮಾಡಿಕೊಟ್ಟಿದ್ದು ಬಹಳ ಖುಷಿಯಾಗಿದೆ’ ಎಂದರು.

Tags:
error: Content is protected !!