ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ ಮೊನ್ನೆಯಷ್ಟೇ ಹೊಸಬಾಳಿಗೆ ಕಾಲಿಟ್ಟಿದ್ದಾರೆ. ಸಪ್ತಪದಿ ತುಳಿದ ಮೂರೆ ದಿನಕ್ಕೆ ಒಳ್ಳೆ ಹುಡುಗ ಸಿನಿಮಾ ಶೂಟಿಂಗ್ ಗೆ ಹಾಜರಾಗಿದ್ದಾರೆ.
ಮದುವೆಯ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಪ್ರಥಮ್ ನೆನ್ನೆ ಮದುವೆಯಾಯ್ತು. ಸರಳವಾದ ಮದುವೆ 150 ಜನ ಕೂರಬಹುದಾದ ಪುಟ್ಟ ಚೌಟ್ರಿ, 300 – 400 ಜನ ಹರಸಿರಬಹುದೇನೋ, ಆಡಂಬರವಿಲ್ಲದೇ, ಯಾರ ಕಣ್ಣು ಕುಕ್ಕದಂತೆ ಆಯ್ತು. ನನ್ನ ಕಡೆಯಿಂದ ಅಶ್ವಿನಿ ಮೇಡಂ, ಧೃವ ಸರ್ಜಾ ಸರ್ ಸಹಿತ ಕೆಲ ಹೃದಯ ಶ್ರೀಮಂತರ ಆಶಿರ್ವಾದ ಪಡೆದ್ವಿ.
ನೆನ್ನೆಯಿಂದ ಕನಿಷ್ಟ 5000 ಕ್ಕೂ ಹೆಚ್ಚು ಜನ ಕಾಲ್, ಮೆಸೆಜ್ ಮಾಡ್ತಾನೇ ಇದಾರೆ. ಪ್ರಥಮ್ ನೀವು ಮಾಡಿದ್ದು ಮೋಸ, ನಿಮ್ಗೆ ಏನೋ ಗಿಫ್ಟ್ ಕೊಡಬೇಕು ಅಂತಿದ್ವಿ ಅಂತಾ. ನಾನು ಸಮಾಧಾನ ಹೇಳಿ ಸಾಕಾಗಿದೆ. ಇಲ್ಲಿಯವರೆಗೆ ಮದುವೆಗೆ ಬಂದಿರೋದು ಸಂಬಂಧದಿಂದ ಎರಡು ಉಂಗುರ, ಒಂದು ಚೈನ್ ಅಷ್ಟೇ. ನಿಮ್ಗೆ ಏನಾದ್ರೂ ಕೊಡಲೇಬೇಕೆಂದವರು ನಿಮ್ಮ ಸುತ್ತಮುತ್ತಲಿನ ನಾಲ್ಕು ಜನರಿಗೆ ಎರಡು ಹೊತ್ತು ಊಟ ಮಾಡಿಸಿ. ಪ್ರಥಮ್ ಗೆ ಕೊಟ್ಟೆ ಎಂದುಕೊಂಡು ಖುಷಿ ಪಡಿ. ಅದೇ ಆಶಿರ್ವಾದ.
ಕಾರ್ತಿಕ ಮಾಸ ಇರುವುದರಿಂದ ಸಧ್ಯಕ್ಕೆ ಯಾವುದೇ ಬೀಗೆ ಊಟ (ನಾನ್ ವೆಜ್) ಇರುವುದಿಲ್ಲ. ಬೆಂಗಳೂರಿನ ನನ್ನ ಆಪ್ತರಿಗೆ ವಿಶೇಷ ರಿಸೆಪ್ಷನ್ ಇರಲ್ಲ. ಯಾರಿಗೂ ನಾನು ಊಟ ಹಾಕ್ತಾ ಇಲ್ಲ. ನನ್ನ ಬಳಿ ದುಡ್ಡಿಲ್ಲ. ನನಗೆ ಆಸಕ್ತಿಯೂ ಇಲ್ಲ. ನಿಮ್ಮವ್ವ, ಅಪ್ಪ ಹೆಂಡ್ತಿಗೆ ಹೇಳ್ಬಿಟ್ಟು ಸ್ವೀಟ್ ಮಾಡಿಸಿಕೊಂಡು ತಿನ್ನಿ. ವಿಶ್ ಮಾಡಬೇಕನ್ಸಿದ್ರೆ ಮಾಡಿ, ಇಲ್ಲ ಅಂದ್ರೆ ಮಾಮೂಲಿ ಗೊತ್ತಲ್ಲಾ ಯುಟೂಬ್, ಸೋಶಿಯಲ್ ಮಿಡಿಯಾದಲ್ಲಿ ಬಾಯಿಗೆ ಬಂದಂತೆ ಕಮೆಂಟ್ ಹಾಕೊಂಡು ಚೆನ್ನಾಗಿರಿ. ಸಧ್ಯಕ್ಕೆ ಕರ್ನಾಟಕದ ಅಳಿಯ, ಫಸ್ಟ್ ನೈಟ್ ವಿಥ್ ದೆವ್ವ ಸಿನಿಮಾ ಮುಗಿಸೋದು ನನ್ನ ಗುರಿ. ನಾಳಿದ್ದಿಂದ ಶೂಟಿಂಗ್ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.