ಮದುವೆ ಸಂಭ್ರಮದಲ್ಲಿರೋ ಬಿಗ್ ಬಾಸ್ ಕ್ಯಾತಿಯ ಮಾತಿನ ಮಲ್ಲ ಒಳ್ಳೆ ಹುಡುಗ ಪ್ರಥಮ್ ದೆವ್ವದ ಜೊತೆ ಫಸ್ಟ್ ನೈಟ್ ಮಾಡಿಕೊಳ್ಳಲು ರೆಡಿ ಆಗಿದ್ದಾರೆ.
ಹೌದು, ನಟ ಪ್ರಥಮ್ ಫಸ್ಟ್ ನೈಟ್ ವಿಥ್ಎಂ ದೆವ್ವ ಎಂಬ ಹೊಸ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಾವೇ ಕಥೆ ಬರೆದಿರೋ ಹಾರರ್ ವಿಥ್ ಕಾಮಿಡಿ ಜಾನರ್ ಚಿತ್ರದಲ್ಲಿ ನಾಯಕನಾಗಿ ಬಣ್ಣ ಹಚ್ಚಲಿದ್ದಾರೆ. ಇತ್ತೀಚೆಗಷ್ಟೇ ಬಂಡೆ ಮಾಹಾಂಕಾಳಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದೆ. ಸ್ಯಾಂಡಲ್ ವುಡ್ ನ ಹಿರಿಯ ನಟ ಶ್ರೀನಿವಾಸ ಮೂರ್ತಿ ಅವರು ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದರು.
ಚಿತ್ರದಲ್ಲಿ ಒಳ್ಳೆ ಹುಡುಗ ಪ್ರಥಮ್ ನಾಯಕನಾಗಿ ನಟಿಸುತ್ತಿದ್ದು, ಅವರಿಗೆ ನಾಯಕಿಯಾಗಿ ನಿಖಿತ ಅವರು ಬಣ್ಣ ಹಚ್ಚಿದ್ದಾರೆ. ಇನ್ನೂ ಹಿರಿಯ ನಟ ಶ್ರೀನಿವಾಸ ಮೂರ್ತಿ, ಹರೀಶ್ ರಾಜ್,ತನುಜಾ, ಮಾನ್ಯ ಸಿಂಗ್ ಅವರು ತಾರಾ ಬಳಗದಲ್ಲಿದ್ದಾರೆ.
ಈ ವಾರದಲ್ಲಿ ಹಸೆ ಮಣೆ ಏರಲು ಸಜ್ಜಗಿರುವ ಪ್ರಥಮ್ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿರುವುದಕ್ಕೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಕಳೆದವಾರ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಚ್ಚಿಕೊಂಡಿದ್ದ ಪ್ರಥಮ್, ಮುಂದಿನ ವಾರ ಮದುವೆ ಅಲ್ಲೇ ಬಂದು ಆಶೀರ್ವಾದ ಮಾಡಬೇಕು ಅಂತೇನೂ ಇಲ್ಲ. ಕರೆಯೋಕೆ ಸಂಭ್ರಮವೂ ಇಲ್ಲ. ಆಹ್ವಾನ ಪತ್ರಿಕೆ ತಲುಪಿಸೋದೆ ಹರಸಾಹಸ. ಹಾಗಂತ ಸುಮ್ಮನೆ ಫಾರ್ವರ್ಡ್ ಮೆಸೇಜ್ ಹಾಕಿ ನಿಮ್ಮನ್ನ ಮದುವೆಗೆ ಕಾಟಚಾರಕ್ಕೆ ಕರೆಯೋದಿಲ್ಲ ಈಗ ಎಲ್ಲಿರ್ತಿರೋ ಅಲ್ಲಿಂದಲೇ ಹಾರೈಸಿ. ಅದ್ದೂರಿಯಾಗಿ ಆಗಬಹುದಿತ್ತು. ಆದರೆ ನನಗೆ ಆಸಕ್ತಿ ಇಲ್ಲ, ಸರಳವಾಗಿ ಆಗ್ತಿರೋ ಕಾರಣ ನೀವು ಇದ್ದಲ್ಲಿಯೇ ಹಾರೈಸಿ ಎಂದು ತಮ್ಮದೇ ಸ್ಟೈಲ್ ನಲ್ಲಿ ಮದುವೆ ಬಗೆಗಿನ ಅಪ್ಡೇಟ್ ನೀಡಿದ್ದರು.