ನವದೆಹಲಿ : ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಸಿನಿಮಾಗಳಲ್ಲಿ ಸಾಕಷ್ಟು ಡೂಪ್ ಆಗಿ ಕಾಣಿಸಿಕೊಳ್ಳುತ್ತಿದ್ದ ಸಾಗರ್ ಪಾಂಡೆ ಅವರು ಹೃದಯಘಾತದಿಂದ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.
ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ಎದೆ ನೋವು ಕಾಣಿಸಿಕೊಂಡು ತಕ್ಷಣವೇ ಅವರನ್ನು ಬಾಳ ಸಾಹೇಬ ಠಾಕ್ರೆ ಟ್ರಾಮಾ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ನೀಡುವಷ್ಟರಲ್ಲಿಯೇ ನಿಧನರಾಗಿದ್ದಾರೆ.
ಸಾಗರ್ ಪಾಂಡೆ ಅವರು ದಬಾಂಗ್, ಭಜರಂಗಿ ಬಾಯ್ ಜಾನ್, ದಬಾಂಗ್ ಸೇರಿದಂತೆ ಹಲವು ಸಿನಿಮಾಗಳ ಸಾಹಸ ದೃಶ್ಯಗಳಲ್ಲಿ ಸಲ್ಮಾನ್ ಖಾನ್ ರವರ ಬದಲಾಗಿ ಇವರೇ ಡೂಪ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಇವರ ನಿಧನಕ್ಕೆ ಬಾಲಿವುಡ್ ಚಿತ್ರದ ರಂಗದ ಸಾಕಷ್ಟು ಗಣ್ಯರು ಕಂಬನಿ ಮಿಡಿದಿದ್ದಾರೆ.