ನಟಿ ಪ್ರಿಯಾಂಕಾ ಚೋಪ್ರಾ ಪಾಪ್ ಸಿಂಗರ್ ನಿಕ್ ಜೋನಸ್ ಜೊತೆ ಮದುವೆಯಾದ ಬಳಿಕ ಭಾರತದಲ್ಲಿರುವ ತಮ್ಮ ಆಸ್ತಿಗಳನ್ನು ಒಂದೊಂದಾಗಿಯೇ ಮಾರಾಟ ಮಾಡುತ್ತಾ ಬರುತ್ತಿದ್ದಾರೆ. ಇದೀಗ ಮುಂಬೈನಲ್ಲಿದ್ದ ಅವರ ಐಷಾರಾಮಿ ಬಂಗಲೆಯನ್ನು ಕೂಡ ಸೇಲ್ ಮಾಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ತಮ್ಮ ಆಸ್ತಿಗಳನ್ನು ಹೀಗೆ ಮಾರಾಟ ಮಾಡುತ್ತಿರುವುದು ಪ್ರಿಯಾಂಕಾ ಭಾರತಕ್ಕೆ ಗುಡ್ ಬೈ ಹೇಳಲಿದ್ದಾರೆ ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಸದ್ಯ ಬಾಲಿವುಡ್ ನಿಂದ ದೂರ ಉಳಿದಿರುವ ನಟಿ, ಹಾಲಿವುಡ್ ನಲ್ಲಿ ಭವಿಷ್ಯ ಹುಡುಕಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಸೀಟಾಡೆಲ್ ವೆಬ್ ಸೀರೀಸ್ ಮೇಲೆ ಬಾರಿ ನಿರೀಕ್ಷೆ ಇಟ್ಟುಕೊಂಡಿದ್ದ ಪ್ರಿಯಾಂಕಾಗೆ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಸಿಗಲಿಲ್ಲ. ಸೀಟಾಡೆಲ್ ವೆಬ್ ಸೀರೀಸ್ ಜನರ ಮೆಚ್ಚುಗೆ ಗಳಿಸುವಲ್ಲಿ ವಿಫಲವಾಯಿತು.
ಪಾಪ್ ಸಿಂಗರ್ ನಿಕ್ ಜೋನಸ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಪ್ರಿಯಾಂಕಾ ಚೋಪ್ರಾ ಬಾಡಿಗೆ ತಾಯ್ತನದ ಮೂಲಕ ಮಾಲ್ತಿ ಮೇರಿ ಎಂಬ ಮಗಳನ್ನು ಪಡೆದಿದ್ದಾರೆ.
2000 ರಲ್ಲಿ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದ ಪ್ರಿಯಾಂಕ ಚೋಪ್ರಾ 2002 ರಲ್ಲಿ ತಮಿಳು ಚಿತ್ರರಂಗದ ತಮಿಳನ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಬಳಿಕ 2003 ರಲ್ಲಿ ಬಾಲಿವುಡ್ ನಲ್ಲಿ ಅವಕಾಶ ಗಿಟ್ಟಿಸಿಕೊಂಡು ಹೀರೋ ಲವ್ ಸ್ಟೋರಿ ಎಂಬ ಸಿನಿಮಾದಲ್ಲಿ ನಟಿಸಿದರು.
ಸದ್ಯ ಅಮೆರಿಕಾದಲ್ಲಿ ಪತಿ ನಿಕ್ ಜೋನಸ್ ಜೊತೆ ಸೆಟಲ್ ಆಗಿರುವ ಪ್ರಿಯಾಂಕಾ ಚೋಪ್ರಾ ಮಗಳು ಹಾಗೂ ಪತಿಯೊಟ್ಟಿಗೆ ಜೀವನವನ್ನುಆನಂದಿಸುತ್ತಾ, ಹಾಲಿವುಡ್ ನಲ್ಲಿ ಬ್ಯುಸಿ ಆಗಿದ್ದಾರೆ.
ಪ್ರಿಯಾಂಕ ಚೋಪ್ರಾ ಅಮೇರಿಕಾದಲ್ಲಿ ಹೋಟೆಲ್ ಉದ್ಯಮವನ್ನು ಕೂಡ ಶುರುಮಾಡಿದ್ದರು, ಆದರೆ ಪಾರ್ಟ್ನರ್ ಜೊತೆ ಹೊಂದಾಣಿಕೆ ಆಗದಿದ್ದರಿಂದ ಉದ್ಯಮದಿಂದ ಹೊರ ಬಂದಿದ್ದಾರೆ.