ನವದೆಹಲಿ : ಜಿಮ್ ನಲ್ಲಿ ವರ್ಕೌಟ್ ಮಾಡುವ ವೇಳೆ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿರುವ ಬಾಲಿವುಡ್ ಹಾಸ್ಯ ನಟ ರಾಜು ಶ್ರೀ ವಾಸ್ತವ್ ಅವರ ಸ್ಥಿತಿ ತೀವ್ರ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಆಗಸ್ಟ್ 10 ರಂದು ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ರಾಜು ಶ್ರೀವಾಸ್ತವ್ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ವೆಂಟಿಲೇಟರ್ ನಲ್ಲಿದ್ದರು ನಂತರ ಅವರನ್ನು ಆಂಜಿಯೋಪ್ಲಾಸ್ಟಿಗೆ ಪಡಿಸಲಾಗಿತ್ತು. ಈಗ ಅವರ ಪರಿಸ್ಥಿತಿ ತೀವ್ರ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಈ ಆದಿತ್ಯನಾಥ್ ಅವರು ಕೂಡ ಸಹಾಯ ಹಸ್ತ ನೀಡಲು ಮುಂದಾಗಿದ್ದರು. ಈಗ ಅವರ ಪರಿಸ್ಥಿತಿ ತೀವ್ರ ಗಂಭೀರವಾಗಿದೆ. ರಾಜು ಅವರು ತಮ್ಮದೇ ಆದ ವಿಶಿಷ್ಟ ಹಾಸ್ಯ ಶೈಲಿಯಿಂದ ಜನರನ್ನು ರಂಜಿಸುತ್ತಿದ್ದರು. ಟಿವಿ, ಸ್ಟೇಜ್ ಶೋ ಗಳಲ್ಲಿ ಚಲನಚಿತ್ರಗಳಲ್ಲಿಯೂ ಕೂಡ ಒಂದಷ್ಟು ದಿನಗಳ ಕಾಲ ರಾಜಕೀಯದಲ್ಲೂ ತೊಡಗಿಕೊಂಡಿದ್ದರು.