ಬೆಂಗಳೂರು: ಕಿಚ್ಚ ಸುದೀಪ್ ಅವರು ಇಂದು (ಸೆಪ್ಟೆಂಬರ್ 2) ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೊವಿಡ್ ಕಾಟ ಜೋರಾಗಿತ್ತು. ಈ ಕಾರಣದಿಂದ ಕಿಚ್ಚನ ಬರ್ತ್ಡೇ ಆಚರಿಸಲು ಸಾಧ್ಯವಾಗಿರಲಿಲ್ಲ. ಆದರೆ, ಈ ವರ್ಷ ಬರ್ತ್ಡೇ ಜೋರಾಗಿದೆ. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಸುದೀಪ್ಗೆ ನಾನಾ ಕಡೆಗಳಿಂದ ಬರ್ತ್ಡೇ ವಿಶ್ ಬರುತ್ತಿದೆ. ವಿವಿಧ ಊರುಗಳಲ್ಲಿ ಸುದೀಪ್ ಫೋಟೋ ಹಾಗೂ ಕಟೌಟ್ ಹಾಕಿ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ಜೊತೆಗೆ ಕ್ರಿಕೆಟ್ನಲ್ಲೂ ಸಾಕಷ್ಟು ಹೆಸರು ಮಾಡಿರುವ ಕಿಚ್ಚನಿಗೆ ಐಪಿಎಲ್ನ ಯಶಸ್ವಿ ಫ್ರಾಂಚೈಸಿಯಾದ ರಾಜಸ್ಥಾನ ರಾಯಲ್ಸ್ ತನ್ನ ಟ್ವಿಟರ್ ಖಾತೆಯಲ್ಲಿ ಜನ್ಮದಿನದ ಶುಭಾಶಯ ತಿಳಿಸಿದೆ.
ಜನ್ಮದಿನದ ಶುಭಾಶಯಗಳು ದಂತಕಥೆ! 💗
Have a good day, Anna. 👑#HappyBirthdayKicchaSudeep | @KicchaSudeep pic.twitter.com/GErZeJUwLd
— Rajasthan Royals (@rajasthanroyals) September 2, 2022
49ನೇ ವಯಸ್ಸಿಗೆ ಕಾಲಿಟ್ಟಿರುವ ಅಭಿನಯ ಚಕ್ರವರ್ತಿ ಸುದೀಪ್ಗೆ ಕನ್ನಡದಲ್ಲಿ ಜನ್ಮದಿನದ ಶುಭಾಶಯ ತಿಳಿಸಿರುವ ರಾಜಸ್ಥಾನ ರಾಯಲ್ಸ್ ತನ್ನ ಟ್ವೀಟ್ನಲ್ಲಿ, ಸುದೀಪ್ ರಾಜಸ್ಥಾನ ರಾಯಲ್ಸ್ ತಂಡದ ಜೆರ್ಸಿ ಹಿಡಿದಿರುವ ಫೋಟೋ ಹಂಚಿಕೊಂಡಿದೆ. ಜೊತೆಗೆ ಟ್ವೀಟ್ನ ಶೀರ್ಷಿಕೆಯಲ್ಲಿ, ಜನ್ಮದಿನದ ಶುಭಾಶಯಗಳು ದಂತಕಥೆ ಎಂದು ಬರದುಕೊಂಡಿದೆ.
ಸುದೀಪ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ನಂಟು ಇಂದು ನಿನ್ನೆಯದಲ್ಲ. ಈ ಹಿಂದೆಯೂ ರಾಜಸ್ಥಾನ ರಾಯಲ್ಸ್ ತಂಡ ಕಿಚ್ಚ ಸುದೀಪ್ ಬರ್ತ್ ಡೇಗೆ ಶುಭಾಷಯಗಳನ್ನು ತಿಳಿಸಿತ್ತು. ಈ ಹಿಂದೆ ಕಿಚ್ಚನ ಜನ್ಮದಿನಕ್ಕೆ ಜೆರ್ಸಿಯೊಂದನ್ನು ರಾಜಸ್ಥಾನ ರಾಯಲ್ಸ್ ತಂಡ ಗಿಫ್ಟ್ ಆಗಿ ಕಳುಹಿಸಿಕೊಟ್ಟಿತ್ತು. ಜೊತೆಗೆ ವಿಶೇಷ ಸಂದೇಶವನ್ನು ಟ್ವೀಟ್ನಲ್ಲಿ ಬರೆದುಕೊಂಡಿತ್ತು.