Mysore
24
light rain

Social Media

ಮಂಗಳವಾರ, 29 ಸೆಪ್ಟೆಂಬರ್ 2026
Light
Dark

ನಟ ಪ್ರಭುದೇವ ಅಭಿನಯದ ‘WOLF’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ಶಿವಣ್ಣ

ಬೆಂಗಳೂರು : ನಟ ಪ್ರಭುದೇವ ಅಭಿನಯದ ವೂಲ್ಫ್ ಚಿತ್ರದ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಅನ್ನು ನಟ ಶಿವ ರಾಜ್​ಕುಮಾರ್​ ಬಿಡುಗಡೆ ಮಾಡಿದ್ದಾರೆ.
ಪ್ರಭುದೇವ ಅಭಿನಯದ ಚಿತ್ರಕ್ಕೆ ಶಿವಣ್ಣ ಸಾಥ್H20 ಹಾಗೂ 123 ಸಿನಿಮಾಗಳು ಆದ ಮೇಲೆ ಹಲವು ವರ್ಷಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಪ್ರತಿಭಾನ್ವಿತ ನಟ ಪ್ರಭುದೇವ. ಇಂಡಿಯನ್ ಮೈಕಲ್ ಜಾಕ್ಸನ್ ಅಂತಾ ಕರೆಸಿಕೊಂಡಿರುವ ಪ್ರಭುದೇವ, ಈಗಾಗಲೇ ಬಿಡುಗಡೆ ಕಂಡಿರುವ ದಿವಂಗತ ಪುನೀತ್​ ರಾಜ್​ಕುಮಾರ್​ ನಟನೆಯ ಲಕ್ಕಿಮ್ಯಾನ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಕಡೆ ಮುಖ ಮಾಡಿದ್ದಾರೆ. ಸದ್ಯ ಕನ್ನಡದಲ್ಲಿ ಮೂರು‌ ಚಿತ್ರಗಳಲ್ಲಿ ಅಭಿನಯ ಮಾಡುತ್ತಿರುವ ಪ್ರಭುದೇವ ಅವರು ಹ್ಯಾಟ್ರಿಕ್​ ಹೀರೋ ಶಿವ ರಾಜ್​ಕುಮಾರ್ ಜೊತೆಯೂ ಒಂದು ಸಿನಿಮಾ‌ ಮಾಡುತ್ತಿದ್ದಾರೆ.


ವೂಲ್ಫ್ ಫಸ್ಟ್ ಲುಕ್ ಬಿಡುಗಡೆ ಮಾಡಿದ ಶಿವಣ್ಣ: ಈ ಮಧ್ಯೆ ಪ್ರಭುದೇವ ವೂಲ್ಫ್ (wolf) ಎಂಬ ಪ್ಯಾನ್‌ ಇಂಡಿಯಾ ಸಿನಿಮಾ ಮಾಡುತ್ತಿರೋದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಈ ಸಿನಿಮಾಗೆ ಹ್ಯಾಟ್ರಿಕ್ ಹೀರೋ ಶಿವ ರಾಜ್​ಕುಮಾರ್ ಸಾಥ್ ಸಿಕ್ಕಿದೆ. ಈ ಚಿತ್ರದ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಅನಾವರಣ ಮಾಡಿ ಗೆಳೆಯ ಪ್ರಭುದೇವ ಸಿನಿಮಾಗೆ ಕರುನಾಡ ಚಕ್ರವರ್ತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ‌.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!