Mysore
26
scattered clouds

Social Media

ಬುಧವಾರ, 15 ಜನವರಿ 2025
Light
Dark

ರಾಕಿಂಗ್‌ ಕಿಡ್‌ ಐರಾ ಬರ್ತ್‌ಡೇ ಸಂಭ್ರಮ

ಸ್ಯಾಂಡಲ್ವುಡ್‌ ನ ರಾಕಿಂಗ್‌ ಕಪಲ್‌ ಯಶ್‌ ಹಾಗೂ ರಾಧಿಕಾ ಪಂಡಿತ್‌ ಪುತ್ರಿ ಐರಾ ತಮ್ಮ ಐದನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಡಿಸೆಂಬರ್‌ 2 ರಂದು ರಾಕಿಂಗ್‌ ಕಿಡ್‌ ಐರಾ ಹುಟ್ಟುಹಬ್ಬವನ್ನು ಬೆಂಗಳೂರಿನ ಖಾಸಗಿ ರೆಸಾರ್ಟ್‌ ನಲ್ಲಿ ಐರಾಸ್‌ ವಿಂಟರ್‌ ಲ್ಯಾಂಡ್‌ ಥೀಮ್‌ ನಲ್ಲಿ ಅದ್ದೂರಿಯಾಗಿ ಆಚರಿಸಲಾಗಿದೆ.

ಬರ್ತ್‌ ಡೇ ಪಾರ್ಟಿ ವಿಡಿಯೋವನ್ನು ತಡವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ರಾಧಿಕಾ ಪಂಡಿತ್‌ ಅವರು 2.12.2018 ನನ್ನ ಏಂಜಲ್‌ ನಮ್ಮ ಜೀವನಕ್ಕೆ ಬಂದ ವಿಶೇಷ ದಿನ ಇದು. ಸಂತೋಷವನ್ನು ತಂದುಕೊಟ್ಟ ಮುದ್ದುಗಳಿಗೆ 5 ವರ್ಷವಾಗಿದೆ ಅಂದ್ರೆ ನಂಬಲು ಆಗುತ್ತಿಲ್ಲ. ಲವ್‌ ಯೂ ಮೈ ಲಿಟಲ್‌ ಗರ್ಲ್‌ ಎಂದು ಬರೆದಿದ್ದಾರೆ.

ಹುಟ್ಟುಹಬ್ಬದ ಪಾರ್ಟಿಯಲ್ಲಿ ರಾಕಿಂಗ್‌ ಕಿಡ್‌ ಐರಾ ಪ್ರಿನ್ಸೆಸ್‌ ನಂತೆ ಗೌನ್‌ ಧರಿಸಿ ಕ್ರೌನ್‌ ತೊಟ್ಟು ಮಿಂಚಿದ್ದಾರೆ.

ರಾಕಿಂಗ್‌ ಸ್ಟಾರ್‌ ಯಶ್‌ ಅದೇಷ್ಟೇ ಬ್ಯುಸಿ ಇದ್ರೂ ಕೂಡ ಫ್ಯಾಮಿಲಿ ವಿಚಾರದಲ್ಲಿ ರಾಜಿ ಆಗೋ ಮಾತೇ ಇಲ್ಲ. ಈ ಮೂಲಕ ಯಶ್‌ ಅವರು ಪಕ್ಕ ಫ್ಯಾಮಿಲಿ ಮ್ಯಾನ್‌ ಮ್ಯಾನ್‌ ಅನ್ನೋದನ್ನ ಪ್ರೂವ್‌ ಮಾಡಿದ್ದಾರೆ. ತಮ್ಮ ಹೊಸ ಸಿನಿಮಾ ಟಾಕ್ಸಿಕ್‌ ನ ಬ್ಯುಸಿ ಶೆಡ್ಯೂಲ್‌ ನಡುವೆಯೂ ಯಶ್‌ ಅವರು ತಮ್ಮ ಮುದ್ದು ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.

ಯಶ್ ದಂಪತಿ ಮಗಳು ಐರಾ ಹಾಗೂ ಮಗ ಯಥರ್ವ್ ಹುಟ್ಟುಹಬ್ಬವನ್ನು ಪ್ರತಿ ವರ್ಷವೂ ಕೂಡ ಬಹಳ ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಗಳ ಹುಟ್ಟುಹಬ್ಬವನ್ನು ಬೆಂಗಳೂರಿನ ಖಾಸಗಿ ರೆಸಾರ್ಟ್‌ ಒಂದರಲ್ಲಿ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ.

ಬರ್ತ್‌ ಡೇ ಪಾರ್ಟಿಯನ್ನು ಕೆಲ ಆಪ್ತರು ಹಾಗೂ ಕುಟುಂಬಸ್ಥರೊಂದಿಗೆ ಆಚರಣೆ ಮಾಡಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ