ಮೊದಲಬಾರಿಗೆ ಯಕ್ಷಗಾನ ವೇಷ ಧರಿಸಿದ ರಮೇಶ್ ಅರವಿಂದ್ : ಎಲ್ಲರ ಗಮನ ಸೆಳೆಯುತ್ತಿರುವ ಹೊಸ ಲುಕ್
ಉಡುಪಿಯಲ್ಲಿ ರಮೇಶ್ ಅರವಿಂದ್ ಅವರು ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ರಮೇಶ್ ಅವರು ಮೊದಲ ಬಾರಿ ಯಕ್ಷಗಾನ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ.
ಛಾಯಾಗ್ರಾಹಕ ಉಡುಪಿಯ ಫೋಕಸ್ ರಾಘು ಅವರ ಹೋಮ್ ಸ್ಟೇ ನಲ್ಲಿ ಯಕ್ಷಾವತಾರದಲ್ಲಿ ಕಾಣಿಸಿದ ನಟ ರಮೇಶ್ ಈ ಹೊಸ ರೂಪದಲ್ಲಿ ಸುಂದರವಾಗಿ ಕಾಣಿಸಿದ್ದಾರೆ.
ಕನ್ನಡದ ಖ್ಯಾತ ನಟ ರಮೇಶ್ ಅರವಿಂದ್ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಬಣ್ಣದ ಲೋಕದಲ್ಲಿ ವಿಶೇಷ ಛಾಪು ಮೂಡಿಸಿರುವ ಅವರು ಪ್ರತಿ ಬಾರಿ ಏನಾದರೂ ಹೊಸತನ್ನು ಪ್ರಯತ್ನಿಸುತ್ತಾರೆ.
ವೃತ್ತಿಪರ ಯಕ್ಷಗಾನದ ಕಲಾವಿದನ ರೀತಿಯಲ್ಲಿ ಬಣ್ಣ ಹಚ್ಚಿಕೊಂಡು ಪೋಸ್ ನೀಡಿದ್ದಾರೆ. ಆ ಫೋಟೋಗಳನ್ನು ಅವರು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ.